ADVERTISEMENT

ಟಾಕ್ಸಿಕ್ ಟೀಸರ್ ರೀಮೇಕ್: ಎಚ್ಡಿಕೆ ಮತ್ತೆ ರಾಜ್ಯ ಕಬ್ಜಾ ಮಾಡ್ಕೊಳ್ಳೋ ಸಂದೇಶವಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2026, 12:53 IST
Last Updated 10 ಜನವರಿ 2026, 12:53 IST
<div class="paragraphs"><p>AI-ರಚಿತ ದೃಶ್ಯಗಳು</p></div>

AI-ರಚಿತ ದೃಶ್ಯಗಳು

   

ಚಿತ್ರ: ಎಕ್ಸ್ ಖಾತೆ

ರಾಕಿಂಗ್‌ ಸ್ಟಾರ್ ಯಶ್‌ ನಟನೆಯಲ್ಲಿ ಮೂಡಿ ಬರುತ್ತಿರುವ ‘ಟಾಕ್ಸಿಕ್’ ಸಿನಿಮಾದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಎಲ್ಲಿ ನೋಡಿದರೂ, ಎಲ್ಲರ ಬಾಯಲ್ಲೂ ಕೇವಲ ಟಾಕ್ಸಿಕ್ ವಿಡಿಯೊ ಬಗ್ಗೆಯೇ ಮಾತುಗಳು ಕೇಳಿಬರುತ್ತಿವೆ.

ADVERTISEMENT

ಇದರ ನಡುವೆ ‘ಟಾಕ್ಸಿಕ್‌‘ ಮಾದರಿಯಲ್ಲೇ ರಚಿಸಲಾದ ರಾಜಕೀಯ ವಿಡಂಬನೆಯ ವಿಡಿಯೊವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಟಾಕ್ಸಿಕ್ ಟೀಸರ್‌ನಲ್ಲಿರುವಂತೆ ಮತ್ತೆ ರಾಜ್ಯ ರಾಜಕಾರಣಕ್ಕೆ ಬಂದು ಕಬ್ಜಾ ಮಾಡ್ಕೊಳ್ಳಲು ಎಚ್ಡಿಕೆ ಸಜ್ಜಾಗಿರುವಂತೆ ವಿಡಿಯೊದಲ್ಲಿ ತೋರಿಸಲಾಗಿದೆ.

AI-ರಚಿತ ದೃಶ್ಯಗಳು.

ಇತ್ತೀಚೆಗೆ ಬಿಡುಗಡೆಯಾಗಿರುವ ಟಾಕ್ಸಿಕ್ ಚಿತ್ರದಲ್ಲಿ ನಟ ಯಶ್‌ ಪಾತ್ರದ ಹೆಸರನ್ನು ಬಹಿರಂಗ ಪಡಿಸಲಾಗಿತ್ತು. ಟಾಕ್ಸಿಕ್‌ನಲ್ಲಿ ಸ್ಮಶಾನವೊಂದನ್ನು ಯಶ್‌ ಎದುರಾಳಿ ತಂಡದಿಂದ ಮತ್ತೆ ವಶಪಡಿಸಿಕೊಳ್ಳುವ ದೃಶ್ಯಗಳಿವೆ. ಇಲ್ಲಿಯೂ ಕೂಡ ಅದೇ ಮಾದರಿಯಲ್ಲೇ ರಾಜ್ಯ ರಾಜಕಾರಣಕ್ಕೆ ಹೊಂದಿಸಿಕೊಂಡು ಎಐ ವಿಡಿಯೊವನ್ನು ರಚಿಸಲಾಗಿದೆ. ನಿಜವಾದ ಟೀಸರ್ ದೃಶ್ಯಗಳನ್ನೇ ಆಧಾರವಾಗಿಟ್ಟುಕೊಂಡು ಅಲ್ಲಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಇರುವಂತೆ ವಿಡಿಯೊದಲ್ಲಿ ಕಾಣಬಹುದು.

AI-ರಚಿತ ದೃಶ್ಯಗಳು

ಇದೇ ಎಐ ಟೀಸರ್‌ನಲ್ಲಿ 2028 ಎಂದು ತೋರಿಸಲಾಗುತ್ತದೆ. 2008ರ ವಿಧಾನಸಭೆ ಚುನಾವಣೆ ಹೊತ್ತಿಗೆ ಎಚ್.ಡಿ. ಕುಮಾರಸ್ವಾಮಿಯವರು ರಾಜ್ಯ ರಾಜಕಾರಣಕ್ಕೆ ಹಿಂದಿರುಗುತ್ತಾರೆ ಎಂದು ವಿಡಿಯೊ ಕೊನೆಯಲ್ಲಿ ಬಿಂಬಿಸಲಾಗಿದೆ. ಈ ಟೀಸರ್ ಯಾರು ಸಿದ್ಧಪಡಿಸಿದರು ಎಂಬುದು ತಿಳಿದುಬಂದಿಲ್ಲ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

AI-ರಚಿತ ದೃಶ್ಯಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.