ADVERTISEMENT

ಬಾಹ್ಯಾಕಾಶ ನಿಲ್ದಾಣದಿಂದ ಸುನೀತಾ, ಬುಚ್ ಭುವಿಗೆ: ನೇರಪ್ರಸಾರಕ್ಕೆ ನಾಸಾ+ ಸಿದ್ಧತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2025, 14:37 IST
Last Updated 17 ಮಾರ್ಚ್ 2025, 14:37 IST
<div class="paragraphs"><p>ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸ್ಪೇಸ್‌ಎಕ್ಸ್‌ನ ಡ್ರಾಗನ್ ಕ್ರೂ ನೌಕೆಯಲ್ಲಿ ನಾಸಾದ ಗಗನಯಾನಿಗಳಾದ ಬುಜ್ ವಿಲ್ಮೋರ್, ನಿಕ್ ಹೇಗ್, ಸುನಿತಾ ವಿಲಿಯಮ್ಸ್‌, ಅಲೆಕ್ಸಾಂಡರ್‌ ಗೊರ್ಬನೊವೊ</p></div>

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸ್ಪೇಸ್‌ಎಕ್ಸ್‌ನ ಡ್ರಾಗನ್ ಕ್ರೂ ನೌಕೆಯಲ್ಲಿ ನಾಸಾದ ಗಗನಯಾನಿಗಳಾದ ಬುಜ್ ವಿಲ್ಮೋರ್, ನಿಕ್ ಹೇಗ್, ಸುನಿತಾ ವಿಲಿಯಮ್ಸ್‌, ಅಲೆಕ್ಸಾಂಡರ್‌ ಗೊರ್ಬನೊವೊ

   

ನಾಸಾ ಚಿತ್ರ

ವಾಷಿಂಗ್ಟನ್‌: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಕಳೆದ 9 ತಿಂಗಳುಗಳಿಂದ ಇರುವ ಸುನಿತಾ ವಿಲಿಯಮ್ಸ್‌, ಬುಜ್ ವಿಲ್ಮೋರ್ ಅವರನ್ನು ಧರೆಗೆ ಕರೆತರಲು ಅಂತಿಮ ಸಿದ್ಧತೆ ಆರಂಭಗೊಂಡಿದ್ದು, ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಬೆಳಿಗ್ಗೆ 8.15ರಿಂದ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದರ ನೇರ ಪ್ರಸಾರಕ್ಕೆ ನಾಸಾ ಪ್ಲಸ್ ಸಿದ್ಧತೆ ನಡೆಸಿದೆ.

ADVERTISEMENT

ಸ್ಪೇಸ್‌ ಎಕ್ಸ್‌ ಕ್ರೂ ‘ಡ್ರಾಗನ್‌’ ಬಾಹ್ಯಾಕಾಶ ನಿಲ್ದಾಣವನ್ನು ಭಾನುವಾರ ತಲುಪಿದೆ. ಸುನಿತಾ ಹಾಗೂ ಬುಚ್ ಅವರನ್ನು ಹೊತ್ತ ನೌಕೆಯು ಫ್ಲಾರಿಡಾ ಕಡಲತೀರದಲ್ಲಿ ಬಂದಿಳಿಯಲಿದೆ. ಈ ಇಬ್ಬರೊಂದಿಗೆ ನಿಕ್‌ ಹೇಗ್, ಅಲೆಕ್ಸಾಂಡರ್‌ ಗೊರ್ಬನೊವೊ ಅವರೂ ಭೂಮಿಗೆ ಹಿಂದಿರುಗಲಿದ್ದಾರೆ. 17 ಗಂಟೆಗಳ ಪ್ರಯಾಣದ ಅವಧಿಯ ಹಿಂದಿರುಗುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ನಾಸಾ ಹೇಳಿದೆ.

ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಕಳೆದ ವರ್ಷ ಜೂನ್‌ 5ರಂದು ಐಎಸ್‌ಎಸ್‌ಗೆ ತೆರಳಿದ್ದ ಸುನಿತಾ ಹಾಗೂ ವಿಲ್ಮೋರ್‌, 8 ದಿನಗಳ ನಂತರ ಭೂಮಿಗೆ ಮರಳಬೇಕಿತ್ತು. ಆದರೆ, ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಅವರಿಗೆ ಮರಳಲು ಸಾಧ್ಯವಾಗಿಲ್ಲ. ನಿಕ್‌ ಹಾಗೂ ಅಲೆಕ್ಸಾಂಡರ್‌ ಕಳೆದ ಸೆಪ್ಟೆಂಬರ್‌ನಿಂದಲೂ ಬಾಹ್ಯಾಕಾಶದಲ್ಲಿದ್ದಾರೆ. 

ಬಾಹ್ಯಾಕಾಶ ನಿಲ್ದಾಣದಿಂದ ಕ್ರೂ–9 ಹಿಂದಿರುಗುವ ಪ್ರಕ್ರಿಯೆ ಸೋಮವಾರ ಬೆಳಿಗ್ಗೆ 8.15ಕ್ಕೆ ಆರಂಭಗೊಳ್ಳಲಿದೆ. ಗಗನಯಾನಿಗಳು ಧರೆಗೆ ಮುಟ್ಟುವ ಸ್ಥಳವಾದ ಫ್ಲಾರಿಡಾದ ಕಡಲ ತೀರದ ಹವಾಮಾನ ಸ್ಥಿತಿಯನ್ನು ತಂತ್ರಜ್ಞರು ಪರಿಶೀಲಿಸಿದ್ದಾರೆ. ಒಂದೊಮ್ಮೆ ಅಂತಿಮ ಹಂತದ ಬದಲಾವಣೆಗಳು ಇದ್ದಲ್ಲಿ, ಗುರುವಾರದ ಸ್ಥಿತಿಯನ್ನೂ ಪರಿಶೀಲಿಸಲಾಗುತ್ತಿದೆ ಎಂದು ನಾಸಾ ಹೇಳಿದೆ.

ಹಿಂದಿರುಗುವ ಪ್ರಕ್ರಿಯೆಯನ್ನು ನಾಸಾದ ಅಧಿಕೃತಕ ಅಂತರ್ಜಾಲ ತಾಣ www.nasa.gov/live ಮೂಲಕ ವೀಕ್ಷಿಸಬಹುದಾಗಿದೆ.

ಮಂಗಳವಾರ ಬೆಳಿಗ್ಗೆ 8.15ಕ್ಕೆ ಗಗನಯಾನಿಗಳನ್ನು ಕರೆತರುವ ನೌಕೆಯ ಬಾಗಿಲುಗಳು ಮುಚ್ಚಲಿವೆ

ರಾತ್ರಿ 10.15ಕ್ಕೆ ನೌಕೆಯ ಚಲನೆ ಆರಂಭವಾಗಲಿದೆ

ರಾತ್ರಿ 10.35ಕ್ಕೆ ನೌಕೆ ಭೂಮಿಯತ್ತ ಪ್ರಯಾಣ ಆರಂಭಿಸಲಿದೆ.

ಈ ಹಂತದ ನೇರ ಪ್ರಸಾರವನ್ನು ನಾಸಾ ಕೇವಲ ಧ್ವನಿ ಮಾಧ್ಯಮದ ಮೂಲಕ ನೀಡಲಿದೆ.

ಬುಧವಾರ ನಸುಕಿನ 2.15ಕ್ಕೆ ಭೂಮಿಗೆ ಮರಳುವ ನೇರ ಪ್ರಸಾರ ಮುಂದುವರಿಯಲಿದೆ

2.41ಕ್ಕೆ ಭೂಮಿಯ ವಾತಾವರಣದಲ್ಲಿ ವೇಗ ತಗ್ಗಿಸಲು ಇಂಧನ ದಹಿಕೆ ಆರಂಭವಾಗಲಿದೆ

3.27ಕ್ಕೆ ಭೂಮಿ ಮುಟ್ಟುವ ಕ್ಷಣ ಗಣನೆ ಆರಂಭವಾಗಲಿದೆ

ಬುಧವಾರ ನಸುಕಿನ 5ಕ್ಕೆ ಗಗನಯಾನಿಗಳು ನಿಗದಿತ ಸ್ಥಳದಲ್ಲಿ ಇಳಿಯಲಿದ್ದಾರೆ.

ಸಂಪೂರ್ಣ ಪ್ರಕ್ರಿಯೆಯ ಮಾಹಿತಿಯನ್ನು ನಾಸಾದ ಕಮರ್ಷಿಯಲ್ ಕ್ರೂ ಬ್ಲಾಗ್‌ನಲ್ಲೂ (www.nasa.gov/commercialcrew) ವೀಕ್ಷಿಸಬಹುದು ಎಂದು ನಾಸಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.