
ಚಿತ್ರ: ಗೆಟ್ಟಿ
ವರ್ಷಾಂತ್ಯದಲ್ಲಿ ಬರುವ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆಯನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ನಾಳೆ (ಡಿಸೆಂಬರ್ 19) ರಂದು ಎಳ್ಳು ಅಮವಾಸ್ಯೆ ಬಂದಿದೆ. ಈ ದಿನ ಬೆಳಗಿನಜಾವ 4ಗಂಟೆ 2ನಿಮಿಷದಿಂದ ಆರಂಭವಾಗಿ ಮರುದಿನ ಬೆಳಗಿನಜಾವ 6ಗಂಟೆ 5ನಿಮಿಷಕ್ಕೆ ಕೊನೆಗೊಳ್ಳಲಿದೆ.
ಈ ದಿನ ಕೇತು ಜಯಂತಿ ಇರುವುದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಕೂಡಿ ಬರಲಿದೆ ಎಂದು ಜ್ಯೋತಿಷದಲ್ಲಿ ತಿಳಿಸಿದೆ.
ಈ ದಿನ ಮನೆಯಲ್ಲಿ ಲಕ್ಷ್ಮೀ ದೇವಿಯನ್ನು ಆರಾಧಿಸಬೇಕು. ವಿವಿಧ ರೀತಿಯ ಫಲ, ಪುಷ್ಪ ಹಾಗೂ ಎಳ್ಳನ್ನು ಲಕ್ಷ್ಮೀಗೆ ನೈವೇದ್ಯ ಮಾಡುವುದರಿಂದ ಒಳಿತಾಗಲಿದೆ.
ಎಳ್ಳು ಅಮಾವಾಸ್ಯೆಯನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುವುದರಿಂದ ಶನಿದೋಷ ಹಾಗೂ ಸಾಡೆ ಸಾತಿಯಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇದೆ.
ಈ ಅಮಾವಾಸ್ಯೆಯ ತಿಥಿಯಂದು ಯಾವುದೇ ಮರಗಳನ್ನು ಕಡಿಯಬಾರದು. ಸಸ್ಯ ಸಂಕುಲಕ್ಕೆ ಹಾನಿ ಮಾಡಬಾರದು. ಒಂದು ವೇಳೆ ಮರ ಕಡಿದರೆ, ಒಂದು ವರ್ಷದವರೆಗೆ ಕೇತುವಿನ ದೋಷಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.
ಈ ಅಮಾವಾಸ್ಯೆಯ ದಿನ ತಡವಾಗಿ ಮಲಗುವುದು, ಉಗುರುಗಳನ್ನು ಕತ್ತರಿಸುವುದನ್ನು ಮಾಡಬಾರದು. ಈ ರೀತಿ ಮಾಡುವುದರಿಂದ ಪಿತೃ ದೋಷಕ್ಕೆ ಒಳಗಾಗುವ ಸಾಧ್ಯತೆ ಇದೆ ಎನ್ನುತ್ತದೆ ಜ್ಯೋತಿಷ.
ಅಮಾವಾಸ್ಯೆ ದಿನ ನಾಯಿ ಅಥವಾ ಕಾಗೆಗಳಿಗೆ ಆಹಾರ ನೀಡುವುದು ಶುಭದಾಯಕವಾಗಿದೆ. ಜೊತೆಗೆ ಕಬ್ಬಿಣ, ಉಪ್ಪು ಹಾಗೂ ಎಣ್ಣೆಯಂತಹ ವಸ್ತುಗಳನ್ನು ಖರೀದಿಸಬಾರದು.
ಅಮಾವಾಸ್ಯೆ ತಿಥಿಯೆಂದು ರಾತ್ರಿ ಸಮಯದಲ್ಲಿ ನಕರಾತ್ಮಕ ಶಕ್ತಿಗಳು ಹೆಚ್ಚಾಗಿರುತ್ತವೆ. ಆದ್ದರಿಂದ ನಿರ್ಜನ ಪ್ರದೇಶ, ಸ್ಮಶಾನ ಅಥವಾ ಮನೆಯಲ್ಲಿಯೇ ರಾತ್ರಿ ಸಮಯದಲ್ಲಿ ಎದ್ದು ಓಡಾಡುವುದನ್ನು ಮಾಡಬಾರದು ಎಂದೆನ್ನುತ್ತಾರೆ ಜ್ಯೋತಿಷಿಗಳು.
ಎಳ್ಳು ಅಮವಾಸ್ಯೆಯಂದು ಲಕ್ಷ್ಮೀದೇವಿಯ ಆರಾಧನೆ ಮಾಡುವುದರಿಂದ ಬಡತನ ನಿವಾರಣೆಯಾಗುತ್ತದೆ. ಆರೋಗ್ಯ ಸಮಸ್ಯೆ ಇರುವವರು ಆರೋಗ್ಯವಂತರಾಗುವ ಸಾಧ್ಯತೆ ಹಗೂ ಆರ್ಥಿಕ ಲಾಭ ಪಡೆದುಕೊಳ್ಳಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.