ಲಾವಾ ಸ್ಮಾರ್ಟ್‌ಫೋನ್
ಬೆಂಗಳೂರು: ಸ್ಮಾರ್ಟ್‌ಫೋನ್ ತಯಾರಿಕ ಕಂಪನಿಯಾದ ‘ಲಾವಾ ಇಂಟರ್‌ನ್ಯಾಷನಲ್ ಲಿಮಿಟೆಡ್’ ಯುವ ಸರಣಿಯ ಹೊಸ ಮಾದರಿಯನ್ನು ಬಳಕೆದಾರರಿಗೆ ಪರಿಚಯಿಸಿದೆ.
ಈಚೆಗೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ದರ ₹6,999ರಷ್ಟಿದೆ.
ಇದರೊಂದಿಗೆ ಭಾರತದಲ್ಲಿ UNISOC 1606 ಚಿಪ್‌ಸೆಟ್ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿರುವ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸ್ಮಾರ್ಟ್‌ಫೋನ್ ಸುಧಾರಿತ ಕಾರ್ಯಕ್ಷಮತೆ, ಗುಣಮಟ್ಟ, ಉತ್ತಮ ಬ್ಯಾಟರಿ ದಕ್ಷತೆಯನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.
ವೈಶಿಷ್ಟ್ಯಗಳು...
• ಪೂರ್ಣ ಎಚ್‌ಡಿ ಸ್ಕ್ರೀನ್ ರೆಸಲ್ಯೂಶನ್ ಮತ್ತು 90Hzನ ರಿಫ್ರೆಶ್ ದರದೊಂದಿಗೆ 6.56 ಇಂಚಿನ ಡಿಸ್‌ಪ್ಲೇ
• ಯೂನಿಸೊಕ್ 1606 ಚಿಪ್‌ಸೆಟ್ ಹೊಂದಿರುವ ಎಲ್ಲ ಅಪ್ಲಿಕೇಷನ್‌ಗಳಲ್ಲೂ ಸದೃಢ ಕಾರ್ಯಕ್ಷಮತೆ
• 8 ಜಿಬಿ ರ್‍ಯಾಮ್, 128 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯ
• 5000 ಎಂಎಎಚ್ ಬ್ಯಾಟರಿ ಸಾರ್ಮಥ್ಯ
• ಕ್ಯಾಮೆರಾ: 50MP AI
• 50 ಎಂಪಿ ಸೆಲ್ಫಿ ಕ್ಯಾಮೆರಾ
ಲಭ್ಯತೆ
ಈ ಸ್ಮಾರ್ಟ್‌ಫೋನ್ ಬಿಳಿ, ನೀಲಿ ಮತ್ತು ಕಪ್ಪು ಹೊಳಪಿನ ಆಕರ್ಷಕ ಬಣ್ಣದ ಆಯ್ಕೆಗಳನ್ನು ಒಳಗೊಂಡಿದ್ದು, ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈಗಾಗಲೇ ಈ ಫೋನ್ ಖರೀದಿಗೆ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.