ADVERTISEMENT

AI ಎಲ್ಲದಕ್ಕೂ ಸೈ,ಆದರೆ ದೆಹಲಿಯ ಸಂಚಾರ ದಟ್ಟಣೆ ಬಗೆಹರಿಸಲು ಸಾಧ್ಯವಾಗಿಲ್ಲ: ಸುನಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2026, 6:39 IST
Last Updated 20 ಫೆಬ್ರುವರಿ 2026, 6:39 IST
<div class="paragraphs"><p>ರಿಷಿ ಸುನಕ್</p></div>

ರಿಷಿ ಸುನಕ್

   

(ಪಿಟಿಐ ಚಿತ್ರ)

ನವದೆಹಲಿ: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದಿಂದ ಅನೇಕ ವಿಷಯಗಳನ್ನು ಮಾಡಬಹುದು. ಆದರೆ ದೆಹಲಿಯ ವಾಹನ ದಟ್ಟಣೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.

ADVERTISEMENT

ದೆಹಲಿಯ ಬ್ರಿಟನ್ ರಾಯಭಾರ ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಲು ತಡವಾಗಿರುವುದಕ್ಕೆ ಕ್ಷಮೆಯಾಚಿಸಿದ ಸುನಕ್, ದೆಹಲಿಯ ಸಂಚಾರ ದಟ್ಟಣೆ ಕುರಿತು ನಗೆ ಚಟಾಕಿ ಹಾರಿಸಿದ್ದಾರೆ.

'ಕ್ಷಮಿಸಿ, ನಾನು ಕೆಲವು ನಿಮಿಷಗಳಷ್ಟು ತಡವಾದೆ. ನನ್ನದೇ ತಪ್ಪು. ಎ.ಐ ಅನೇಕ ಕೆಲಸಗಳನ್ನು ಮಾಡಬಹುದು. ಆದರೂ ದೆಹಲಿಯ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ' ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ರಿಷಿ ಸುನಕ್, 'ಭಾರತ ಎ.ಐ 'ಸೂಪರ್ ಪವರ್‌'ನತ್ತ ಮುನ್ನಡೆಯುತ್ತಿದೆ' ಎಂದು ಪ್ರಶಂಶಿಸಿದ್ದಾರೆ.

'ಈ ವಾರ ಕಂಡುಬಂದಿದ್ದು ಪ್ರಧಾನಿ ಮೋದಿ ಅವರ ನಾಯಕತ್ವ ಮಾತ್ರವಲ್ಲ. ಜಗತ್ತಿನ ಬೇರೆಲ್ಲೂ ನೋಡದ ರೀತಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಉತ್ಸಾಹವನ್ನು ತೋರಿದ್ದೀರಿ. ಇದೇ ಕಾರಣಕ್ಕಾಗಿ ಭಾರತ ಎ.ಐ ಸೂಪರ್ ಪವರ್‌ನತ್ತ ಮುನ್ನಡೆದಿದೆ' ಎಂದು ಹೇಳಿದ್ದಾರೆ.

ಭಾರತ ಎ.ಐ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದ್ದರೂ ಐಸಿಸಿ ಟೆಸ್ಟ್ ಕ್ರಿಕೆಟ್ ರ್‍ಯಾಂಕಿಂಗ್‌ನಲ್ಲಿ ಇಂಗ್ಲೆಂಡ್ ತಂಡವೇ ಮುಂದಿದೆ ಎಂದು ಸುನಕ್ ಮಗದೊಂದು ನಗೆ ಚಟಾಕಿ ಹಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.