ADVERTISEMENT

OpenAI ಖರೀದಿಗೆ ಇಲಾನ್ ಮಸ್ಕ್ ನೇತೃತ್ವದ ಹೂಡಿಕೆದಾರರು ಉತ್ಸುಕತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2025, 2:47 IST
Last Updated 11 ಫೆಬ್ರುವರಿ 2025, 2:47 IST
<div class="paragraphs"><p>ಓಪನ್‌ಎಐ, ಇಲಾನ್ ಮಸ್ಕ್</p></div>

ಓಪನ್‌ಎಐ, ಇಲಾನ್ ಮಸ್ಕ್

   

(ರಾಯಿಟರ್ಸ್ ಚಿತ್ರ)

ಲಾಸ್ ಏಂಜಲೀಸ್: ಅಮೆರಿಕದ ಖ್ಯಾತ ಉದ್ಯಮಿ, ಟೆಸ್ಲಾ ಕಂಪನಿಯ ಸಿಇಒ ಇಲಾನ್‌ ಮಸ್ಕ್‌ ನೇತೃತ್ವದ ಹೂಡಿಕೆದಾರರು, ಓಪನ್‌ಎಐ (OpenAI) ಸಂಸ್ಥೆಯನ್ನು ಖರೀದಿಸಲು ಪ್ರಸ್ತಾಪ ಮುಂದಿರಿಸಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಇಲಾನ್ ಮಸ್ಕ್ ನೇತೃತ್ವದ ಹೂಡಿಕೆದಾರರು, ಭಾರಿ ಮೊತ್ತಕ್ಕೆ ($97.4 billion) ಓಪನ್‌ಎಐ ಖರೀದಿಸಲು ಉತ್ಸುಕತೆ ತೋರಿದ್ದಾರೆ. ಆದರೆ ಈ ಆಫರ್ ಅನ್ನು ಓಪನ್‌ಎಐ ಸಿಇಎ ಸ್ಯಾಮ್ ಆಲ್ಟ್‌ಮನ್ ತಿರಸ್ಕರಿಸಿದ್ದಾರೆ.

ಮಸ್ಕ್ ಒಡೆತನದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು 'ನೊ ಥ್ಯಾಂಕ್ ಯು, ನೀವು ಬಯಸುವುದಾದರೆ $9.74 ಬಿಲಿಯನ್‌ಗೆ ಟ್ವಿಟರ್ ಅನ್ನೇ ಖರೀದಿಸುತ್ತೇವೆ' ಎಂದು ಉತ್ತರಿಸಿದ್ದಾರೆ.

'xAI' ಎಂಬ ಎಐ ಸ್ಟಾರ್ಟ್‌ಅಪ್ ಕಂಪನಿಯನ್ನು ಇಲಾನ್ ಮಸ್ಕ್ ಹೊಂದಿದ್ದಾರೆ. 2022ರಲ್ಲಿ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ಅನ್ನು ಖರೀದಿಸಿದ್ದ ಮಸ್ಕ್, ಬಳಿಕ 'ಎಕ್ಸ್' ಎಂದು ಮರುನಾಮಕರಣ ಮಾಡಿದ್ದರು.

ಓಪನ್‌ಎಐ ಅಭಿವೃದ್ಧಿಪಡಿಸಿರುವ ಚಾಟ್‌ಜಿಪಿಟಿ, ತಂತ್ರಜ್ಞಾನ ವಲಯದಲ್ಲಿ ಸಂಚಲನವನ್ನೇ ಮೂಡಿಸಿದೆ. ಈ ಜನರೇಟಿವ್ ಎಐ ತಂತ್ರಜ್ಞಾನದ ದಿಕ್ಕನ್ನೇ ಬದಲಿಸಿದೆ.

2015ರಲ್ಲಿ ಓಪನ್‌ಎಐ ಆರಂಭಿಸಲು ಮಸ್ಕ್ ಹಾಗೂ ಆಲ್ಟ್‌ಮನ್ ನೆರವಾಗಿದ್ದರು. ಆದರೆ ಮಂಡಳಿ ಸದಸ್ಯರಲ್ಲಿ ಭಿನ್ನಮತ ಉಂಟಾಗಿ ಮಸ್ಕ್ ಅವರು 2018ರಲ್ಲಿ ರಾಜೀನಾಮೆ ನೀಡಿದ್ದರು.

ಓಪನ್‌ಎಐ ಆರಂಭಿಕ ಹೂಡಿಕೆದಾರರಲ್ಲಿ ಒಬ್ಬರಾಗಿರುವ ಮಸ್ಕ್, ಬಳಿಕ ಕಾನೂನು ಹೋರಾಟಕ್ಕೆ ಮುಂದಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.