ADVERTISEMENT

ದೀಪಾವಳಿಗೆ ವಿಶೇಷ ಕೊಡುಗೆ ಘೋಷಿಸಿದ ಆ್ಯಪಲ್: ಐಫೋನ್, ಮ್ಯಾಕ್ ಖರೀದಿಗೆ ಡಿಸ್ಕೌಂಟ್

ಆ್ಯಪಲ್ ಹಬ್ಬದ ವಿಶೇಷ ಡಿಸ್ಕೌಂಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2022, 9:26 IST
Last Updated 27 ಸೆಪ್ಟೆಂಬರ್ 2022, 9:26 IST
   

ಬೆಂಗಳೂರು: ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಇ ಕಾಮರ್ಸ್ ತಾಣಗಳಲ್ಲಿ ಹಬ್ಬದ ವಿಶೇಷ ವಾರ್ಷಿಕ ಮಾರಾಟ ನಡೆಯುತ್ತಿರುವ ಬೆನ್ನಲ್ಲೇ, ದೇಶದಲ್ಲಿ ದೀಪಾವಳಿ ಮತ್ತು ದಸರಾ ವಿಶೇಷ ಮಾರಾಟ ಮೇಳವನ್ನು ಆ್ಯಪಲ್ ಆರಂಭಿಸಿದೆ.

ಆ್ಯಪಲ್ ಐಫೋನ್, ಮ್ಯಾಕ್‌ಬುಕ್, ಐಪ್ಯಾಡ್ ಮತ್ತು ಗ್ಯಾಜೆಟ್, ಅಕ್ಸೆಸ್ಸರಿ ಖರೀದಿಗೆ ವಿಶೇಷ ಡಿಸ್ಕೌಂಟ್ ದೊರೆಯಲಿದೆ.

ಅಲ್ಲದೆ, ಎಚ್‌ಡಿಎಫ್‌ಸಿ ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್ ಕ್ರೆಡಿಟ್ ಕಾರ್ಡ್ ಬಳಕೆಗೆ ₹7,000 ವರೆಗೆ ಡಿಸ್ಕೌಂಟ್ ದೊರೆಯಲಿದೆ. ಉಳಿದಂತೆ, ನೋ ಕಾಸ್ಟ್ ಇಎಂಐ ಕೊಡುಗೆಗಳೂ ದೊರೆಯಲಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಆ್ಯಪಲ್, ಟ್ರೇಡ್ ಇನ್ ಎಕ್ಸ್‌ಚೇಂಜ್ ಆಫರ್ ಕೂಡ ಇದ್ದು, ಹಳೆಯ ಐಫೋನ್ ಬದಲಿಸಿ, ಹೊಸದು ಕೊಳ್ಳುವ ಆಯ್ಕೆಯನ್ನೂ ನೀಡಿದೆ.

ಸೋಮವಾರದಿಂದ ಆ್ಯಪಲ್ ಹಬ್ಬದ ವಿಶೇಷ ಮಾರಾಟ ಆರಂಭಿಸಿದೆ. ಅಕ್ಟೋಬರ್ 24ರವರೆಗೆ ಕೊಡುಗೆಗಳು ಇರಲಿವೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.