ಕೀವ್: ರಷ್ಯಾ ಸೇನಾಪಡೆಗಳು ಉಕ್ರೇನ್ ಮೇಲೆ ಸತತ ನಾಲ್ಕನೇ ದಿನವೂ ಶೆಲ್ ಮತ್ತು ಕ್ಷಿಪಣಿ ದಾಳಿಯನ್ನು ಮುಂದುವರಿಸಿದ್ದು, ಅಪಾರ ಸಾವು– ನೋವುಗಳಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಹೆಸರು ಹಲವು ವಿಚಾರಗಳಿಂದಾಗಿ ಮುನ್ನೆಲೆಗೆ ಬಂದಿದೆ.
ಇದಕ್ಕೆ ಮುಖ್ಯ ಕಾರಣ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ.ಕಳೆದ ನಾಲ್ಕು ದಿನಗಳಿಂದ ರಷ್ಯಾ ಸೇನೆ ಉಕ್ರೇನ್ ಮೇಲೆ ದಾಳಿ ನಡೆಸುತ್ತಲೇ ಇದೆ. ಆದರೆ, ತಮ್ಮ ರಾಷ್ಟ್ರಕ್ಕೆ ಎದುರಾಗಿರುವ ಸಂಕಷ್ಟದ ಸಮಯದಲ್ಲಿ ಉಕ್ರೇನ್ ಅಧ್ಯಕ್ಷ ಎದೆಗುಂದದೆ ನಿಂತಿದ್ದಾರೆ. ತಾವೇ ಸೇನಾ ವಸ್ತ್ರ ಧರಿಸಿ, ಬಂದೂಕು ಹಿಡಿದು ಸೈನಿಕರ ಜತೆ ಹೋರಾಟಕ್ಕಿಳಿದಿದ್ದಾರೆ. ಟ್ವೀಟ್, ವಿಡಿಯೊ ಸಂದೇಶದ ಮೂಲಕ ಉಕ್ರೇನ್ ಜನರಿಗೆ ಧೈರ್ಯ, ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ವೊಲೊಡಿಮಿರ್ ಝೆಲೆನ್‌ಸ್ಕಿ ಕಾರ್ಯವೈಖರಿಗೆ ವಿಶ್ವದಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಬೆಳವಣಿಗೆಗಳ ಮಧ್ಯೆ ಅವರ ಹಳೆಯ ಡ್ಯಾನ್ಸ್ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
2006ರಲ್ಲಿ ಸ್ಟಾರ್ ನೃತ್ಯ ಕಲಾವಿದೆಯರ ಜತೆ ಡ್ಯಾನ್ಸ್ ಮಾಡುತ್ತಿದ್ದ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಸಖತ್ ಸ್ಟೆಪ್ಸ್ ಹಾಕಿದ್ದಾರೆ.ಅಧ್ಯಕ್ಷರಾಗುವುದಕ್ಕೂ ಮೊದಲು ಅವರು ಟಿವಿ ಕಾಮಿಡಿಯನ್ ಆಗಿದ್ದರು.
ಉಕ್ರೇನ್ ಅಧ್ಯಕ್ಷ ನಿಜಕ್ಕೂ ಒಬ್ಬ ಲೆಜೆಂಡ್ ಎಂದು ಕೆಲವರು ಹೊಗಳಿದರೆ, ಇನ್ನೂ ಕೆಲವರು, ಇಂತಹ ವಿಡಿಯೊಗಳನ್ನೆಲ್ಲ ವೈರಲ್ ಮಾಡಿದಾಕ್ಷಣ ಯುದ್ಧ ನಿಲ್ಲುವುದಿಲ್ಲ ಎಂದೂ ವ್ಯಂಗ್ಯವಾಡಿದ್ದಾರೆ.
ಝೆಲೆನ್‌ಸ್ಕಿ, ಡ್ಯಾನ್ಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಓದಿ...ಮೊಮ್ಮಕ್ಕಳಿಗಾಗಿ ಉಕ್ರೇನ್ ಸೇನೆ ಸೇರಲು ಮುಂದಾದ 80 ವರ್ಷದ ವೃದ್ಧ: ಫೋಟೊ ವೈರಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.