ADVERTISEMENT

ಬೇಸಿಗೆಯಲ್ಲಿ ಕಾಟನ್‌ ಸೀರೆ ವಿಶೇಷತೆ ಏನು? ಸ್ಟೈಲಿಶ್ ಲುಕ್‌ಗಾಗಿ ಇಲ್ಲಿದೆ ಟಿಪ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2026, 4:13 IST
Last Updated 27 ಫೆಬ್ರುವರಿ 2026, 4:13 IST
<div class="paragraphs"><p>ಎಐ ಚಿತ್ರಗಳು</p></div>

ಎಐ ಚಿತ್ರಗಳು

   

ಇನ್ನೇನು ಬೇಸಿಗೆ ಶುರುವಾಯ್ತು, ಸೀರೆ ಧರಿಸುವ ಮಹಿಳೆಯರಿಗೆ ಒಂದಿಷ್ಟು ತಲೆನೋವೂ ಶುರುವಾಯ್ತು, ಯಾಕಂದ್ರೆ ಮಾಮುಲಿ ಸೀರೆಗಳನ್ನು ಬೇಸಿಗೆ ಕಾಲದಲ್ಲಿ ಉಡುವುದು ಕಷ್ಟ. ಹಬೆ, ಬೆವರು ಮುಂತಾದ ಕಾರಣಗಳಿಂದ ಸೀರೆ ಉಟ್ಟು ದಿನ ಕಳೆಯುವುದು ಅಷ್ಟು ಸುಲಭವಲ್ಲ. ಹಾಗಾಂತ ಸೀರೆ ಉಡುದೇ ಬಿಡೋದ? ಇಲ್ಲ, ಉಡುವ ಸೀರೆಗಳ ಆಯ್ಕೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ಸಾಕು, ಬೇಸಿಗೆಯಲ್ಲೂ ಸೀರೆಗಳನ್ನೇ ಉಟ್ಟು ಸಂಭ್ರಮಿಸಬಹುದು. ಹಾಗಾದರೆ ಬೇಸಿಗೆ ಕಾಲಕ್ಕೆ ತಕ್ಕಂತ ಸೀರೆಗಳು ಯಾವುವು, ಅದನ್ನು ಯಾವ ರೀತಿ ಸ್ಟೈಲಿಶ್‌ ಆಗಿ ಉಡಬಹುದು ಎಂಬುದು ನೋಡುವುದಾದರೆ;

ಕಾಟನ್‌ ಸೀರೆಗಳು ಬೇಸಿಗೆಗೆ ಅತ್ಯುತ್ತಮ ಆಯ್ಕೆ ಎಂದರೆ ತಪ್ಪಲ್ಲ. ಈ ಸೀರೆ ಉಟ್ಟರೆ ಒಂದು ಒಳ್ಳೆ ಲುಕ್‌ ಬರೋದಂತು ಖಂಡಿತ. ಕಾಟನ್‌ ಸೀರೆಗಳು ಅಂದಕ್ಕೆ ಮಾತ್ರವಲ್ಲ, ದೇಹಕ್ಕೂ ಹಿತ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ವೈಶಿಷ್ಟ್ಯವನ್ನು ಕಾಟನ್‌ ಸೀರೆಗಳು ಹೊಂದಿದೆ. ಈ ಸೀರೆಗಳಲ್ಲಿ ಗಾಳಿ ಆಡುತ್ತವೆ. ಇದರಿಂದ ಬೆವರುವುದು ತಪ್ಪುತ್ತದೆ. ಲೈಟ್‌ ವೇಟ್ ಆಗಿರುವುದರಿಂದ ದಿನ ಪೂರ್ತಿ ಧರಿಸರಿದರೂ ಆಯಾಸ ಎನಿಸದು. ಕಾಟನ್‌ ಸೀರೆಗಳು ಚರ್ಮಕ್ಕೂ ಹಿತ. ಹಾಗಾಗಿ, ಸಾಮಾನ್ಯವಾಗಿ ಆಲರ್ಜಿ ಸಮಸ್ಯೆಗಳು ಕಾಡುವುದಿಲ್ಲ.

ADVERTISEMENT
ದಶಕಗಳ ಇತಿಹಾಸ ಇರುವ ಕಾಟನ್‌ ಸೀರೆಗಳ ವಿಧಗಳು ಹಾಗೂ ವಿಶೇಷತೆ

*ಮಲ್ ಮಲ್ ಕಾಟನ್: ಇದು ಅತ್ಯಂತ ಮೃದುವಾದ ಮತ್ತು ಲೈಟ್‌ ವೇಟ್ (ಹಗುರ) ಕಾಟನ್ ಸೀರೆ. ಈ ಹಿಂದೆ ರಾಜಮನೆತನದವರು ಇದನ್ನು ಬಳಸುತ್ತಿದ್ದರು. ಸುಡುವ ಬಿಸಿಲಿಗೆ ಇದು ಅತ್ಯುತ್ತಮ ಆಯ್ಕೆ.

*ಇಳಕಲ್ ಸೀರೆ: ಇದು ನಮ್ಮ ಕರ್ನಾಟಕದ ಹೆಮ್ಮೆಯ ಸೀರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ಎಂಬಲ್ಲಿ ತಯಾರಾಗುತ್ತದೆ. ಇದರ ಸೆರಗಿನ (ಪಲ್ಲು) ಭಾಗವು 'ಟೋಪೆನಿ ತೇಣಿ' ಎಂಬ ವಿಶಿಷ್ಟ ವಿನ್ಯಾಸವನ್ನು ಹೊಂದಿರುತ್ತದೆ. ಇದು ನಿತ್ಯದ ಬಳಕೆ ಜತೆಗೆ ಆಫೀಸ್ ಹೋಗುವವರಿಗೂ ಬಹಳ ಕಂಫರ್ಟಬಲ್ ಆಗಿರುತ್ತದೆ.

ಮಲ್ ಮಲ್ ಕಾಟನ್

* ಚಂದೇರಿ ಕಾಟನ್: ಮಧ್ಯಪ್ರದೇಶ ಮೂಲದ ಈ ಸೀರೆಗಳಲ್ಲಿ ಹತ್ತಿ ಮತ್ತು ರೇಷ್ಮೆಯ ಮಿಶ್ರಣವಿರುತ್ತದೆ. ಈ ಸೀರೆಗಳು ಉಟ್ಟರೆ ಹಗುರ ಎನಿಸುತ್ತದೆ. ಸೀರೆಗಳ ಮೇಲೆ ಸಣ್ಣ ಸಣ್ಣ ಬೂಟಾ ವಿನ್ಯಾಸಗಳು ಇರುತ್ತವೆ.

* ಕಾಟನ್ ಪೇಠಣಿ: ಮಹಾರಾಷ್ಟ್ರದ ಪೇಠಣಿ ಸೀರೆಗಳು ಸಾಮಾನ್ಯವಾಗಿ ರೇಷ್ಮೆಯಲ್ಲಿ ತಯಾರಿಸಲಾಗುತ್ತದೆ, ಆದರೆ ಈಗ ಕಾಟನ್‌ನಲ್ಲೂ ಲಭ್ಯವಿವೆ. ಸೆರಗಿನಲ್ಲಿ ನವಿಲಿನ ಚಿತ್ರ ಮತ್ತು ಸುಂದರವಾದ ಬಾರ್ಡರ್ ಇರುತ್ತದೆ. ಹಬ್ಬಗಳಿಗೆ ಇದು ಸೂಕ್ತ.

ಕೋಟಾ ಡೋರಿಯಾ

* ಕೋಟಾ ಡೋರಿಯಾ: ರಾಜಸ್ಥಾನದ ಕೋಟಾ ಎಂಬಲ್ಲಿ ತಯಾರಾಗುವ ಈ ಸೀರೆಗಳು ಬಹಳ ಪ್ರಸಿದ್ಧಿ ಪಡೆದಿವೆ. ಸೀರೆಯ ಮೇಲೆ ಸಣ್ಣ ಚೌಕಾಕಾರದ ವಿನ್ಯಾಸಗಳು ಇರುತ್ತವೆ. ತೆಳುವಾದ ಸೀರೆಗಳಾಗಿದ್ದು ಧರಿಸಲು ಸುಲಭ ಹಾಗೂ ಲೈಟ್‌ ವೇಟ್.

* ಮಂಗಳಗಿರಿ ಕಾಟನ್: ಆಂಧ್ರಪ್ರದೇಶದ ಈ ಸೀರೆಗಳು ಸಿಂಪಲ್ ಆಗಿರುತ್ತದೆ. ಸೀರೆ ಪ್ಲೇನ್‌ ಆಗಿದ್ದರೂ ಬಾರ್ಡರ್‌ನಲ್ಲಿ ಜರಿ ವರ್ಕ್‌ ಇರುತ್ತದೆ. ಇದು ಆಫೀಸ್‌ ವೇರ್‌ ಪರಿಕಲ್ಪನೆಗೆ ಸೂಕ್ತ.

ಇಳಕಲ್ ಸೀರೆ

*ಖಾದಿ ಕಾಟನ್: ಕೈಮಗ್ಗದಲ್ಲಿ ನೇಯ್ದ ನೈಸರ್ಗಿಕ ಬಟ್ಟೆ. ಇದು ಚಳಿಗಾಲದಲ್ಲಿ ಬೆಚ್ಚಗೆ ಮತ್ತು ಬೇಸಿಗೆಯಲ್ಲಿ ತಂಪೆನಿಸುತ್ತದೆ. ಇದು ಪರಿಸರ ಸ್ನೇಹಿ ಕೂಡ.

ಮಂಗಳಗಿರಿ ಕಾಟನ್

ಕಾಟನ್ ಸೀರೆಗಳಿಗೆ ಮಾಡರ್ನ್ ಬ್ಲೌಸ್ ಧರಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಟ್ರೆಂಡ್ ಹುಟ್ಟು ಹಾಕಿದೆ. ನೀವು ಸ್ಟೈಲಿಶ್ ಆಗಿ ಕಾಣಲು ಈ ಕೆಳಗಿನ ಟಿಪ್ಸ್ ಅನುಸರಿಸಬಹುದು:

ಬ್ಲೌಸ್ ವಿನ್ಯಾಸಗಳ ಆಯ್ಕೆ: ಹೈ ನೆಕ್ ಮತ್ತು ಕಾಲರ್ ನೆಕ್ ಬ್ಲೌಸ್‌ಗಳು ಆಫೀಸ್ ಅಥವಾ ಪ್ರೊಫೆಷನಲ್ ಮೀಟಿಂಗ್‌ಗಳಿಗೆ ಸೂಕ್ತ. ಸ್ಲೀವ್‌ಲೆಸ್ ಅಥವಾ ಹಾಲ್ಟರ್ ನೆಕ್, ಬೇಸಿಗೆಯ ಬಿಸಿಲಿಗೆ ಆರಾಮದಾಯಕ. ಜತೆಗೆ ಮಾಡರ್ನ್ ಆಗಿಯೂ ಕಾಣಿಸುತ್ತದೆ. ಕಾಟನ್ ಸೀರೆಗೆ ಬೋಟ್ ನೆಕ್ ಬ್ಲೌಸ್ ತುಂಬಾ ಎಲಿಗಂಟ್ ಆದ ಲುಕ್ ನೀಡುತ್ತದೆ. ಪಫ್ ಸ್ಲೀವ್ಸ್, ಹಳೆಯ ಕಾಲದ ಈ ಡಿಸೈನ್ ಈಗ ಮತ್ತೆ ಟ್ರೆಂಡ್‌ನಲ್ಲಿದೆ. ಇದು ಸೀರೆಗೆ ವಿಂಟೇಜ್ ಮತ್ತು ಕ್ಯೂಟ್ ಲುಕ್ ನೀಡುತ್ತದೆ.

ಚಂದೇರಿ ಕಾಟನ್

ಮಿಕ್ಸ್ ಅಂಡ್ ಮ್ಯಾಚ್: ಸೀರೆಯ ಬಣ್ಣದ್ದೇ ಬ್ಲೌಸ್ ಹಾಕುವ ಬದಲು ಸ್ವಲ್ಪ ಭಿನ್ನವಾಗಿ ಪ್ರಯತ್ನಿಸಿ. ಕಾಂಟ್ರಾಸ್ಟ್ ಕಲರ್‌ಗಳನ್ನು ಬಳಸಿ. ತಿಳಿ ಬಣ್ಣದ ಸೀರೆಗೆ ಗಾಢ ಬಣ್ಣದ ಬ್ಲೌಸ್ (ಉದಾಹರಣೆಗೆ ಬಿಳಿ ಸೀರೆಗೆ ಕೆಂಪು ಅಥವಾ ನೀಲಿ ಬ್ಲೌಸ್). ಪ್ಲೇನ್ ಕಾಟನ್ ಸೀರೆಗೆ ಕಲಂಕರಿ, ಅಜ್ರಕ್ ಅಥವಾ ಇಕತ್ ಪ್ರಿಂಟ್ ಇರುವ ಬ್ಲೌಸ್‌ಗಳು ಧರಿಸಿದರೆ ಸೀರೆಗೆ ಮೆರಗು ನೀಡುತ್ತವೆ.

ಸೀರೆ ಉಡುವಾಗ ಈ ಟಿಪ್ಸ್‌ ಪಾಲಿಸಿ

*ಸೀರೆ ಉಟ್ಟ ಮೇಲೆ ಸೊಂಟಕ್ಕೆ ಒಂದು ತೆಳುವಾದ ಲೆದರ್ ಬೆಲ್ಟ್ ಅಥವಾ ಮೆಟಾಲಿಕ್ ಬೆಲ್ಟ್ ಧರಿಸಿ. ಇದು ಮಾಡರ್ನ್ ಲುಕ್ ನೀಡುತ್ತದೆ.

*ಸೆರಗನ್ನು ಪಿನ್ ಮಾಡದೆ ಹಾಗೆಯೇ ಫ್ರೀಯಾಗಿ ಬಿಟ್ಟರೆ ಅದು ಮಾಡರ್ನ್ ಬ್ಲೌಸ್‌ನ ವಿನ್ಯಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ.

*ಕಾಟನ್ ಸೀರೆಯನ್ನು ಸ್ವಲ್ಪ ಹಿಮ್ಮಡಿ ಕಾಣುವಂತೆ ಉಡುವುದು ಈಗಿನ ಟ್ರೆಂಡ್. ಕ್ಯಾಶುಯಲ್ ಆಗಿ ಕಾಣಲು ಬಿಳಿ ಅಥವಾ ಕಪ್ಪು ಟಿ-ಶರ್ಟ್ ಮೇಲೆ ಕಾಟನ್ ಸೀರೆ ಉಡಬಹುದು.

*ಸೀರೆಯೊಂದಿಗೆ ಫಾರ್ಮಲ್ ಶರ್ಟ್ ಧರಿಸಿ, ಅದರ ಮೇಲೆ ಬೆಲ್ಟ್ ಹಾಕಿಕೊಂಡರೆ ಇಂಡೋ-ವೆಸ್ಟರ್ನ್ ಲುಕ್ ಸಿಗುತ್ತದೆ.

*ಮಾರುಕಟ್ಟೆಯಲ್ಲಿ ಸಿಗುವ ಡಿಸೈನರ್ ಕ್ರಾಪ್ ಟಾಪ್‌ಗಳನ್ನು ನೇರವಾಗಿ ಬ್ಲೌಸ್ ಆಗಿ ಬಳಸಬಹುದು.

ಮಾಡರ್ನ್ ಲುಕ್‌ಗಾಗಿ ಕೆಲವು ಸಲಹೆಗಳು

*ಆಭರಣಗಳು: ಕಾಟನ್ ಸೀರೆಗೆ 'ಆಕ್ಸಿಡೈಸ್ಡ್ ಸಿಲ್ವರ್' ಆಭರಣಗಳು ಅತಿ ಹೆಚ್ಚು ಒಪ್ಪುತ್ತವೆ. ದೊಡ್ಡದೊಂದು ನೆಕ್ಲೇಸ್ ಅಥವಾ ಕಿವಿಯೋಲೆ ಹಾಕಿಕೊಂಡರೆ ಸಾಕು.

*ಕೇಶವಿನ್ಯಾಸ: ಮೆಸ್ಸಿ ಬನ್ ಅಥವಾ ಲೂಸ್ ಹೇರ್ ಸ್ಟೈಲ್ ಮಾಡಿ.

*ಪಾದರಕ್ಷೆ: ಸೀರೆಯೊಂದಿಗೆ ಜುತಿ (Juttis) ಅಥವಾ ಹೀಲ್ಸ್ ಧರಿಸುವುದು ಉತ್ತಮ.

*ಪ್ರೊ ಟಿಪ್: ಕಾಟನ್ ಸೀರೆ ಸ್ವಲ್ಪ ಸ್ಟಿಪ್ (Stiff) ಆಗಿರುವುದರಿಂದ, ಮಾಡರ್ನ್ ಲುಕ್‌ಗಾಗಿ ಸೀರೆಯನ್ನು ಅಚ್ಚುಕಟ್ಟಾಗಿ ಐರನ್ ಮಾಡಿ ಉಡುವುದು ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.