ADVERTISEMENT

ಸುಶಾಂತ್ ಸಿಂಗ್‌ ನೆನೆದು ಫೇಸ್‌ಬುಕ್‌ನಲ್ಲಿ ಭಾವುಕ ಪತ್ರ ಬರೆದ ಸೋದರಿ ಶ್ವೇತಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜೂನ್ 2020, 4:12 IST
Last Updated 18 ಜೂನ್ 2020, 4:12 IST
   

ನವದೆಹಲಿ: ಇತ್ತೀಚೆಗೆ ಸಾವು ಕಂಡ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರನ್ನು ನೆನೆದು ಸೋದರಿ ಶ್ವೇತಾ ಸಿಂಗ್‌ ಅವರು ಫೇಸ್‌ಬುಕ್‌ನಲ್ಲಿ ಭಾವುಕ ಪೋಸ್ಟ್‌ ಹಾಕಿದ್ದರೆ.

‘ನೀನು ಅಪಾರ ನೋವಿನಲ್ಲಿದ್ದೆ ಎಂಬುದು ನನಗೆ ಗೊತ್ತಿದೆ. ಸಾಧ್ಯವಾಗಿದ್ದಿದ್ದರೆ, ನಿನ್ನೆಲ್ಲ ನೋವುಗಳನ್ನು ನಾನು ಪಡೆದು, ನನ್ನೆಲ್ಲ ಸಂತೋಷವನ್ನು ನಿನಗೆ ಕೊಡುತ್ತಿದ್ದೆ,’ಎಂದು ಅವರು ಹೇಳಿಕೊಂಡಿದ್ದಾರೆ.

ಪತ್ರದಲ್ಲೇನಿದೆ?

ADVERTISEMENT

ಸುಶಾಂತ್‌ ನಮ್ಮೊಂದಿಗೆ ದೈಹಿಕವಾಗಿ ಇಲ್ಲ. ಸರಿ, ನೀನು (ಸುಶಾಂತ್‌) ನೋವಿನಲ್ಲಿದ್ದೆ ಎಂಬುದು ನನಗೆ ಗೊತ್ತಿದೆ. ನೀನು ಹೋರಾಟಗಾರ ಎಂಬುದೂ ತಿಳಿದಿದೆ. ನೀನು ಧೈರ್ಯದಿಂದ ಹೋರಾಡಿದೆ. ಕ್ಷಮಿಸು, ನೀನು ಅನುಭವಿಸಿದ ನಿನ್ನೆಲ್ಲ ನೋವುಗಳಿಗಾಗಿ ನಮ್ಮನ್ನು ಕ್ಷಮಿಸು. ಸಾಧ್ಯವಾಗಿದ್ದರೆ ನಾನು ನಿನ್ನೆಲ್ಲ ನೋವುಗಳನ್ನು ಪಡೆದು, ನನ್ನೆಲ್ಲ ಸಂತೋಷವನ್ನು ನಿನಗೆ ನೀಡುತ್ತಿದ್ದೆ.
ನಿನ್ನ ಮಿನುಗುವ ಕಣ್ಣುಗಳು ಕನಸನ್ನು ಹೇಗೆ ಕಾಣಬೇಕೆಂಬುದನ್ನು ಜಗತ್ತಿಗೆ ಕಲಿಸಿದವು. ನಿನ್ನ ಮುಗ್ಧ ನಗುವು ನಿನ್ನ ಹೃದಯದ ನಿಷ್ಕಲ್ಮಷವನ್ನು ಬಹಿರಂಗಪಡಿಸಿತ್ತು.

ನೀನ್ನನ್ನು ನಾವು ಎಂದಿಗೂ ಪ್ರೀತಿಸುತ್ತೇವೆ. ಹೆಚ್ಚು ಪ್ರೀತಿಸುತ್ತೇವೆ. ನೀನು ಎಲ್ಲೇ ಇರು ಸಂತೋಷವಾಗಿರು. ಸಂತೃಪ್ತನಾಗಿರು. ನಿನ್ನನ್ನು ಎಲ್ಲರೂ ಪ್ರೀತಿಸುತ್ತಾರೆ, ನಿಸ್ಸಂಶಯವಾಗಿ ಎಲ್ಲರೂ ಇಷ್ಟಪಡುತ್ತಾರೆ.
ನನ್ನೆಲ್ಲ ಪ್ರೀತಿ ಪಾತ್ರರೇ, ಇದು ಕ್ಲಿಷ್ಟಮಯ ಸನ್ನಿವೇಶ. ಆದರೆ ದ್ವೇಷದ ವಿರುದ್ಧ ನೀವು ಪ್ರೀತಿಯನ್ನು ಆಯ್ಕೆ ಮಾಡಿಕೊಳ್ಳಿ. ಕೋಪ ಮತ್ತು ಅಸಮಾಧಾನಕ್ಕಿಂತ ದಯೆ ಮತ್ತು ಸಹಾನುಭೂತಿಯನ್ನು ಆರಿಸಿಕೊಳ್ಳಿ, ಸ್ವಾರ್ಥಕ್ಕಿಂತ ಹೆಚ್ಚಾಗಿ ನಿಸ್ವಾರ್ಥತೆಯನ್ನು ಆರಿಸಿಕೊಳ್ಳಿ ಮತ್ತು ಜನರನ್ನು ಕ್ಷಮಿಸಿ

ಪ್ರತಿಯೊಬ್ಬರೂ ತಮ್ಮದೇ ಹೋರಾಟಗಳಲ್ಲಿ ನಿರತರಾಗಿದ್ದಾರೆ. ಆದರೆ, ನಿಮ್ಮ ಬಗ್ಗೆ ನೀವೇ ಸಹಾನುಭೂತಿ ಹೊಂದಿರಬೇಕು. ಮತ್ತು, ಎಲ್ಲರಿಗೂ ಸಹಾನುಭೂತಿ ತೋರಿಸಿ.
ಯಾವುದೇ ಹಂತದಲ್ಲೂ, ಯಾವುದೇ ಕಾರಣಕ್ಕೂ ನಿಮ್ಮ ಹೃದಯವನ್ನು ನಿರ್ಬಂಧಕ್ಕೆ ಒಡ್ಡಿಕೊಳ್ಳಬೇಡಿ...

ಹೀಗೆ ಶ್ವೇತಾ ಸಿಂಗ್‌ಅವರುತಮ್ಮ ಮನದ ನೋವನ್ನು ಫೇಸ್‌ಬುಕ್‌ ವಾಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.