ADVERTISEMENT

Social Media ಟ್ರೆಂಡ್‌: IAS ಟಾಪರ್‌ ಟಿನಾ ನಿಶ್ಚಿತಾರ್ಥ; 2ನೇ ಮದುವೆಗೆ ತಯಾರಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 10:48 IST
Last Updated 29 ಮಾರ್ಚ್ 2022, 10:48 IST
ಪ್ರದೀಪ್‌. ಟಿನಾ ಡಾಬಿ
ಪ್ರದೀಪ್‌. ಟಿನಾ ಡಾಬಿ    

ನವದೆಹಲಿ: ಭಾರತೀಯ ಆಡಳಿತ ಸೇವೆಗಳ (ಐಎಎಸ್‌) ಅಧಿಕಾರಿ ಟಿನಾ ಡಾಬಿ ಅವರು ಎರಡನೇ ಮದುವೆಯಾಗುತ್ತಿದ್ದು ಐಎಎಸ್‌ ಅಧಿಕಾರಿ ಪ್ರದೀಪ್‌ ಗಾವಂಡೆ ಜತೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಟಿನಾ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಟಿನಾ ಅವರು 2020ರ ನವೆಂಬರ್‌ನಲ್ಲಿ ಮೊದಲ ಪತಿ ಅಮೀರ್–ಉಲ್‌–ಶಫಿ ಖಾನ್‌ ಅವರಿಂದ ವಿಚ್ಚೇದನ ಪಡೆದಿದ್ದಾರೆ. ಟಿನಾ ಮತ್ತು ಅಮೀರ್‌ ಪರಸ್ಪರ ಪ್ರೀತಿಸಿ 2018ರಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಎರಡೇ ವರ್ಷಕ್ಕೆ ಈ ದಂಪತಿ ಬೇರೆಯಾಗಿದ್ದರು.

ಟಿನಾ ಅವರ ನಿಶ್ಚಿತಾರ್ಥದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಭಾವಿ ಪತಿ ಪ್ರದೀಪ್‌ ಗಾವಂಡೆ ಬಗ್ಗೆಯೂ ನೆಟ್ಟಿಗರು ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಿದ್ದಾರೆ. ಗೂಗಲ್‌ ಸರ್ಚ್‌ ಟ್ರೆಂಡ್‌ನಲ್ಲೂ ಅವರ ಹೆಸರು ಹರಿದಾಡುತ್ತಿದೆ.

ADVERTISEMENT

ಮೂಲತಃಮಹಾರಾಷ್ಟ್ರ ರಾಜ್ಯದವರಾದ ಪ್ರದೀಪ್‌ 2013ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದಾರೆ. ವೈದ್ಯಕೀಯ ಪದವೀಧರರಾಗಿರುವ ಇವರು ರಾಜಸ್ಥಾನ ಕೇಡರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಅಂತರ್‌ಧರ್ಮೀಯ ಮದುವೆ, ಐಎಎಸ್‌ ಟಾಪರ್‌ಗಳ ಪ್ರೇಮ ಪ್ರಸಂಗ, ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗಳು,...ಹೀಗೆ ಹಲವು ಕಾರಣಗಳಿಂದಾಗಿ 2016ರಿಂದಲೂ ಟಿನಾ ಡಾಬಿ ಸುದ್ದಿಯಲ್ಲಿದ್ದಾರೆ.

ಯುಪಿಎಸ್‌ಸಿ ನಡೆಸುವ ಸಿವಿಲ್‌ ಸರ್ವೀಸಸ್‌ ಪರೀಕ್ಷೆಯಲ್ಲಿ ಟಿನಾ ಡಾಬಿ 2015ರ ಬ್ಯಾಚ್‌ನ ಟಾಪರ್‌ ಆದವರು. ಸಿವಿಲ್‌ ಸರ್ವೀಸಸ್‌ನಲ್ಲಿ ಪ್ರಥಮ ಸ್ಥಾನ ಪಡೆದ ದಲಿತ ಸಮುದಾಯದ ಮೊದಲ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಯೂ ಟಿನಾ ಅವರ ಪಾಲಿಗಿದೆ. ಕಾಶ್ಮೀರ ಮೂಲದವರಾದ ಅಮೀರ್‌ ಖಾನ್‌ 2015ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಟೀನಾ ನಂತರದ ಸ್ಥಾನ (ಎರಡನೇ ರ್‍ಯಾಂಕ್ ) ಗಳಿಸಿದ್ದರು.

ಟಿನಾ ಮತ್ತು ಪ್ರದೀಪ್‌ಅವರ ವಿವಾಹಏಪ್ರಿಲ್‌ ತಿಂಗಳಲ್ಲಿ ಜೈಪುರದಲ್ಲಿ ನಡೆಯಲಿದೆ ಎಂದು ರಾಜಸ್ಥಾನದ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.