ADVERTISEMENT

ಟ್ವಿಟರ್ ಒಂದು ಕಂಪನಿಯಾಗುತ್ತಿರುವುದರ ಬಗ್ಗೆ ವಿಷಾದವಿದೆ: ಜಾಕ್ ಡೋರ್ಸಿ

ಟ್ವಿಟರ್ ಕಂಪನಿಯ ಪ್ರಸ್ತುತ ಸ್ವರೂಪದ ಬಗ್ಗೆ ಸಂಸ್ಥಾಪಕರ ಬೇಸರ

ರಾಯಿಟರ್ಸ್
Published 26 ಆಗಸ್ಟ್ 2022, 8:20 IST
Last Updated 26 ಆಗಸ್ಟ್ 2022, 8:20 IST
ಟ್ವಿಟರ್ ಸಂಸ್ಥಾಪಕ ಮತ್ತು ಮಾಜಿ ಸಿಇಒ ಜಾಕ್ ಡೋರ್ಸಿ
ಟ್ವಿಟರ್ ಸಂಸ್ಥಾಪಕ ಮತ್ತು ಮಾಜಿ ಸಿಇಒ ಜಾಕ್ ಡೋರ್ಸಿ   

ವಾಷಿಂಗ್ಟನ್: ಟ್ವಿಟರ್ ಒಂದು ಕಂಪನಿಯಾಗಿ ಬದಲಾಗುತ್ತಿರುವುದು ನನಗೆ ಅತ್ಯಂತ ಬೇಸರದ ಸಂಗತಿ. ಆ ಬಗ್ಗೆ ವಿಷಾದವಿದೆ ಎಂದು ಟ್ವಿಟರ್ ಸಂಸ್ಥಾಪಕ ಮತ್ತು ಮಾಜಿ ಕಾರ್ಯನಿರ್ವಹಣಾ ಅಧಿಕಾರಿ ಜಾಕ್ ಡೋರ್ಸಿ ಹೇಳಿದ್ದಾರೆ.

ಟ್ವಿಟರ್ ಬಳಕೆದಾರರೊಬ್ಬರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಜಾಕ್ ಡೋರ್ಸಿ, ಟ್ವಿಟರ್ ಒಂದು ಕಂಪನಿಯಾಗಿದ್ದು ದೊಡ್ಡ ಸಮಸ್ಯೆ ಮತ್ತು ನನಗೆ ವಿಷಾದವನ್ನುಂಟು ಮಾಡಿದೆ ಎಂದಿದ್ದಾರೆ.

ಟ್ವಿಟರ್ ಅನ್ನು ಒಂದು ರಾಷ್ಟ್ರ ಅಥವಾ ಕಂಪನಿ ಹೊಂದುವುದು ಹಾಗೂ ನಿರ್ವಹಿಸುವುದನ್ನು ಜಾಕ್ ಡೋರ್ಸಿ ವಿರೋಧಿಸಿದ್ದಾರೆ.

ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ, ಜನರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಲು ಟ್ವಿಟರ್ ವೇದಿಕೆ ಕಲ್ಪಿಸಿತ್ತು. ಆದರೆ ಈಗ ಟ್ವಿಟರ್ ಮಾರಾಟದ ಮಾತುಕತೆ ನಡೆಯುತ್ತಿದೆ ಎಂದು ಡೋರ್ಸಿ ಹೇಳಿದ್ದಾರೆ.

ಜತೆಗೆ, ಟ್ವಿಟರ್ ಯಾವುದೇ ನಿರ್ಬಂಧವಿಲ್ಲದೆ, ಮುಕ್ತವಾಗಿ ಕಾರ್ಯಾಚರಿಸಲು ಅವಕಾಶ ಕಲ್ಪಿಸಬೇಕು ಎಂದು ಡೋರ್ಸಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.