ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್ ಬೆಲೆ ₹2,500 ಇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2021, 10:59 IST
Last Updated 4 ಅಕ್ಟೋಬರ್ 2021, 10:59 IST
ಸ್ಯಾಮ್‌ಸಂಗ್ ಫೋನ್ ದರ ಕಡಿತ
ಸ್ಯಾಮ್‌ಸಂಗ್ ಫೋನ್ ದರ ಕಡಿತ   

ಬೆಂಗಳೂರು: ಸ್ಯಾಮ್‌ಸಂಗ್ ಗ್ಯಾಲಕ್ಸಿ ಸರಣಿಯಲ್ಲಿ ಬಿಡುಗಡೆಯಾಗಿದ್ದ A21s ಸ್ಮಾರ್ಟ್‌ಫೋನ್ ದರ ಇಳಿಕೆಯಾಗಿದೆ.

ಮಧ್ಯಮ ಬಜೆಟ್ ಮತ್ತು ವಿಶೇಷತೆ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿದಾರರಿಗೆ ಸ್ಯಾಮ್‌ಸಂಗ್ ವಿಶೇಷ ಕೊಡುಗೆ ನೀಡುತ್ತಿದ್ದು, ಗ್ಯಾಲಕ್ಸಿ A21s ದರದಲ್ಲಿ ₹2,500 ಇಳಿಕೆ ಮಾಡಿದೆ.

ಮುಂಬೈ ಮೂಲದ ರಿಟೇಲರ್ ಆಗಿರುವ ಮಹೇಶ್ ಟೆಲಿಕಾಂ, ಸ್ಯಾಮ್‌ಸಂಗ್ ಫೋನ್ದರ ಇಳಿಕೆ ಕುರಿತು ಪ್ರಕಟಿಸಿದ್ದಾರೆ.

ADVERTISEMENT

ಕಳೆದ ವರ್ಷದ ಜೂನ್‌ನಲ್ಲಿ ಬಿಡುಗಡೆಯಾಗಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ A21s, 4 GB + 64 GB ಮಾದರಿಗೆ ಪರಿಷ್ಕೃತ ದರ ₹13,999 ಹಾಗೂ 6 GB + 64 GB ಆವೃತ್ತಿಗೆ ₹16,490 ದರವಿದೆ.

ಕಪ್ಪು, ಬಿಳಿ ಮತ್ತು ನೀಲಿ ಎಂಬ ಮೂರು ಬಣ್ಣಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A21s ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.