ADVERTISEMENT

Twitter vs Threads: ಭಾರತ ಸೇರಿ 100ಕ್ಕೂ ದೇಶಗಳಲ್ಲಿ 'ಥ್ರೆಡ್ಸ್' ಬಿಡುಗಡೆ

ರಾಯಿಟರ್ಸ್
Published 6 ಜುಲೈ 2023, 3:02 IST
Last Updated 6 ಜುಲೈ 2023, 3:02 IST
   

ನ್ಯೂಯಾರ್ಕ್: ಫೇಸ್‌ಬುಕ್ ಒಡೆತನದ ಮೆಟಾ ಕಂಪನಿಯು, ನೂತನ 'ಥ್ರೆಡ್ಸ್' ಎಂಬ ಮೈಕ್ರೊಬ್ಲಾಗಿಂಗ್ ಆ್ಯಪ್‌ ಇಂದು ಬಿಡುಗಡೆಗೊಳಿಸಿದೆ.

ಇದು ಟ್ವಿಟರ್‌ಗೆ ನೇರ ಪೈಪೋಟಿ ಒಡ್ಡಲಿದೆ. ಅಲ್ಲದೆ ಮೆಟಾ ಮಾಲೀಕ ಮಾರ್ಕ್ ಜುಕರ್‌ಬರ್ಗ್ ಮತ್ತು ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

'ಲೆಟ್ಸ್ ಡು ದಿಸ್' ಥ್ರೆಡ್ಸ್‌ಗೆ ಸುಸ್ವಾಗತ ಎಂದು ಜುಕರ್‌ಬರ್ಗ್ ಬೆಂಕಿ ಎಮೋಜಿಯೊಂದಿಗೆ ನೂತನ ಆ್ಯಪ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಬುಧವಾರ ಮಧ್ಯರಾತ್ರಿ ಭಾರತ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಜಪಾನ್ ಸೇರಿದಂತೆ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಥ್ರೆಡ್ಸ್ ಆ್ಯಪ್ ಬಿಡುಗಡೆಯಾಗಿದೆ.

ಗೂಗಲ್ ಆ್ಯಂಡ್ರಾಯ್ಡ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್‌ನಲ್ಲಿ ಇದು ಲಭ್ಯವಾಗಲಿದೆ.

ಟ್ವಿಟರ್ ಅನ್ನು ಖರೀದಿಸಿದ ಬಳಿಕ ಎಲಾನ್ ಮಸ್ಕ್, ಅನೇಕ ಮಿತಿಗಳನ್ನು ಹೇರಿದ್ದರು. ಇದರಿಂದಾಗಿ ಇತ್ತೀಚೆಗೆ ಹಲವಾರು ವಿವಾದಕ್ಕೆ ಒಳಗಾಗಿತ್ತು.

ಈಗಾಗಲೇ ಜನಪ್ರಿಯತೆ ಗಳಿಸಿರುವ ಇನ್‌ಸ್ಟಾಗ್ರಾಂ ಜೊತೆ ಥ್ರೆಡ್ಸ್ ಸಹಯೋಗದ ಬಗ್ಗೆ ಹೂಡಿಕೆದಾರರು ಹೆಚ್ಚು ಉತ್ಸುಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್‌ಸ್ಟಾಗ್ರಾಂನಲ್ಲಿರುವ ಅದೇ ವಿವರಗಳನ್ನು (ಯೂಸರ್ ಕ್ರೆಡೆನ್ಷಿಯಲ್) ಬಳಸಿ ಥ್ರೆಡ್ಸ್‌ಗೆ ಲಾಗಿನ್ ಆಗಬಹುದಾಗಿದೆ. ಇನ್‌ಸ್ಟಾಗ್ರಾಂನ ಬಳಕೆದಾರರ ಹೆಸರು ಮತ್ತು ಹಿಂಬಾಲಕರನ್ನು ಥ್ರೆಡ್ಸ್‌ ಆ್ಯಪ್‌ನಲ್ಲಿಯೂ ಉಳಿಸಿಕೊಳ್ಳಬಹುದಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಸದ್ಯ ಮಾಸಿಕ 200 ಕೋಟಿ ಸಕ್ರಿಯ ಬಳಕೆದಾರರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.