ADVERTISEMENT

ಸುಬ್ರಹ್ಮಣ್ಯ-ಗುಂಡ್ಯ ಹೆದ್ದಾರಿ ಚಿತ್ರ: ಅಲ್ಲಿ ಧುಮುಕಬೇಕು ಎಂದ ಆನಂದ್‌ ಮಹೀಂದ್ರಾ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 6:17 IST
Last Updated 3 ಜೂನ್ 2022, 6:17 IST
'ವಿಸಿಟ್‌ ಉಡುಪಿ' ಎಂಬ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಹೆದ್ದಾರಿ ಚಿತ್ರ
'ವಿಸಿಟ್‌ ಉಡುಪಿ' ಎಂಬ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಹೆದ್ದಾರಿ ಚಿತ್ರ   

ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಮತ್ತು ಗುಂಡ್ಯ ನಡುವೆ ಪಶ್ಚಿಮ ಘಟ್ಟದ ಕಾಡಿನೊಳಗೆ ಸಾಗುವ ಹೆದ್ದಾರಿ ಚಿತ್ರಕ್ಕೆ ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್‌ ಮಹೀಂದ್ರಾ ಪರವಶರಾಗಿದ್ದು, ಫೋಟೊದೊಳಗೆ ಧುಮುಕಬೇಕೆನಿಸುತ್ತಿದೆ ಎಂದಿದ್ದಾರೆ.

'ವಿಸಿಟ್‌ ಉಡುಪಿ' ಎಂಬ ಟ್ವಿಟರ್‌ ಖಾತೆಯಲ್ಲಿ ಕೆಲವು ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕಾಡಿನ ಮಧ್ಯೆ ಸಾಗುವ ರಸ್ತೆ ಚಿತ್ರವನ್ನು ಪ್ರಕಟಿಸಲಾಗಿತ್ತು. ಇದಕ್ಕೆ 'ವಿಶ್ವದ ಅತ್ಯಂತ ಸುಂದರವಾದ ಕಾಡಿನ ಪ್ರಯಾಣ' ಎಂಬ ಶೀರ್ಷಿಕೆ ನೀಡಲಾಗಿದೆ. ಈ ಟ್ವೀಟ್‌ ಅನ್ನು ಆನಂದ್‌ ಮಹೀಂದ್ರಾ ಹಂಚಿಕೊಂಡಿದ್ದಾರೆ.

'ಸುಂದರವಾಗಿದೆ. ಫೋಟೊದೊಳಗೆ ಧುಮುಕಬೇಕು ಎಂದೆನಿಸುತ್ತಿದೆ' ಎಂದು ಆನಂದ್‌ ಮಹೀಂದ್ರಾ ಶ್ಲಾಘಿಸಿದ್ದಾರೆ.

ADVERTISEMENT

ಅಚ್ಚುಕಟ್ಟಾಗಿರುವ ಟಾರಿನ ರಸ್ತೆ, ಅಂಚಿಗಿರುವ ಎರಡು ಬಿಳಿಯ ಪಟ್ಟೆಗಳು, ರಸ್ತೆಯ ಎರಡೂ ಬದಿಗಳಲ್ಲಿ ದಟ್ಟ ಹಸಿರಿನ ಕಾಡು. ಕಣ್ಮನ ಸೆಳೆಯುವ ನೋಟ ಚಿತ್ರದಲ್ಲಿ ಸೆರೆಯಾಗಿದೆ. ದೀಪಕ್‌ ಎಂಬುವವರು ಕ್ಲಿಕ್ಕಿಸಿರುವ ಈ ಫೋಟೊಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.