
ಬ್ಲೂಬರ್ಡ್ ಬ್ಲಾಕ್–2 ಸಂವಹನ ಉಪಗ್ರಹ ಉಡ್ಡಯನ
(ಪಿಟಿಐ ಚಿತ್ರ)
ಶ್ರೀಹರಿಕೋಟಾ (ಆಂಧ್ರ ಪ್ರದೇಶ): ಹೊಸ ತಲೆಮಾರಿನ ಅಮೆರಿಕದ ಸಂವಹನ ಉಪಗ್ರಹ 'ಬ್ಲೂಬರ್ಡ್ ಬ್ಲಾಕ್–2' ಅನ್ನು ಇಸ್ರೊದ ಅತ್ಯಂತ ಭಾರವಾದ ಎಲ್‌ವಿಎಂ3–ಎಂ6 ರಾಕೆಟ್ ನಭಕ್ಕೆ ಹೊತ್ತೊಯ್ಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದ ಎರಡನೇ ಲಾಂಚ್ ಪ್ಯಾಡ್‌ನಿಂದ 'ಬ್ಲೂಬರ್ಡ್ ಬ್ಲಾಕ್–2' ಸಂವಹನ ಉಪಗ್ರಹವನ್ನು ಬೆಳಿಗ್ಗೆ 8.54ಕ್ಕೆ ಸರಿಯಾಗಿ ಉಡ್ಡಯನ ಮಾಡಲಾಯಿತು ಎಂದು ಇಸ್ರೊ ತಿಳಿಸಿದೆ.
ಬ್ಲೂಬರ್ಡ್ ಬ್ಲಾಕ್–2 ಸಂವಹನ ಉಪಗ್ರಹ ಉಡ್ಡಯನ
ಏನಿದರ ವಿಶೇಷತೆ?
*ಜಗತ್ತಿನಾದ್ಯಂತ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಹೈ–ಸ್ಪೀಡ್ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ಪೂರೈಸುವಂತೆ ಈ ಉಪಗ್ರಹವನ್ನು ವಿನ್ಯಾಸಗೊಳಿಸಲಾಗಿದೆ
*ಅತಿ ಭಾರದ ಎಲ್‌ವಿಎಂ3 ರಾಕೆಟ್, ಇದೇ ಮೊದಲ ಬಾರಿಗೆ 6,100 ಕೆ.ಜಿ ತೂಕದ ಪೇಲೋಡ್‌ಗಳನ್ನು ನಭಕ್ಕೆ ಹೊತ್ತೊಯ್ದಿದೆ.
*ಎಲ್‌ವಿಎಂ3 ರಾಕೆಟ್‌ನ ಎತ್ತರ 43.5 ಮೀಟರ್ ಆಗಿದೆ.
*ಭೂ ಮೇಲ್ಮೈನಿಂದ 600 ಕಿ.ಮೀ. ಎತ್ತರದಲ್ಲಿ ವಾಣಿಜ್ಯ ಉದ್ದೇಶದ ಉಪಗ್ರಹವನ್ನು ಸೇರಿಸುವ ಮಹತ್ವದ ಯೋಜನೆ ಇದಾಗಿದೆ.
*ಬ್ಲೂಬರ್ಡ್ ಬ್ಲಾಕ್–2 ಉಪಗ್ರಹವು ಉಡಾವಣೆಯಾದ 15 ನಿಮಿಷಗಳ ಬಳಿಕ ಉಡಾವಣಾ ವಾಹಕದಿಂದ ಪ್ರತ್ಯೇಕಗೊಳ್ಳಲಿದೆ.
*ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಮತ್ತು ಅಮೆರಿಕ ಮೂಲದ ಎಎಸ್‌ಟಿ ಸ್ಪೇಸ್‌ಮೊಬೈಲ್ (ಎಎಸ್‌ಟಿ ಮತ್ತು ಸೈನ್ಸ್ ಎಲ್‌ಎಲ್‌ಸಿ) ನಡುವೆ ನಡೆದ ಖಾಸಗಿ ಒಪ್ಪಂದದ ಭಾಗವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್, ಇಸ್ರೊ ಅಡಿಯಲ್ಲಿ ಕಾರ್ಯನಿರ್ವಹಿಸುವ ಅಂಗಸಂಸ್ಥೆಯಾಗಿದೆ.
*ರಾಕೆಟ್ ವಿನ್ಯಾಸ ಮತ್ತು ಅಭಿವೃದ್ಧಿ: ಇಸ್ರೊದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್
*ಎಎಸ್‌ಟಿ ಸ್ಪೇಸ್‌ಮೊಬೈಲ್ ಕಂಪನಿಯು ಇದೇ ಮೊದಲ ಬಾರಿಗೆ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ನಿರ್ಮಿಸುತ್ತಿದೆ. ಇದನ್ನು ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಳಕೆ ಮಾಡಬಹುದು. ಇದನ್ನು ಸರ್ಕಾರಿ ಮತ್ತು ವಾಣಿಜ್ಯ ಸೇವೆಗಳ ಅಪ್ಲಿಕೇಷನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
*ಪ್ರತಿಯೊಬ್ಬರಿಗೂ ಎಲ್ಲಾ ಸಮಯದಲ್ಲೂ 4ಜಿ, 5ಜಿ ಧ್ವನಿ ಮತ್ತು ವಿಡಿಯೊ ಕಾಲ್, ಟೆಕ್ಷ್ಟ್, ಸ್ಟ್ರೀಮಿಂಗ್ ಮತ್ತು ಡೇಟಾವನ್ನು ಒದಗಿಸುತ್ತದೆ.
*4,400 ಕೆ.ಜಿ.– ಎಲ್‌ವಿಎಂ3–ಎಂ5 ರಾಕೆಟ್‌ನಲ್ಲಿ ಈ ಹಿಂದೆ ಕೊಂಡೊಯ್ದಿದ್ದ ಉಪಗ್ರಹದ ತೂಕ (ನವೆಂಬರ್ 2ರಂದು ಉಡಾವಣೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.