ADVERTISEMENT

ಟ್ವಿಟರ್‌ಗೆ ಸಂಕಟ; ಮತ್ತೆ ಟ್ರೆಂಡ್ ಆಯ್ತು 'ಆರ್ಕುಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2022, 14:06 IST
Last Updated 18 ನವೆಂಬರ್ 2022, 14:06 IST
ಆರ್ಕುಟ್
ಆರ್ಕುಟ್   

ದಶಕದ ಹಿಂದೆಯೇ ತೆರೆಮರೆಗೆ ಸರಿದಿದ್ದ ಆರ್ಕುಟ್, ಮತ್ತೆ ಈಗಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.

ಕಠಿಣ ಶ್ರಮ ವಹಿಸಿ ಕೆಲಸ ಮಾಡಿ ಎಂದು ಟ್ಟಿಟರ್‌ನ ಹೊಸ ಮಾಲೀಕ ಇಲಾನ್ ಮಸ್ಕ್ ತನ್ನ ಉದ್ಯೋಗಿಗಳಿಗೆ ಎಚ್ಚರಿಸಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ.

ಗೂಗಲ್ ಒಡೆತನದ ಸೋಷಿಯಲ್ ನೆಟ್‌ವರ್ಕಿಂಗ್ ಹಾಗೂ ಫ್ರೆಂಡ್‌ಷಿಪ್ ವೆಬ್‌ಸೈಟ್ ಆದ ಆರ್ಕುಟ್, 2008ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿತ್ತು. ಅಲ್ಲದೆ ಭಾರತದಲ್ಲಿ ಅತಿ ಹೆಚ್ಚು ಮಂದಿ ಭೇಟಿ ಕೊಟ್ಟ ವೆಬ್‌ಸೈಟ್‌ಗಳಲ್ಲಿ ಒಂದಾಗಿ ಗುರುತಿಸಿತ್ತು.

ಆದರೆ ಫೇಸ್‌ಬುಕ್ ಸೇರಿದಂತೆ ಇತರೆ ಪ್ರತಿಸ್ಪರ್ಧಿಗಳ ಪೈಪೋಟಿಯಿಂದಾಗಿ 2014ರಲ್ಲಿ ಆರ್ಕುಟ್ ಅನ್ನು ಮುಚ್ಚುವುದಾಗಿ ಗೂಗಲ್ ಘೋಷಿಸಿತ್ತು.

ಈಗ ಟ್ವಿಟರ್‌ಗೆ ಆರ್‌ಐಪಿ ಎಂದು ಹೇಳಿರುವ ಬಳಕೆದಾರರು, ಆರ್ಕುಟ್ ಮತ್ತೆ ಶುರುವಾಗಲಿ ಎಂದು ಶುಭ ಹಾರೈಸಿದ್ದಾರೆ. ಅಲ್ಲದೆ ಆರ್ಕುಟ್ ದಿನಗಳನ್ನು ಮೆಲುಕು ಹಾಕಿದ್ದಾರೆ.

ಟ್ವಿಟರ್‌ನಲ್ಲಿ ಇಲಾನ್ ಮಸ್ಕ್ ಮಾಲೀಕರಾದ ಬಳಿಕ ಉದ್ಯೋಗ ಕಡಿತ ಘೋಷಿಸಿದ್ದರು. ಅಲ್ಲದೆ ಕಠಿಣ ನಿಯಮದಿಂದಾಗಿ ಉದ್ಯೋಗಿಗಳಿಂದ ರಾಜೀನಾಮೆ ಪರ್ವ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.