ADVERTISEMENT

ವಧುವಿನ ಮೇಲೆ ರಾಶಿ ರಾಶಿ ನೋಟು ಸುರಿದ ಕುಟುಂಬ: ವಿಡಿಯೊ ನೋಡಿ

ಏಜೆನ್ಸೀಸ್
Published 18 ಫೆಬ್ರುವರಿ 2026, 13:11 IST
Last Updated 18 ಫೆಬ್ರುವರಿ 2026, 13:11 IST
   

ಚಂಡೀಗಢ: ಮದುವೆ ಮನೆಯಲ್ಲಿ ವಧುವಿನ ಮೇಲೆ ಲಕ್ಷಗಟ್ಟಲೆ ಮೌಲ್ಯದ ಹಣವನ್ನು ಸುರಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಟೀಕೆ ವ್ಯಕ್ತವಾಗಿದೆ. ಪಂಜಾಬ್‌ನ ತರನ್ ತಾರನ್‌ನಲ್ಲಿ ಘಟನೆ ನಡೆದಿದೆ. 

ಸಭಾಂಗಣದ ನಡುವೆ ನಿಂತಿದ್ದ ವಧುವಿನ ಮೇಲೆ ವರ ಸೇರಿದಂತೆ ಕುಟುಂಬದ ಇತರ ಸದಸ್ಯರು ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳನ್ನು ಸುರಿಯುತ್ತಿದ್ದರು. ನಂತರ ವಧುವಿನ ಕೈ ಹಿಡಿದುಕೊಂಡ ವರ ಸಂತೋಷ ವ್ಯಕ್ತಪಡಿಸಿದ್ದಾನೆ. ವಧುವಿನ ಮೇಲೆ ಸುರಿದ ನೋಟುಗಳು ಗಾಳಿಯಲ್ಲಿ ಹಾರಾಡುತ್ತಿರುವ ದೃಶ್ಯಗಳು ವಿಡಿಯೊದಲ್ಲಿದೆ.

ವಧುವಿನ ಮೇಲೆ ₹8.5 ಕೋಟಿಯಷ್ಟು ಹಣ ಸುರಿದಿದ್ದಾರೆ ಎಂದು ಕೆಲವರು ಹೇಳಿದ್ದರೆ, ಇನ್ನೂ ಕೆಲವರು ₹2-4 ಹಣವನ್ನು ವಧುವಿನ ಮೇಲೆ ಸುರಿದಿದ್ದಾರೆ ಎಂದು ಹೇಳಿದ್ದಾರೆ. ಆದರೆ ನಿಖರವಾದ ಮೊತ್ತದ ಬಗ್ಗೆ ಖಚಿತ ಮಾಹಿತಿಯಿಲ್ಲ.

ADVERTISEMENT

ಈ ವಿಡಿಯೊ ನೋಡಿದ ನೆಟ್ಟಿಗರು, ‘ಅದು ಅವರ ಹಣ, ಏನು ಬೇಕಾದರೂ ಮಾಡುತ್ತಾರೆ’ ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು, ‘ಬಡವರಿಗೆ ಸಹಾಯ ಮಾಡಬಹುದಿತ್ತು’ ಎಂದೂ,‘ಈ ವಿಡಿಯೊ ಎಐ ಮೂಲಕ ಸೃಷ್ಟಿಸಿರುವುದಾಗಿರಲಿ ಎಂದುಕೊಳ್ಳುತ್ತೇನೆ’ ಎಂದೂ ಕಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು ‘ಅವುಗಳು ನಕಲಿ ನೋಟುಗಳಾಗಿರಬಹುದು, ಯಾರಿಗೆ ಗೊತ್ತು‘ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.