ADVERTISEMENT

ನೀರಜ್‌ಗೆ ಚಿನ್ನ: ‘ಮೇರೇ ದೇಶ್ ಕೀ ಧರ್ತೀ’ ಹಾಡಿ, ಕುಣಿದು ಸಂಭ್ರಮಿಸಿದ ಗವಾಸ್ಕರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2021, 14:24 IST
Last Updated 7 ಆಗಸ್ಟ್ 2021, 14:24 IST
ನೀರಜ್ ಚೋಪ್ರಾ (ಎಎಫ್‌ಪಿ ಚಿತ್ರ)
ನೀರಜ್ ಚೋಪ್ರಾ (ಎಎಫ್‌ಪಿ ಚಿತ್ರ)   

ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋದಲ್ಲಿ ಭಾರತದ ಹೆಮ್ಮೆಯ ಅಥ್ಲೀಟ್ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿರುವುದಕ್ಕೆ ಎಲ್ಲೆಡೆ ಸಂಭ್ರಮ ವ್ಯಕ್ತವಾಗುತ್ತಿದೆ. ವಿಶೇಷ ರೀತಿಯ ಸಂಭ್ರಮಾಚರಣೆಗಳ ಬಗ್ಗೆಯೂ ವರದಿಯಾಗುತ್ತಿವೆ.

ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ‘ಮೇರೇ ದೇಶ್ ಕೀ ಧರ್ತೀ ಸೋನಾ ಉಗ್ಲೇ’ ಹಾಡು ಹಾಡಿ ಕುಣಿದು ಸಂಭ್ರಮಿಸುತ್ತಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಾಟಿಂಗ್‌ಹ್ಯಾಂನಲ್ಲಿ ನಡೆಯುತ್ತಿರುವ ಭಾರತ – ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುನಿಲ್ ಗವಾಸ್ಕರ್ ಅವರಿಗೆ ನೀರಜ್ ಚೋಪ್ರಾ ಚಿನ್ನ ಗೆದ್ದ ವಿಚಾರ ತಿಳಿದಾಗ ಸಂಭ್ರಮದ ಭಾವವನ್ನು ತಡೆಹಿಡಿಯಲಾಗಲಿಲ್ಲ. ತಕ್ಷಣವೇ ಎದ್ದುನಿಂತ ಅವರು, 1967ರ ಮನೋಜ್ ಕುಮಾರ್ ಅಭಿನಯದ ‘ಉಪಕಾರ್’ ಸಿನಿಮಾದ, ಮಹೇಂದ್ರ ಕಪೂರ್ ಹಾಡಿದ್ದ ‘ಮೇರೇ ದೇಶ್ ಕೀ ಧರ್ತೀ’ ಹಾಡು ಹಾಡಿ ಕುಣಿಯಲಾರಂಭಿಸಿದರು. ಅಷ್ಟರಲ್ಲಿ ಅವರೊಂದಿಗಿದ್ದವರೂ ಜತೆ ಹೆಜ್ಜೆಹಾಕಿ ಸಂಭ್ರಮಿಸಿದರು. ಈ ದೃಶ್ಯದ ತುಣುಕನ್ನು ಅನೇಕ ಮಂದಿ ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.