ADVERTISEMENT

ಮಡಚಬಲ್ಲ ಡಿವೈಸ್ ಪರೀಕ್ಷಿಸುತ್ತಿರುವ ಆ್ಯಪಲ್: ಕುವೊ ವರದಿ

ಐಎಎನ್ಎಸ್
Published 4 ಏಪ್ರಿಲ್ 2022, 11:04 IST
Last Updated 4 ಏಪ್ರಿಲ್ 2022, 11:04 IST
   

ಆ್ಯಪಲ್, 9 ಇಂಚಿನ ಮಡಚಬಲ್ಲ ಡಿವೈಸ್ ಒಂದನ್ನು ಪರಿಶೀಲಿಸುತ್ತಿದೆ. ಟಿಎಫ್‌ ಇಂಟರ್‌ನ್ಯಾಶನಲ್ ಸೆಕ್ಯುರಿಟೀಸ್ ಸಂಸ್ಥೆಯ ಮಿಂಗ್–ಚಿ ಕುವೊ ಪ್ರಕಾರ, ಹೊಸ ಆ್ಯಪಲ್ ಮಡಚಬಲ್ಲ (Foldable) ಡಿವೈಸ್ 2025ರ ವೇಳೆಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ ಎಂದಿದ್ದಾರೆ.

2024ರ ವೇಳೆಗೆ ಮಡಚಬಲ್ಲ ಆ್ಯಪಲ್ ಡಿವೈಸ್ ಮಾರುಕಟ್ಟೆಗೆ ಬರಬಹುದು ಎಂದು ಹೇಳಲಾಗಿತ್ತಾದರೂ, 2025ರಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಾರುಕಟ್ಟೆ ವಿಶ್ಲೇಷಕ ಕುವೊ, 9 ಇಂಚಿನ ಮಡಚಬಲ್ಲ ಡಿವೈಸ್‌ ಅನ್ನು ಆ್ಯಪಲ್ ಪರಿಶೀಲನೆ ನಡೆಸುತ್ತಿದೆ. ನಂತರದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ADVERTISEMENT

ಈಗಾಗಲೇ ಪ್ರತಿಸ್ಪರ್ಧಿ ಕಂಪನಿಗಳ ಮಡಚಬಲ್ಲ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಆ್ಯಪಲ್ ಇನ್ನೂ ಪರೀಕ್ಷಾರ್ಥ ಹಂತದಲ್ಲಿದೆ. ಹೀಗಾಗಿ ಹೊಸ ಡಿವೈಸ್ ಬಿಡುಗಡೆ ತಡವಾಗಬಹುದು ಎನ್ನಲಾಗಿದೆ.

ಹೊಸ ಡಿವೈಸ್ ಕುರಿತಂತೆ ಆ್ಯಪಲ್ ಪೂರೈಕೆದಾರರ ಜತೆ ಸಮಾಲೋಚನೆ ನಡೆಸುತ್ತಿದೆ. ಎಲ್‌ಜಿ ಕಂಪನಿ ಸಹಯೋಗದಲ್ಲಿ ಆ್ಯಪಲ್, ಮಡಚಬಲ್ಲ ಓಎಲ್‌ಇಡಿ ಡಿಸ್‌ಪ್ಲೇ ಅಭಿವೃದ್ಧಿಪಡಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.