ADVERTISEMENT

ಮಕ್ಕಳನ್ನು AI ದಡ್ಡರನ್ನಾಗಿ ಮಾಡುತ್ತದೆಯೇ? OpenAI ಸಿಇಒ ಕೊಟ್ಟ ಉತ್ತರ ಹೀಗಿತ್ತು

ಏಜೆನ್ಸೀಸ್
Published 21 ಫೆಬ್ರುವರಿ 2026, 13:22 IST
Last Updated 21 ಫೆಬ್ರುವರಿ 2026, 13:22 IST
<div class="paragraphs"><p>ಓಪನ್‌ ಎಐ ಸಿಇಒ ಸ್ಯಾಮ್ ಆಲ್ಟ್‌ಮನ್‌</p></div>

ಓಪನ್‌ ಎಐ ಸಿಇಒ ಸ್ಯಾಮ್ ಆಲ್ಟ್‌ಮನ್‌

   

ಪಿಟಿಐ ಚಿತ್ರ

ನವದೆಹಲಿ: ಕೃತಕ ಬುದ್ಧಿಮತ್ತೆಯ ಬಳಕೆಯು ಕೆಲವು ಮಕ್ಕಳನ್ನು ದಡ್ಡರನ್ನಾಗಿ ಮಾಡಬಹುದು ಎಂದು ಓಪನ್‌ ಎಐ ಸಿಇಒ ಸ್ಯಾಮ್ ಆಲ್ಟ್‌ಮನ್‌ ಹೇಳಿದ್ದಾರೆ. 

ADVERTISEMENT

ಎಐ ಇಂಪ್ಯಾಕ್ಟ್‌ ಶೃಂಗದಲ್ಲಿ ಭಾಗಿಯಾಗಿದ್ದ ಆಲ್ಟ್‌ಮನ್‌ ಅವರೊಂದಿಗೆ ‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ನಡೆಸಿದ ಸಂದರ್ಶನದಲ್ಲಿ, ಎಐ ಮಕ್ಕಳನ್ನು ದಡ್ಡರನ್ನಾಗಿ ಮಾಡುತ್ತಿದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ.

‘ಕೆಲವು ಮಕ್ಕಳ ವಿಷಯದಲ್ಲಿ ಇದು ನಿಜವಿರಬಹುದು. ಏಕೆಂದರೆ ಮಕ್ಕಳು ಕೇವಲ ಉತ್ತರಗಳನ್ನು ಪಡೆಯಲು ಎಐ ಅನ್ನು ಅವಲಂಬಿಸಿದರೆ, ಅವರ ವಿಮರ್ಶಾತ್ಮಕ ಚಿಂತನೆ ಮತ್ತು ಅವರೇ ಸ್ವತಃ ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಕುಂಠಿತವಾಗಬಹುದು. ಇನ್ನೂ ಕೆಲವರು ಮನೆಪಾಠಗಳನ್ನು (ಹೋಮ್‌ವರ್ಕ್‌) ಬರೆಯಲು ಎಐ ಅನ್ನು ಬಳಸುವ ಮೂಲಕ ಮೋಸ ಮಾಡಲೂ ಉಪಯೋಗಿಸಬಹುದು. ಹೀಗಾಗಿ ಅತಿಯಾದ ಎಐ ಬಳಕೆ ಮಕ್ಕಳನ್ನು ದಡ್ಡರನ್ನಾಗಿ ಮಾಡಬಹುದು. ಆದರೆ ಅದೇ ಎಐ ಅನ್ನು ವಿಷಯಗಳನ್ನು, ಪಠ್ಯವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಶಿಕ್ಷಕನಂತೆ ಬಳಸಿಕೊಂಡರೆ ಒಳ್ಳೆಯದು’ ಎಂದು ಆಲ್ಟ್‌ಮನ್‌ ಹೇಳಿದ್ದಾರೆ.

‘ಭವಿಷ್ಯದಲ್ಲಿ ಮಕ್ಕಳು ಎಐಗಿಂತ ಬುದ್ಧಿವಂತರಾಗುವುದು ಕಷ್ಟವಾಗಬಹುದು. ಆದರೆ ಎಐ ಅನ್ನು ಸರಿಯಾಗಿ ಬಳಸುವ ಕಲೆ ಗೊತ್ತಿದ್ದರೆ ಅನೇಕ ರೀತಿಯ ಕೌಶಲಗಳನ್ನು ಕರಗತ ಮಾಡಿಕೊಳ್ಳಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.