ಶೆಂಝೆನ್ (ಚೀನಾ): ಹಾಂಗ್‌ಕಾಂಗ್ ಓಪನ್‌ನಲ್ಲಿ ಫೈನಲ್ ತಲುಪಿದ್ದ ಲಕ್ಷ್ಯ ಸೇನ್ ಅವರು ಮಂಗಳವಾರ ಆರಂಭವಾಗುವ ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಹೊಸ ಉತ್ಸಾಹದಿಂದ ಕಣಕ್ಕಿಳಿಯಲಿದ್ದಾರೆ. ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸಹ ಲಯದಲ್ಲಿದ್ದು ಸ್ಥಿರ ಪ್ರದರ್ಶನ ಮುಂದುವರಿಸುವ ಗುರಿಯಲ್ಲಿದ್ದಾರೆ.
ಗಾಯದ ಸಮಸ್ಯೆ ಮತ್ತು ಲಯ ಕಳೆದುಕೊಂಡಿದ್ದ ಲಕ್ಷ್ಯ ಅವರು ಹೋದ ವಾರ, ಎರಡು ವರ್ಷಗಳಲ್ಲಿ ಮೊದಲ ಬಾರಿ ಪ್ರಮುಖ ಟೂರ್ನಿಯೊಂದರ ಫೈನಲ್ ತಲುಪಿದ್ದರು. 24 ವರ್ಷದ ಅಲ್ಮೋರಾದ ಆಟಗಾರ, ಫ್ರಾನ್ಸ್‌ನ ಟೊಮಾ ಜೂನಿಯರ್ ಪೊಪೊವ್ ಅವರನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.
ಎಂಟನೇ ಶ್ರೇಯಾಂಕದ ಸಾತ್ವಿಕ್–ಚಿರಾಗ್ ಜೋಡಿ ಈ ವರ್ಷ ಸ್ಥಿರ ಪ್ರದರ್ಶನ ನೀಡಿದೆ. ಆರು ಟೂರ್ನಿಗಳಲ್ಲಿ ಸೆಮಿಫೈನಲ್, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಬಾರಿ ಕಂಚು, ಕಳೆದ ವಾರ್ ಹಾಂಗ್‌ಕಾಂಗ್‌ನಲ್ಲಿ ರನ್ನರ್ ಅಪ್ ಸ್ಥಾನ ಭಾರತದ ಆಟಗಾರರ ಸಾಧನೆಯಾಗಿದೆ.
ಕಳೆದ ವಾರ ಕೊಡೈ ನರವೋಕಾ ಅವರಿಗೆ ಆಘಾತ ನೀಡಿದ್ದ ಆಯುಷ್ ಶೆಟ್ಟಿ ಅವರೂ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಅನುಭವಿ ಪಿ.ವಿ.ಸಿಂಧು ತಮ್ಮ ಲಯಕ್ಕೆ ಮರಳುವ ತವಕದಲ್ಲಿದ್ದಾರೆ. ಅವರ ಮೊದಲ ಸುತ್ತಿನ ಎದುರಾಳಿ ಡೆನ್ಮಾರ್ಕ್‌ನ ಜೂಲಿ ದವಲ್ ಜಾಕೋಬ್ಸೆನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.