ADVERTISEMENT

ವಾಟ್ಸ್‌ಆ್ಯಪ್‌ ಪ್ರಕರಣ: ಸಿಸಿಐ ಆದೇಶಕ್ಕೆ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 12:42 IST
Last Updated 23 ಜನವರಿ 2025, 12:42 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ವಾಟ್ಸ್‌ಆ್ಯಪ್‌ ಮತ್ತು ಮೆಟಾ ಕಂಪನಿ ನಡುವೆ ದತ್ತಾಂಶ ವಿನಿಮಯ ಮಾಡಿಕೊಳ್ಳದಂತೆ ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ವಿಧಿಸಿದ್ದ ನಿರ್ಬಂಧಕ್ಕೆ, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ) ಗುರುವಾರ ತಡೆಯಾಜ್ಞೆ ನೀಡಿದೆ.

2021ರಲ್ಲಿ ವಾಟ್ಸ್‌ಆ್ಯಪ್‌ನಿಂದ ನವೀಕೃತ ನೀತಿಯನ್ನು ಪ್ರಕಟಿಸಲಾಗಿತ್ತು. ಇದರನ್ವಯ ಎಲ್ಲಾ ಬಳಕೆದಾರರು ಮೆಟಾದೊಂದಿಗೆ ದತ್ತಾಂಶ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿತ್ತು. ವಾಟ್ಸ್‌ಆ್ಯಪ್‌ನಲ್ಲಿ ಸಂಗ್ರಹಿಸುವ ಬಳಕೆದಾರರ ಮಾಹಿತಿಯನ್ನು ಜಾಹೀರಾತು ಉದ್ದೇಶಗಳಿಗೆ ಮೆಟಾ ಕಂಪನಿಯು, ತನ್ನ ಇತರೆ ಅಪ್ಲಿಕೇಷನ್‌ಗಳಲ್ಲಿ ಬಳಸುತ್ತಿತ್ತು. ‌‌

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಆಯೋಗವು ವಾಟ್ಸ್‌ಆ್ಯಪ್‌ನಿಂದ ಗೋಪ್ಯತೆ ನೀತಿಯ ಉಲ್ಲಂಘನೆಯಾಗುತ್ತಿದೆ. ಮೆಟಾ ಕಂಪನಿಯು ನ್ಯಾಯಸಮ್ಮತವಲ್ಲದ ಕಾರ್ಯದಲ್ಲಿ ತೊಡಗಿದೆ ಎಂದು ಹೇಳಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ₹213 ಕೋಟಿ ದಂಡ ವಿಧಿಸುವ ಜೊತೆಗೆ, ಈ ಚಟುವಟಿಕೆಗೆ ಐದು ವರ್ಷದವರೆಗೆ ನಿರ್ಬಂಧ ವಿಧಿಸಿತ್ತು. 

ADVERTISEMENT

ಆಯೋಗದ ಕ್ರಮ ಪ್ರಶ್ನಿಸಿ ಮೆಟಾ ಕಂಪನಿಯು ನ್ಯಾಯಮಂಡಳಿಯ ಮೆಟ್ಟಿಲೇರಿತ್ತು.

ಎನ್‌ಸಿಎಲ್‌ಎಟಿ ನೀಡಿರುವ ತಡೆಯಾಜ್ಞೆಯನ್ನು ಸ್ವಾಗತಿಸಿರುವ ಮೆಟಾ, ಇದು ತನ್ನ ಮುಂದಿನ ಹಂತದ ಅರ್ಹತೆಯ ನಿರ್ಣಯಕ್ಕೆ ಸಹಕಾರಿಯಾಗಲಿದೆ ಎಂದು ಪ್ರತಿಕ್ರಿಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.