ADVERTISEMENT

ಟ್ವಿಟರ್ ಎಡಿಟ್ ಆಯ್ಕೆ: ಜನಾಭಿಪ್ರಾಯ ಸಂಗ್ರಹಿಸುತ್ತಿರುವ ಎಲೊನ್ ಮಸ್ಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2022, 10:11 IST
Last Updated 5 ಏಪ್ರಿಲ್ 2022, 10:11 IST
   

ಬೆಂಗಳೂರು: ಟೆಸ್ಲಾ ಸಿಇಒ ಎಲೊನ್ ಮಸ್ಕ್ ಅವರು, ಮೈಕ್ರೋಬ್ಲಾಗಿಂಗ್ ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಶೇ 9.2ರಷ್ಟು ಪಾಲು ಹೊಂದಿರುವುದನ್ನು ಬಹಿರಂಗಪಡಿಸಿದ್ದಾರೆ. ಅದರ ಬೆನ್ನಲ್ಲೇ, ಬಳಕೆದಾರರ ಬಹುಕಾಲದ ಬೇಡಿಕೆ ಒಂದರ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ಟ್ವಿಟರ್‌ನಲ್ಲಿ ಎಡಿಟ್ ಆಯ್ಕೆ ಬೇಕೇ, ಬೇಡವೇ ಎಂಬುದರ ಬಗ್ಗೆ ಬಳಕೆದಾರರಿಂದ ಎಲೊನ್ ಮಸ್ಕ್ ಜನಮತ ಸಂಗ್ರಹಿಸುತ್ತಿದ್ದಾರೆ.

ಮಂಗಳವಾರ ಅವರು ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಅಭಿಪ್ರಾಯ ಕೇಳಿದ್ದು, 23 ಲಕ್ಷಕ್ಕೂ ಅಧಿಕ ಮಂದಿ ಬಳಕೆದಾರರು ವೋಟ್ ಮಾಡಿದ್ದಾರೆ.

ADVERTISEMENT

ಬಹುತೇಕರು, ಎಡಿಟ್ ಆಯ್ಕೆ ಬೇಕು ಎಂದು ಹೇಳಿದ್ದರೆ, ಮತ್ತೆ ಕೆಲವರು ಎಡಿಟ್ ಆಯ್ಕೆ ನೀಡಿದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು, ಟ್ವೀಟ್ ತಿದ್ದಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

ಅದರಲ್ಲೂ, ಎಲೊನ್ ಮಸ್ಕ್ ಅವರು, ಜನಮತದಲ್ಲಿ ಯೆಸ್ ಅಂದಿರುವುದನ್ನು yse ಎಂದು, ನೋ ಎಂದಿರುವುದನ್ನು on ಎಂದು ತಪ್ಪಾಗಿ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.