ADVERTISEMENT

ಮೊಟೊರೊಲಾದಿಂದ ಮೊಟೊ ಜಿ5ಜಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 15:42 IST
Last Updated 30 ನವೆಂಬರ್ 2020, 15:42 IST
   
""

ಬೆಂಗಳೂರು: ಅತ್ಯುತ್ತಮ ಗುಣಮಟ್ಟ ಹಾಗೂ ವೈಶಿಷ್ಟ್ಯಗಳನ್ನೊಳಗೊಂಡ ತನ್ನ ಹೊಸ ಉತ್ಪನ್ನ ಮೊಟೊ ಜಿ5ಜಿ (moto G5g) ಸ್ಮಾರ್ಟ್‌ಫೋನ್‌ ಅನ್ನು ಮೊಟೊರೊಲಾ ಇಂದು ಬಿಡುಗಡೆ ಮಾಡಿದೆ. ಅಲ್ಟ್ರಾ–ಫಾಸ್ಟ್‌ 5ಜಿ ನೆಟ್‌ವರ್ಕ್‌ ವ್ಯವಸ್ಥೆ ಹೊಂದಿರುವ ಈ ಸ್ಮಾರ್ಟ್‌ಫೋನ್‌, ಕ್ವಾಲ್‌ಕಮ್‌ ಸ್ನ್ಯಾಪ್‌ಡ್ರ್ಯಾಗನ್ 750 ಪ್ರೊಸೆಸರ್‌ ಅನ್ನು ಒಳಗೊಂಡಿದೆ.

ಮೊಟೊರೊಲಾದ ಜಿ ಸರಣಿಯ ಉತ್ಪನ್ನಗಳು ವಿಶ್ವದಾದ್ಯಂತ ಲಭ್ಯವಿದ್ದು, ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸುತ್ತಿವೆ. ಇದೀಗ ಮಾರುಕಟ್ಟೆಗೆ ಬಂದಿರುವ, ಅತ್ಯುತ್ತಮ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳನ್ನೊಳಗೊಂಡ ಮೊಟೊ ಜಿ 5ಜಿ ಕೂಡ ಅದೇ ಸಾಲಿಗೆ ಸೇರಲಿದೆ. ಈ ಸ್ಮಾರ್ಟ್‌ಫೋನ್‌, 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಎರಡು ದಿನಗಳ ಕಾಲ ಬಾಳಿಕೆ ಬರಲಿದೆ. ಉಳಿದಂತೆ 6ಜಿಬಿ ರ್‍ಯಾಮ್ ಮತ್ತು 128 ಜಿಬಿ ಇನ್‌ಬಿಲ್ಟ್ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಎಚ್‌ಡಿಆರ್‌10 ಡಿಸ್ಪ್ಲೇ, 48 ಎಂಪಿ ಕ್ಯಾಮೆರಾ ಸೌಲಭ್ಯವೂಇರುವುದರಿಂದ ಸಾಕಷ್ಟು ಭರವಸೆ ಮೂಡಿಸಿದೆ.

128 ಜಿಬಿ ಇನ್‌ಬಿಲ್ಟ್ ಸ್ಟೋರೇಜ್; ವೇಗದ ಚಾರ್ಜಿಂಗ್‌
ಸಾಕಷ್ಟು ವಿಡಿಯೊ, ಚಿತ್ರಗಳು ಹಾಗೂ ದಾಖಲೆಗಳನ್ನು ಸಂಗ್ರಹಿಸಿಕೊಳ್ಳಲು ಸಾಧ್ಯವಾಗುವಂತೆ 128 ಜಿಬಿ ಇನ್‌ಬಿಲ್ಟ್‌ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ಇದನ್ನು 1ಟಿಬಿ ವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.

ADVERTISEMENT

5000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್‌ಫೋನ್‌, ಸೂಪರ್‌ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನೂ ಒಳಗೊಂಡಿದೆ. ಕೇವಲ 15 ನಿಮಿಷ ಜಾರ್ಜ್‌ ಮಾಡಿದರೆ, ಬ್ಯಾಟರಿ ಸುಮಾರು 10 ಗಂಟೆಗಳ ವರೆಗೆ ಉಳಿಯಲಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ
ಕಳೆದ ಆವೃತ್ತಿಗಿಂತ ಶೇ.20 ರಷ್ಟು ಹೆಚ್ಚು ವೇಗವಾಗಿ ಕಾರ್ಯಾಚರಿಸುವ ಸ್ನ್ಯಾಪ್‌ಡ್ರ್ಯಾಗನ್ 750 ಪ್ರೊಸೆಸರ್‌ ಹೊಂದಿರುವ ಮೊಟೊ ಜಿ5ಜಿ, ವೇಗದ 5ಜಿ ನೆಟ್‌ವರ್ಕ್‌ ಸಾಮರ್ಥ್ಯ ಹೊಂದಿದೆ. ಸದ್ಯ ಗ್ರೇ ಮತ್ತು ಸಿಲ್ವರ್‌ ಬಣ್ಣದಲ್ಲಿ ಲಭ್ಯವಿರುವ ಈ ಮೊಬೈಲ್‌ ಭಾರತದಲ್ಲಿ ₹ 20,999ಕ್ಕೆ ಲಭ್ಯವಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಕಾರ್ಡ್‌ಗಳನ್ನು ಬಳಸಿ ಖರೀದಿಸುವವರಿಗೆ ಸಾವಿರ ರೂ. ರಿಯಾಯಿತಿ ಸಿಗಲಿದೆ. ಹೀಗಾಗಿ 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗುವ 5ಜಿ ಸ್ಮಾರ್ಟ್‌ಫೋನ್‌ ಎನಿಸಿಕೊಂಡಿದೆ. ಡಿಸೆಂಬರ್‌ 7ರ ಮಧ್ಯಾಹ್ನ 12ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಕೊಂಡುಕೊಳ್ಳಲು ಲಭ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.