ADVERTISEMENT

Tokyo Olympics | ಕೊನೆಯ ಕ್ಷಣ ಮೇರಿಗೆ ರಿಂಗ್ ಡ್ರೆಸ್ ಬದಲಿಸಲು ಹೇಳಿದ್ದೇಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2021, 12:08 IST
Last Updated 30 ಜುಲೈ 2021, 12:08 IST
ಮೇರಿ ಕೋಮ್
ಮೇರಿ ಕೋಮ್   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರೆಫರಿ ನಿರ್ಣಯದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿರುವ ಭಾರತದ ಹಿರಿಯ ಅನುಭವಿ ಬಾಕ್ಸರ್ ಮೇರಿ ಕೋಮ್, ಈಗ ತಮ್ಮನ್ನು ನಡೆಸಿಕೊಂಡಿರುವ ರೀತಿಯ ಬಗ್ಗೆಯೂ ಅಸಮಾಧಾನವನ್ನು ಹೊರಹಾಕಿದ್ದಾರೆ.

ಗುರುವಾರ ನಡೆದ ನಿರ್ಣಾಯಕ ಪ್ರೀ-ಕ್ವಾರ್ಟರ್‌ಫೈನಲ್‌ ನಡೆಯುವ ಒಂದು ನಿಮಿಷದ ಮೊದಲು ರಿಂಗ್ ಡ್ರೆಸ್ ಬದಲಿಸಲು ಹೇಳಿರುವುದಾಗಿ ಮೇರಿ ಕೋಮ್ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮೇರಿ, 'ಆಶ್ಚರ್ಯಕರ... ರಿಂಗ್ ಡ್ರೆಸ್ ಏನೆಂದು ಯಾರಾದರೂ ವಿವರಿಸಬಹುದೇ? ಪ್ರೀ-ಕ್ವಾರ್ಟರ್‌ಫೈನಲ್‌ ಪಂದ್ಯಕ್ಕೂ ಒಂದು ನಿಮಿಷದ ಮೊದಲು ರಿಂಗ್ ಡ್ರೆಸ್ ಬದಲಿಸುವಂತೆ ಹೇಳಲಾಯಿತು. ಯಾರಾದರೂ ಹೇಳಬಹುದೇ' ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಕಿರಣ್ ರಿಜಿಜು ಮತ್ತು ಒಲಿಂಪಿಕ್ಸ್‌ಗೆ ಟ್ಯಾಗ್ ಮಾಡಿದ್ದಾರೆ.

ಮೇರಿ ಕೋಮ್, ಮಹಿಳೆಯರ 51 ಕೆ.ಜಿ. ವಿಭಾಗದ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಕೊಲಂಬಿಯಾದ ಇಂಗ್ರಿಟಾ ವೆಲೆನ್ಸಿಯಾ ವಿರುದ್ಧ 2-3 ರಿಂದ ಮೇರಿ ಸೋತಿದ್ದರು. ಎರಡು ರೌಂಡ್ ಗೆದ್ದ ಹೊರತಾಗಿಯೂ ರೆಫರಿ ತಮ್ಮ ವಿರುದ್ಧ ನೀಡಲಾದ ತೀರ್ಪಿನ ಬಗ್ಗೆ ಮೇರಿ ಕೋಮ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Tokyo Olympics | ಪ್ರಿ-ಕ್ವಾರ್ಟರ್‌ನಲ್ಲಿ ಎಡವಿದ ಮೇರಿ ಕೋಮ್ ಅಭಿಯಾನ ಅಂತ್ಯ | Prajavani

ಕಳಪೆ ತೀರ್ಪಿಗಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್‌(ಐಒಸಿ) ಬಾಕ್ಸಿಂಗ್ ವಿರುದ್ಧ ಹರಿಹಾಯ್ದಿದ್ದರು. 'ಈ ಹುಡುಗಿ (ವೆಲೆನ್ಸಿಯಾ)ಯನ್ನು ಈ ಹಿಂದೆ ಎರಡು ಬಾರಿ ಸೋಲಿಸಿದ್ದೇನೆ. ರೆಫರಿ ಆಕೆಯ ಕೈಯೆತ್ತಿ ಗೆಲುವು ಘೋಷಿಸಿದಾಗ ನನಗೆ ನಂಬಲು ಸಾಧ್ಯವೇ ಆಗಲಿಲ್ಲ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.