ADVERTISEMENT

Union Budget-2022: ನವೋದ್ಯಮಕ್ಕೆ ಪ್ರೋತ್ಸಾಹ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 18:58 IST
Last Updated 1 ಫೆಬ್ರುವರಿ 2022, 18:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೇಶದ ಆರ್ಥಿಕತೆಯ ಬೆಳವಣಿಗೆಗೆ ‘ಚಾಲಕ’ ಎಂಬಂತೆ ಸ್ಟಾರ್ಟ್ಅಪ್‌ಗಳು (ನವೋದ್ಯಮ) ಹೊರಹೊಮ್ಮಿದ್ದು, ಅನೇಕ ನವೋದ್ಯಮಗಳು ಯಶಸ್ಸು ಕಂಡಿವೆ. 2022ರ ಮಾರ್ಚ್‌ 31ಕ್ಕೂ ಮುನ್ನ ಸ್ಥಾಪಿಸಲಾಗಿರುವ ಅರ್ಹ ನವೋದ್ಯಮಗಳಿಗೆ ಪ್ರೋತ್ಸಾಹದಾಯಕವಾಗಿ ತೆರಿಗೆ ವಿನಾಯ್ತಿ ನೀಡಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ಈ ವರ್ಷವೂ ಸ್ಟಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತೆರಿಗೆ ರಿಯಾಯಿತಿ ನೀಡಲಾಗುತ್ತದೆ.

ಹೊಸದಾಗಿ ಆರಂಭವಾಗಿರುವ ನವೋದ್ಯಮಗಳಿಗೆ ಒಂದು ವರ್ಷದ ಅವಧಿಯವರೆಗೆ ಅಂದರೆ 2023ರ ಮಾರ್ಚ್ 31ರವರೆಗೆ ತೆರಿಗೆ ರಿಯಾಯಿತಿ ದೊರೆಯಲಿದೆ. ತೆರಿಗೆ ರಿಯಾಯಿತಿಯು ನವೋದ್ಯಮ ಕ್ಷೇತ್ರಕ್ಕೆ ಪ್ರೋತ್ಸಾಹದಾಯಕವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೆಟ್ರೊ ಯೋಜನೆಗಳಿಗೆ ₹19,130 ಕೋಟಿ
ದೇಶದಾದ್ಯಂತ ವಿವಿಧ ಮೆಟ್ರೊ ಯೋಜನೆಗಳಿಗಾಗಿ ₹19,130 ಕೋಟಿ ಅನುದಾನ ನೀಡಲಾಗಿದೆ. ಕಳೆದ ಸಾಲಿನಲ್ಲಿ ₹18,978 ಕೋಟಿ ಅನುದಾನ ನೀಡಲಾಗಿತ್ತು.

ADVERTISEMENT

ದೆಹಲಿ ಮೆಟ್ರೊ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಡಿಎಂಆರ್‌ಸಿ) ಅಲ್ಲದೇ ದೇಶದ ಎಲ್ಲಾ ಮೆಟ್ರೊ ಯೋಜನೆಗಳಿಗೂ ಬಜೆಟ್‌ ಅನುದಾನ ನೀಡಲಾಗುತ್ತದೆ. ಲಖನೌ, ಕೊಚ್ಚಿ, ಮುಂಬೈ, ಬೆಂಗಳೂರು, ಹೈದರಾಬಾದ್‌ ಮತ್ತು ಕಾನ್ಪುರಾದಲ್ಲಿ ಮೆಟ್ರೊ ಸೇವೆ ಇದೆ.

ಇ–ಪಾಸ್‌ಪೋರ್ಟ್
ಎಂಬೆಡೆಡ್ ಚಿಪ್ ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಇ-ಪಾಸ್‌ಪೋರ್ಟ್‌ಗಳ ವಿತರಣೆಗೆ ಚಾಲನೆ. ವಿದೇಶ ಪ್ರವಾಸ ಮತ್ತಷ್ಟು ಸರಳಗೊಳಿಸಲು ಆಧುನಿಕ ತಂತ್ರಜ್ಞಾನ ಜಾರಿ.

ಮೆಟ್ರೊ ಯೋಜನೆಗಳಿಗೆ ₹19,130 ಕೋಟಿ
ದೇಶದಾದ್ಯಂತ ವಿವಿಧ ಮೆಟ್ರೊ ಯೋಜನೆಗಳಿಗಾಗಿ ₹19,130 ಕೋಟಿ ಅನುದಾನ ನೀಡಲಾಗಿದೆ. ಕಳೆದ ಸಾಲಿನಲ್ಲಿ ₹18,978 ಕೋಟಿ ಅನುದಾನ ನೀಡಲಾಗಿತ್ತು.

ದೆಹಲಿ ಮೆಟ್ರೊ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಡಿಎಂಆರ್‌ಸಿ) ಅಲ್ಲದೇ ದೇಶದ ಎಲ್ಲಾ ಮೆಟ್ರೊ ಯೋಜನೆಗಳಿಗೂ ಬಜೆಟ್‌ ಅನುದಾನ ನೀಡಲಾಗುತ್ತದೆ. ಲಖನೌ, ಕೊಚ್ಚಿ, ಮುಂಬೈ, ಬೆಂಗಳೂರು, ಹೈದರಾಬಾದ್‌ ಮತ್ತು ಕಾನ್ಪುರಾದಲ್ಲಿ ಮೆಟ್ರೊ ಸೇವೆ ಇದೆ.

ಇವನ್ನೂ ಓದಿ
*

*
*
*
*
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.