ADVERTISEMENT

2025ರ ಹಿನ್ನೋಟ | ಚೆಸ್‌ನಲ್ಲಿ ಗಮನಸೆಳೆದ ದಿವ್ಯಾ ಸಾಧನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 22:30 IST
Last Updated 26 ಡಿಸೆಂಬರ್ 2025, 22:30 IST
   

ಚೆಸ್‌ನಲ್ಲಿ ಭಾರತ ಈ ವರ್ಷ ಮಿಶ್ರಫಲ ಉಂಡಿತು. ಜುಲೈ 28ರಂದು ದಿವ್ಯಾ ದೇಶಮುಖ್ ಅವರು ಮಹಿಳಾ ವಿಶ್ವಕಪ್ ಗೆದ್ದಿರುವುದು ಭಾರತ ಕಂಡ ಪ್ರಮುಖ ಯಶಸ್ಸು. ದಿವ್ಯಾ ಫೈನಲ್‌ನಲ್ಲಿ ಸ್ವದೇಶದ ಕೋನೇರು ಹಂಪಿ ಅವರನ್ನು ಟೈಬ್ರೇಕರಿನಲ್ಲಿ ಮಣಿಸಿದರು.

l ದಿವ್ಯಾ ದೇಶದ 88ನೇ ಗ್ರ್ಯಾಂಡ್‌ಮಾಸ್ಟರ್ ಆದರು. ದಿವ್ಯಾ, ಹಂಪಿ ಜೊತೆ‌ಗೆ ವೈಶಾಲಿ ರಮೇಶಬಾಬು ಅವರು ಸೈಪ್ರಸ್‌ನಲ್ಲಿ (2026 ಮಾರ್ಚ್‌–ಏಪ್ರಿಲ್‌) ನಡೆಯಲಿರುವ ಮಹಿಳಾ ‌ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಪಡೆದರು. ಸಮರಖಂಡದಲ್ಲಿ ನಡೆದ ಮಹಿಳಾ ಫಿಡೆ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿಯನ್ನು ಸತತ ಎರಡನೇ ಬಾರಿ ಗೆದ್ದು ವೈಶಾಲಿ ಅರ್ಹತೆ ಸಂಪಾದಿಸಿದರು

l ಆರ್‌.ಪ್ರಜ್ಞಾನಂದ ಅವರು ಈ ವರ್ಷ ಫಿಡೆ ಸರ್ಕೀಟ್‌ ಟೂರ್ನಿಗಳಲ್ಲಿ ಉತ್ತಮ ಸಾಧನೆ ತೋರಿ, ಮುಂದಿನ ವರ್ಷದ ಕ್ಯಾಂಡಿಡೇಟ್ಸ್ (ಓಪನ್ ವಿಭಾಗ) ಟೂರ್ನಿಗೆ ಅರ್ಹತೆ ಪಡೆದರು. ಅವರು 2026ರ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದ ಭಾರತದ ಏಕಮಾತ್ರ ಆಟಗಾರ. ಟಾಟಾ ಸ್ಟೀಲ್‌ ಮಾಸ್ಟರ್ಸ್‌, ಸೂಪರ್‌ಬೆಟ್‌, ಉಝ್‌ ಚೆಸ್‌ ಕಪ್‌, ಲಂಡನ್‌ ಕ್ಲಾಸಿಕ್‌ ಟೂರ್ನಿಯಲ್ಲಿ ವಿಜೇತರಾದರು. ವಿಶ್ವ ಚಾಂಪಿಯನ್ ಗುಕೇಶ್ ಈ ವರ್ಷ ಗಮನಸೆಳೆಯಲಿಲ್ಲ

ADVERTISEMENT

l ಪಣಜಿಯಲ್ಲಿ ನವೆಂಬರ್‌ನಲ್ಲಿ ನಡೆದ ಓಪನ್ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ನಿರಾಸೆ ಅನುಭವಿಸಿತು. ಭಾರತದ ಸವಾಲು ಕ್ವಾರ್ಟರ್‌ಫೈನಲ್‌ನಲ್ಲೇ ಅಂತ್ಯಗೊಂಡಿತು

l ಮಧ್ಯಪ್ರದೇಶದ ಸರ್ವಜ್ಞ ಸಿಂಗ್ ಕುಶ್ವಾಹ ಅವರು ಮೂರು ವರ್ಷ, ಏಳು ತಿಂಗಳಿದ್ದಾಗಲೇ ಫಿಡೆ ರೇಟಿಂಗ್ ಪಡೆದರು. ರೇಟಿಂಗ್ ಪಡೆದ ವಿಶ್ವದ ಅತಿ ಕಿರಿಯ ಆಟಗಾರ ಎನಿಸಿದರು

l ದಕ್ಷಿಣ ಕನ್ನಡ ಜಿಲ್ಲೆಯ ಇಶಾ ಶರ್ಮಾ ಈ ವರ್ಷದ ನವೆಂಬರ್‌ನಲ್ಲಿ ಕರ್ನಾಟಕದ ಮೊದಲ ಮಹಿಳಾ ಗ್ರ್ಯಾಂಡ್‌ಮಾಸ್ಟರ್ (WGM) ಎಂಬ ಗೌರವಕ್ಕೆ ಪಾತ್ರರಾದರು

ಪ್ರಜ್ಞಾನಂದ ಆರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.