ADVERTISEMENT

5G Network | ಸಾಫ್ಟ್‌ವೇರ್ ಅಪ್‌ಡೇಟ್ ಒದಗಿಸಲು ಸೂಚಿಸಲಿದೆ ಸರ್ಕಾರ

5G ಅಪ್‌ಡೇಟ್ ಸಲುವಾಗಿ ಆ್ಯಪಲ್ ಮತ್ತು ಸ್ಯಾಮ್‌ಸಂಗ್ ಜತೆ ಸಭೆ ನಡೆಸಲಿದೆ ಸರ್ಕಾರ

ರಾಯಿಟರ್ಸ್
Published 11 ಅಕ್ಟೋಬರ್ 2022, 11:23 IST
Last Updated 11 ಅಕ್ಟೋಬರ್ 2022, 11:23 IST
   

ನವದೆಹಲಿ: ದೇಶದಲ್ಲಿ ಈಗಾಗಲೇ 5G ನೆಟ್‌ವರ್ಕ್ ಅನಾವರಣಗೊಂಡಿದೆ. ಪ್ರಮುಖ ಎಂಟು ನಗರಗಳಲ್ಲಿ ಈಗಾಗಲೇ 5G ನೆಟ್‌ವರ್ಕ್ ಅನ್ನು ಪರಿಚಯಿಸಲಾಗಿದ್ದು, ಮುಂದಿನ ಹಂತದಲ್ಲಿ ಇತರ ನಗರಗಳಿಗೆ ವಿಸ್ತರಿಸಲು ಟೆಲಿಕಾಂ ಕಂಪನಿಗಳು ನಿರ್ಧರಿಸಿವೆ.

ಆದರೆ 5G ನೆಟ್‌ವರ್ಕ್ ಒದಗಿಸಿದ್ದರೂ, 5G ಸ್ಮಾರ್ಟ್‌ಫೋನ್‌ಗಳಿಗೆ ಸೂಕ್ತ ಸಾಫ್ಟ್‌ವೇರ್ ಅಪ್‌ಡೇಟ್ ಲಭ್ಯವಾಗಿಲ್ಲ. 5G ಫೋನ್ ಇದ್ದರೂ, ಅಪ್‌ಡೇಟ್ ಆಗದೆ ಬಳಕೆ ಮಾಡಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಹೀಗಾಗಿ ಶೀಘ್ರದಲ್ಲೇ ಸಾಫ್ಟ್‌ವೇರ್ ಅಪ್‌ಡೇಟ್ ಒದಗಿಸಿ, 5G ಬಳಸಲು ಅನುಕೂಲವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ.

ಆ್ಯಪಲ್, ಸ್ಯಾಮ್‌ಸಂಗ್ ಸಹಿತ ಪ್ರಮುಖ ಮೊಬೈಲ್ ತಯಾರಿಕ ಕಂಪನಿಗಳ ಪ್ರತಿನಿಧಿಗಳ ಜತೆ ಬುಧವಾರ ಸರ್ಕಾರ ಸಭೆ ನಡೆಸಲಿದೆ. ಈ ಸಂದರ್ಭದಲ್ಲಿ ಟೆಲಿಕಾಂ ಕಂಪನಿಗಳ ಅಧಿಕಾರಿಗಳೂ ಉಪಸ್ಥಿತರಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

ಹೊಸದಾಗಿ ಬಿಡುಗಡೆಯಾದ ಫೋನ್‌ಗಳಲ್ಲಿ ಹಾರ್ಡ್‌ವೇರ್ ಬೆಂಬಲವಿದ್ದರೂ, ಸಾಫ್ಟ್‌ವೇರ್ ಅಪ್‌ಗ್ರೇಡ್ ಇಲ್ಲದೆ, 5G ಬಳಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶೀಘ್ರದಲ್ಲೇ ಹೊಸ ಅಪ್‌ಡೇಟ್ ಒದಗಿಸುವಂತೆ ಸರ್ಕಾರ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿಗಳನ್ನು ಒತ್ತಾಯಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.