
ವಿಯ್ಕ್ ಆನ್ ಝೀ (ನೆದರ್ಲೆಂಡ್ಸ್): ಅಗ್ರ ಶ್ರೇಯಾಂಕ ಪಡೆದಿರುವ ಭಾರತದ ಆಟಗಾರ ಅರ್ಜುನ್ ಇರಿಗೇಶಿ ಅವರು ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸ್ವದೇಶದ ಆರ್.ಪ್ರಜ್ಞಾನಂದ ಅವರನ್ನು 32 ನಡೆಗಳಲ್ಲಿ ಮಣಿಸಿದರು.
ವಿಶ್ವ ಚಾಂಪಿಯನ್ ಡಿ.ಗುಕೇಶ್ ಇನ್ನೊಂದು ಪಂದ್ಯದಲ್ಲಿ ವಿಶ್ವಕಪ್ ವಿಜೇತ ಜಾವೊಖಿರ್ ಸಿಂದರೋವ್ ಅವರ ಜೊತೆ 78 ನಡೆಗಳ ನಂತರ ಡ್ರಾ ಮಾಡಿಕೊಂಡರು.
ಪರಿಸರ ಹೋರಾಟಗಾರರ ಪ್ರತಿಭಟನೆಯಿಂದಾಗಿ, ವಿಶ್ವದ ಅತಿ ಹಳೆಯ ಈ ಟೂರ್ನಿಯ ಮೊದಲ ಸುತ್ತು ಶನಿವಾರ ಐದು ಗಂಟೆಗಳಷ್ಟು ತಡವಾಗಿ ಆರಂಭವಾಯಿತು.
ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಹ್ಯಾನ್ಸ್ ನೀಮನ್ ಅವರು ಸ್ಲೊವೇನಿಯಾದ ವ್ಲಾದಿಮಿರ್ ಫೆಡೊಸೀವ್ ಜೊತೆ ಡ್ರಾ ಮಾಡಿಕೊಂಡರು. ಪ್ರಮುಖ ಪಡೆಯೊಂದನ್ನು ಕಳೆದುಕೊಳ್ಳುವುದು ಖಚಿತವಾದ ಕಾರಣ 16ನೇ ನಡೆಯಲ್ಲೇ ಫೆಡೊಸೀವ್ ಪಂದ್ಯ ಬಿಟ್ಟುಕೊಟ್ಟರು.
ಜರ್ಮನಿಯ ವಿನ್ಸೆಂಟ್ ಕೀಮರ್, ಡಚ್ ಆಟಗಾರ ಅನಿಶ್ ಗಿರಿ ಅವರನ್ನು ಸೋಲಿಸಿದರು.
ಕಣದಲ್ಲಿರುವ ಭಾರತದ ಮೂರನೇ ಆಟಗಾರ ಅರವಿಂದ ಚಿದಂಬರಂ ಅವರು ಜರ್ಮನಿಯ ಮಥಾಯಸ್ ಬ್ಲೂಬಾಮ್ ಜೊತೆ 41 ನಡೆಗಳಲ್ಲಿ ಅಂಕ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.