ADVERTISEMENT

FIFA World Cup 2026: ಬ್ರೆಜಿಲ್, ಆಸ್ಟ್ರೇಲಿಯಾಕ್ಕೆ ಅರ್ಹತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜೂನ್ 2025, 3:14 IST
Last Updated 11 ಜೂನ್ 2025, 3:14 IST
<div class="paragraphs"><p>ಪೆರುಗ್ವೆ vs ಬ್ರೆಜಿಲ್</p></div>

ಪೆರುಗ್ವೆ vs ಬ್ರೆಜಿಲ್

   

(ರಾಯಿಟರ್ಸ್ ಚಿತ್ರ)

ಸಾವೊ ಪಾಲೊ: ಮುಂದಿನ ವರ್ಷ ನಡೆಯಲಿರುವ ಫಿಫಾ ಫುಟ್‌ಬಾಲ್ ವಿಶ್ವಕಪ್ 2026 ಟೂರ್ನಿಗೆ ಅರ್ಹತೆ ಗಿಟ್ಟಿಸುವಲ್ಲಿ ಬ್ರೆಜಿಲ್ ಹಾಗೂ ಆಸ್ಟ್ರೇಲಿಯಾ ಯಶಸ್ವಿಯಾಗಿದೆ.

ADVERTISEMENT

ಸಾವೊ ಪಾಲೊದಲ್ಲಿ ನಡೆದ ಅರ್ಹತಾ ಪಂದ್ಯದಲ್ಲಿ ಪೆರುಗ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಬ್ರೆಜಿಲ್ 1-0 ಅಂತರದ ಗೆಲುವು ದಾಖಲಿಸಿತು.

ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್, ವಿಶ್ವಕಪ್‌ನ ಪ್ರತಿ ಆವೃತ್ತಿಯಲ್ಲಿ ಪಾಲ್ಗೊಂಡಿರುವ ಏಕೈಕ ರಾಷ್ಟ್ರವೆನಿಸಿದೆ.

ಮತ್ತೊಂದೆಡೆ ಜೆಡ್ಡಾದಲ್ಲಿ ನಡೆದ ಅರ್ಹತಾ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 2-1 ಗೋಲುಗಳ ಅಂತರದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಅರ್ಹತೆ ಗಿಟ್ಟಿಸಿಕೊಂಡಿತು.

ಏಷ್ಯಾದಿಂದ ಜಪಾನ್ ಈಗಾಗಲೇ ಅರ್ಹತೆ ಪಡೆದುಕೊಂಡಿದೆ.

2026ರ ಫಿಫಾ ಫುಟ್‌ಬಾಲ್ ವಿಶ್ವಕಪ್‌‌ ಉತ್ತರ ಅಮೆರಿಕದ (ಅಮೆರಿಕ, ಮೆಕ್ಸಿಕೊ, ಕೆನೆಡಾ) ಆತಿಥ್ಯದಲ್ಲಿ ನಡೆಯಲಿದೆ. ಆ ಮೂಲಕ ಇದೇ ಮೊದಲ ಬಾರಿಗೆ ಫುಟ್‌ಬಾಲ್ ವಿಶ್ವಕಪ್‌ಗೆ ಮೂರು ರಾಷ್ಟ್ರಗಳು ಆತಿಥ್ಯ ವಹಿಸಲಿವೆ. ಒಟ್ಟು 16 ನಗರಗಳಲ್ಲಿ ಪಂದ್ಯಾವಳಿ ಆಯೋಜನೆಯಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.