
ಗೆಟ್ಟಿ ಚಿತ್ರ
ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನಮಾನವಿದೆ. ಈ ಗಿಡವನ್ನು ನಿತ್ಯ ಪೂಜೆ ಮಾಡುವುದರಿಂದ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ತುಳಸಿ ಪೂಜೆಯಿಂದ ಎನೆಲ್ಲಾ ಲಾಭಗಳು ದೊರೆಯಲಿವೆ ಎಂಬುದನ್ನು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ತಿಳಿಸಿದ್ದಾರೆ.
ತುಳಸಿಗೆ ಪೂಜೆ ಸಲ್ಲಿಸುವುದರಿಂದ ಆರೋಗ್ಯದ ಸಮಸ್ಯೆಗಳು ಪರಿಹಾರವಾಗುವುದರ ಜೊತೆ ಮನೆಯಲ್ಲಿ ಶಾಂತಿ ಲಭಿಸುತ್ತದೆ ಎಂಬ ನಂಬಿಕೆ ಇದೆ.
ತುಳಸಿಯ ಜೊತೆ ಸಾಲಿಗ್ರಾಮ, ಗೋಮುತಿ ಚಕ್ರ , ಶ್ರೀ ಕೃಷ್ಣನ ವಿಗ್ರಹ, ಬೆಟ್ಟದ ನೆಲ್ಲಿಕಾಯಿ ಅಥವಾ ನವಿಲುಗರಿ ಇಟ್ಟು ಪೂಜಿಸುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.
ನೈವೇದ್ಯಕ್ಕೆ ಇಂತಹ ಆಹಾರವನ್ನೇ ಇಡಬೇಕು ಎಂಬ ನಿಯಮವಿಲ್ಲ. ಆದರೆ ಶ್ರೀ ಕೃಷ್ಣನಿಗೆ ಪ್ರಿಯವಾದ ಕೆಂಪು ಅವಲಕ್ಕಿ ನೈವೇದ್ಯವಾಗಿ ಇಡುವುದು ಶುಭಕರ. ತುಳಸಿ ಪೂಜೆಯಲ್ಲಿ ಅರಿಶಿನ, ಕುಂಕುಮ, ಹಣ್ಣುಗಳು, ಬಳೆ ಹಾಗೂ ಹೂವು ಇಟ್ಟು ಪೂಜಿಸಬೇಕು.
ಬೆಟ್ಟದ ನೆಲ್ಲಿಕಾಯಿ ದೀಪ (ನೆಲ್ಲಿ ಕಾಯಿಯನ್ನು ಹಚ್ಚಿ ಅದರ ಒಳಭಾಗವನ್ನು ತೆಗೆದು ಅದರೊಳಗೆ ತುಪ್ಪದ ದೀಪವನ್ನು ಹಚ್ಚುವುದು)
ಪಂಚ ಗೌವ್ಯ ದೀಪ ( ಪಂಚಾಮೃತವನ್ನು ಬಳಸಿಕೊಂಡು ಗೋದಿ ಇಟ್ಟಿನಿಂದ ಬಟ್ಟಲು ಆಕಾರದ ದೀಪ ತಯಾರಿಸಿ ಅದರೊಳಗೆ ತುಪ್ಪದ ದೀಪ ಹಚ್ಚುವುದು)
ತುಳಸಿ ಪೂಜೆಗೆ ಮುನ್ನ ಗಣಪತಿಗೆ ಪೂಜೆ ಸಲ್ಲಿಸಬೇಕು. ಬಳಿಕ ಮನೆ ದೇವರನ್ನು ಪೂಜಿಸಿ, ತುಳಸಿ ಹಾಗೂ ಶ್ರೀ ವಿಷ್ಣುಗೆ ಪೂಜೆ ಸಲ್ಲಿಸಬೇಕು.
ಪೂಜೆಯ ಸಂದರ್ಭದಲ್ಲಿ ಕನಿಷ್ಠ ಐವರು ಮುತ್ತೈದೆಯರನ್ನು ಆಹ್ವಾನಿಸಿ, ಅವರಿಗೆ ಅರಿಶಿನ, ಕುಂಕುಮ ಕೊಟ್ಟು ಅವರ ಆಶೀರ್ವಾದವನ್ನು ಪಡೆಯುವುದು ಶುಭಕರ ಎಂದು ಜ್ಯೋತಿಷಿ ಎಲ್.ವಿವೇಕಾನಂದ ಆಚಾರ್ಯ ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.