ADVERTISEMENT

ಎಲೊನ್ ಮಸ್ಕ್ ಆಫರ್: ಟ್ವಿಟರ್ ಒತ್ತೆಯಾಳಾಗಿಲ್ಲ ಎಂದ ಸಿಇಒ ಪರಾಗ್ ಅಗರ್‌ವಾಲ್

ರಾಯಿಟರ್ಸ್
Published 15 ಏಪ್ರಿಲ್ 2022, 2:45 IST
Last Updated 15 ಏಪ್ರಿಲ್ 2022, 2:45 IST
   

ಉದ್ಯಮಿ ಎಲೊನ್ ಮಸ್ಕ್ ಮೈಕ್ರೋಬ್ಲಾಗಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್ ಖರೀದಿಗೆ ಆಫರ್‌ ನೀಡಿದ ಬೆನ್ನಲ್ಲೇ, ಉದ್ಯೋಗಿಗಳ ಜತೆ ಟ್ವಿಟರ್ ಸಿಇಒ ಪರಾಗ್ ಅಗರ್‌ವಾಲ್ ಮಾತುಕತೆ ನಡೆಸಿದ್ದಾರೆ. ಕಂಪನಿ ಯಾರದೇ ಒತ್ತೆಯಾಳಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಟ್ವಿಟರ್ ಖರೀದಿಗೆ ಎಲೊನ್ ಮಸ್ಕ್ ಉತ್ಸುಕರಾಗಿರುವ ಸಂದರ್ಭದಲ್ಲಿ, ಗುರುವಾರ ಕಂಪನಿ ಎಲ್ಲ ಉದ್ಯೋಗಿಗಳ ಜತೆ ಮಾತನಾಡಿರುವ ಸಿಇಒ ಪರಾಗ್, ಎಲ್ಲ ಉದ್ಯೋಗಿಗಳು ಕೂಡ ಅವರ ಕೆಲಸದ ಬಗ್ಗೆ ಗಮನ ಕೇಂದ್ರೀಕರಿಸಿ. ಕಂಪನಿ ಯಾವುದೇ ಒತ್ತಡದಲ್ಲಿಲ್ಲ ಮತ್ತು ಯಾರದೇ ಒತ್ತೆಯಾಳಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ.

ಟ್ವಿಟರ್ ಖರೀದಿ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ, ಉದ್ಯೋಗಿಗಳು ಸ್ಲ್ಯಾಕ್ ಮೂಲಕ ಸಿಇಒ ಜತೆ ಸಂಪರ್ಕದಲ್ಲಿದ್ದುಕೊಂಡು, ಪ್ರಶ್ನೆಗಳನ್ನು ಕೇಳಿದ್ದಾರೆ.

ADVERTISEMENT

ಟ್ವಿಟರ್ ಮಾರಾಟ ಕುರಿತು ಎಲೊನ್ ಮಸ್ಕ್ ನೀಡಿರುವ ಆಫರ್ ಬಗ್ಗೆ ಮಂಡಳಿ ಪರಿಶೀಲಿಸುತ್ತಿದೆ. ಆದರೆ ಆ ಬಗ್ಗೆ ಹೆಚ್ಚಿನ ವಿವರ ಹೇಳಲಾಗದು ಎಂದು ಪರಾಗ್ ಉದ್ಯೋಗಿಗಳಿಗೆ ತಿಳಿಸಿದ್ದಾರೆ.

ಎಲೊನ್‌ ಮಸ್ಕ್‌ ಅವರು 41 ಬಿಲಿಯನ್‌ ಡಾಲರ್‌ (ಸುಮಾರು ₹3.12 ಲಕ್ಷ ಕೋಟಿ) ನೀಡಿ ಟ್ವಿಟರ್ ಕಂಪನಿ ಖರೀದಿಗೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.