ಈ ವರ್ಷದ ಸಾಧಕಿಯರು ಇವರು. ಕಸ ಆಯ್ದು ಸ್ವಚ್ಫ ಗ್ರಾಮವಾಗಿಸಿರುವ ಮಹಿಳೆಯಿಂದ ಖಗೋಳ ವಿಜ್ಞಾನಿಯವರೆಗೂ ಸಾಮಾಜಿಕ ಬದಲಾವಣೆಯಲ್ಲಿ ಗುರುತರ ಪಾತ್ರವಹಿಸಿರುವ ಈ ಮಹಿಳೆಯರ ಸಾಧನೆಯನ್ನು ಸಂಭ್ರಮಿಸುತ್ತಿದ್ದೇವೆ. ಸಮಾಧಾನದ ಜಗತ್ತಿಗಾಗಿ ಸವಾಲುಗಳನ್ನೆದುರಿಸುತ್ತಲೇ ಉಳಿದವರ ಬದುಕನ್ನು ಸಲೀಸುಗೊಳಿಸಿದವರು. ಯಾರ ಮೆಚ್ಚುಗೆಯ ಹಂಗಿಲ್ಲದೇ ಸಾಧನೆ ಮಾಡಿದವರು. ಸಮಾಜದ ಒಳಿತಿಗಾಗಿ ಶ್ರಮಿಸುವ ಎಲೆಮರೆಕಾಯಿಯಂತೆ ದುಡಿಯುತ್ತಿರುವವರಿಗೆ ಕಳೆದೊಂದು ವರ್ಷದಿಂದ ಗುರುತಿಸಿ 'ಪ್ರಜಾವಾಣಿ ಸಾಧಕಿಯರು' ಪ್ರಶಸ್ತಿ ನೀಡುತ್ತಲಿದೆ. ಕಳೆದ ವರ್ಷ ಸಾಧಕಿಯರ ಸಾಲಿನಲ್ಲಿದ್ದ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರು ಈ ವರ್ಷ ಪದ್ಮಪ್ರಶಸ್ತಿಗೆ ಭಾಜನರಾದರು. ಕ್ರೀಡೆಯನ್ನೂ ಸೇರಿದಂತೆ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಸೇವಾಭಾವಿ ಜೀವಗಳನ್ನು ಈ ವರ್ಷವೂ ಗುರುತಿಸಲಾಗಿದೆ. ಎಲ್ಲ ಅಡೆತಡೆಗಳನ್ನು ಮೀರಿ, ಮುಂದಿನ ತಲೆಮಾರಿಗಾಗಿ ಚಂದದ ಜಗತ್ತು ರೂಪಿಸುವಲ್ಲಿ ತೊಡಗಿಸಿಕೊಂಡಿರುವ ಇವರೆಲ್ಲರೂ ಅಭಿನಂದನಾರ್ಹರು.
ನಫೀಸಾ ಪೆರುವಾಯಿ
ಮನೆ– ಮನೆ ಕಸ ಸಂಗ್ರಹಿಸುವ ‘ಸ್ವಚ್ಛ ವಾಹಿನಿ’ಯ ಸಾರಥಿ. ಕಸಮುಕ್ತ ಗ್ರಾಮಕ್ಕೆ ಶ್ರಮಿಸುತ್ತಿರುವವರು
ನಫೀಸಾ ಪೆರುವಾಯಿ
****
ರಕ್ಷಿತಾ ರಾಜು
ಪ್ಯಾರಾಲಿಂಪಿಕ್ಸ್‌ನಲ್ಲಿ 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಂತರರಾಷ್ಟ್ರೀಯ ಅಂಧ ಕ್ರೀಡಾಪಟು
ರಕ್ಷಿತಾ ರಾಜು
****
ಜಲಜಾಕ್ಷಿ ಕೆ.ಡಿ
ಶಾಲಾ ವಾಹನ ಚಲಾಯಿಸಿ ಮಕ್ಕಳು–ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ, ಮುಟ್ಟಿನ ಕಪ್‌ನ ‘ರಾಯಭಾರಿ’ ಟೀಚರ್
ಜಲಜಾಕ್ಷಿ ಕೆ.ಡಿ.
****
ಸಬಿತಾ ಗುಂಡ್ಮಿ
ಕೊರಗ ಸಮುದಾಯದ ಮೊದಲ ಸಾಧಕಿ. ಕೊರಗ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಉಪನ್ಯಾಸಕಿ
ಸಬಿತಾ ಗುಂಡ್ಮಿ
****
ಪ್ರಾಪ್ತಿ ಮೆಂಡನ್
ಪುರುಷರಂತೆಯೇ ಕಡಲಿನಲ್ಲಿ ನಾಡದೋಣಿ ಮೀನುಗಾರಿಕೆ ನಡೆಸುವ ಸಾಹಸಿ. ಮೀನುಗಾರಿಕೆ ವಿಷಯದಲ್ಲಿ ಎಂಎಫ್‌ಎಸ್‌ಸಿ ಪದವೀಧರೆ
ಪ್ರಾಪ್ತಿ ಮೆಂಡನ್
***
ಜಯಶ್ರೀ ಗುಳಗಣ್ಣನವರ:
ಸಮಸ್ಯೆಗಳಿಗೇ ಸವಾಲೊಡ್ಡುವ ರೀತಿಯಲ್ಲಿ ಸ್ವಾವಲಂಬಿ ಬದುಕು ರೂಪಿಸಿಕೊಂಡು, ಕ್ರೀಡೆಯಲ್ಲಿಯೂ ಸೈ ಎನಿಸಿಕೊಂಡ ದಿಟ್ಟ ಮಹಿಳೆ
ಜಯಶ್ರೀ ಗುಲಗನ್ನವರ್
****
ಸಂಗಮ್ಮ ಸಾಣಕ
ವ್ಯಸನಮುಕ್ತ ಸಮಾಜ ನಿರ್ಮಾಣ ಸಮಿತಿ ಕಟ್ಟಿಕೊಂಡು ತಮ್ಮ ಊರನ್ನು ಸರಾಯಿ ಮುಕ್ತ ಗ್ರಾಮವನ್ನಾಗಿ ರೂಪಿಸಿದ ಗಟ್ಟಿಗಿತ್ತಿ
ಸಂಗಮ್ಮ ಸಾಣಕ
****
ಲಲಿತಾ ರಘುನಾಥ್
ಪುರುಷರಿಗೆ ಸೀಮಿತವಾದ ಬಡಗಿ ಕೆಲಸದಲ್ಲಿ ಕೈಚಳಕ ತೋರುತ್ತಾ, ಶಾಲಾ ಮಕ್ಕಳ ಅಪೌಷ್ಟಿಕತೆ ದೂರ ಮಾಡಲು ಶ್ರಮಿಸುತ್ತಿರುವ ಸಾಧಕಿ
ಲಲಿತಾ ರಘುನಾಥ್
****
ರೂಪಾ ಎಂ.ವಿ
ಉಪಗ್ರಹಗಳ ಕಾರ್ಯಾಚರಣೆ ಮತ್ತು ಸ್ವಾಸ್ಥ್ಯ ವಿಶ್ಲೇಷಣಾ ಕ್ಷೇತ್ರದಲ್ಲಿ ಸಾಧನೆ ಮೆರೆದು ಚಂದ್ರಯಾನ ಯೋಜನೆಯ ರೂವಾರಿಗಳಲ್ಲಿ ಒಬ್ಬರಾದವರು
ರೂಪಾ ಎಂ.ವಿ
****
ದಿವ್ಯಾ ಎಸ್.ಆರ್.
‘ಪಣಿಯನ್’ ಬುಡಕಟ್ಟು ಸಮುದಾಯದಲ್ಲಿ ಶೈಕ್ಷಣಿಕ ಸಂಚಲನ ಮೂಡಿಸಿದ ಸಾಧಕಿ
ದಿವ್ಯಾ ಎಸ್.ಆರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.