ADVERTISEMENT

ಕಿಕ್ಕಿರಿದು ತುಂಬಿರುವ 1.3 ಲಕ್ಷ ಅಭಿಮಾನಿ ಬಳಗವನ್ನು ಮೌನವಾಗಿಸುವ ಗುರಿ: ಕಮಿನ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2023, 9:28 IST
Last Updated 18 ನವೆಂಬರ್ 2023, 9:28 IST
<div class="paragraphs"><p>ಪ್ಯಾಟ್ ಕಮಿನ್ಸ್</p></div>

ಪ್ಯಾಟ್ ಕಮಿನ್ಸ್

   

(ರಾಯಿಟರ್ಸ್ ಚಿತ್ರ)

ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲ ವಿಭಾಗದಲ್ಲೂ ಅಮೋಘ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫಿಲ್ಡೀಂಗ್ ವಿಭಾಗದಲ್ಲಿ ಛಾಪು ಮೂಡಿಸಿದೆ.

ADVERTISEMENT

ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಕೇವಲ ಟೀಮ್ ಇಂಡಿಯಾದ ಆಟಗಾರರಷ್ಟೇ ಅಲ್ಲ, ಗ್ಯಾಲರಿಯಲ್ಲಿ ಕಿಕ್ಕಿರಿದು ತುಂಬಿರುವ 1.30 ಲಕ್ಷ ಅಭಿಮಾನಿಗಳ ಸವಾಲು ಕೂಡಾ ಎದುರಾಗಲಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ಫೈನಲ್ ಪಂದ್ಯ ನಡೆಯಲಿದ್ದು, 1.30 ಲಕ್ಷ ಆಸನ ಸಾಮರ್ಥ್ಯವನ್ನು ಹೊಂದಿದೆ. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಛಲವನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಹೊಂದಿದ್ದಾರೆ.

'ಅಭಿಮಾನಿಗಳ ಬೆಂಬಲ ನಿಸ್ಸಂಶಯವಾಗಿಯೂ ಏಕಪಕ್ಷೀಯವಾಗಿರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇಷ್ಟು ದೊಡ್ಡ ಅಭಿಮಾನಿಗಳ ಬಳಗವನ್ನು ಮೌನವಾಗಿಸುವುದರಲ್ಲಿ ಸಿಗುವ ತೃಪ್ತಿ ಬೇರೊಂದಿಲ್ಲ. ಅದುವೇ ನಮ್ಮ ಗುರಿ' ಎಂದು ಪಂದ್ಯಕ್ಕೂ ಮುನ್ನ ಕಮಿನ್ಸ್ ಹೇಳಿದ್ದಾರೆ.

ಸ್ಟೇಡಿಯಂ 1.30 ಲಕ್ಷ ಅಭಿಮಾನಿಗಳಿಂದ ತುಂಬಿಕೊಂಡಿರಲಿದ್ದು, ಅತಿಥೇಯ ತಂಡವನ್ನು ಬೆಂಬಲಿಸಲಿದ್ದಾರೆ ಎಂಬುದರ ಅರಿವು ನಮಗಿದೆ. ಭಾರತ ತಂಡವು ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದು, ಎಲ್ಲ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಈ ಎಲ್ಲ ಸವಾಲುಗಳನ್ನು ಎದುರಿಸಲು ನಾವು ಸಿದ್ದರಾಗಿದ್ದೇವೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.