ಸ್ನೇಹಿತರ ಭೇಟಿ
ಚಿತ್ರ: ಇನ್‌ಸ್ಟಾಗ್ರಾಂ
ಸ್ನೇಹ ಎಂಬುದು ಬಹಳ ಪರಿಶುದ್ಧವಾದದ್ದು, ಇದಕ್ಕೆ ಸಂಬಂಧಿಸಿದ ಅನೇಕ ಸಿನಿಮಾಗಳು ಕೂಡ ಬಂದಿವೆ. ಆದರೆ, ಇಲ್ಲೊಬ್ಬ ಯುವಕ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಬರೋಬ್ಬರಿ 12,800 ಕಿಲೋಮೀಟರ್ ಪ್ರಯಾಣಿಸಿ ಬಂದಿದ್ದಾರೆ.
ಹೌದು, ಯುವಕನೊಬ್ಬ ತನ್ನ ಸ್ನೇಹಿತನನ್ನು ಭೇಟಿಯಾಗಲು ಅಮೆರಿಕದಿಂದ ಭಾರತದ ಪುಣೆಗೆ ಬರೋಬ್ಬರಿ 12,800 ಕಿಲೋಮೀಟರ್ ಪ್ರಯಾಣ ಬೆಳೆಸಿಕೊಂಡು ಬರುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯ ಜೊತೆ ಮಾತನಾಡುತ್ತಾ ಕುಳಿತುಕೊಂಡಿರುತ್ತಾರೆ. ಅದೇ ಸಮಯಕ್ಕೆ ಮುಖಕ್ಕೆ ಖರ್ಚಿಫ್ ಕಟ್ಟಿಕೊಂಡು ಇನ್ನೊಬ್ಬ ವ್ಯಕ್ತಿ ಬರುತ್ತಾರೆ. ಆರಂಭದಲ್ಲಿ, ಬಂದವರು ಯಾರೆಂದು ಕುಳಿದಿದ್ದ ಸ್ನೇಹಿತನಿಗೆ ತಿಳಿದಿರುವುದಿಲ್ಲ.
ಆದರೆ, ವ್ಯಕ್ತಿ ಬಂದ ಕೆಲವೇ ಕ್ಷಣದಲ್ಲಿ ಮುಖಕ್ಕೆ ಹಾಕಿದ್ದ ಖರ್ಚಿಫ್ ತೆಗೆಯುತ್ತಾನೆ. ಕೂಡಲೆ ಕುಳಿತಿದ್ದ ವ್ಯಕ್ತಿ ಎದ್ದು ದೂರದಿಂದ ಸ್ನೇಹಿತನನ್ನು ಕಾಣಲು ಬಂದಿದ್ದ ವ್ಯಕ್ತಿಯನ್ನು ಗಟ್ಟಿಯಾಗಿ ತಬ್ಬಿಕೊಂಡು ಸಂಭ್ರಮಿಸುತ್ತಾನೆ.
ಈ ವಿಡಿಯೊವನ್ನು ಪ್ರೇಶಿತ್ ಗುಜಾರ್ ಎಂಬುವವರು ಹಂಚಿಕೊಂಡಿದ್ದು, ಸರ್ವೇಶ್ ವೈಭವ್ ಟಿಖೆ ಸೇರಿದಂತೆ ಇತರೆ ಸ್ನೇಹಿತರಿಗೆ ಟ್ಯಾಗ್ ಮಾಡಿದ್ದಾರೆ. ಸ್ನೇಹಿತರ ಈ ಅಪೂರ್ವ ಸಂಗಮದ ವಿಡಿಯೊವನ್ನು ಇತರರು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೊ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.