ADVERTISEMENT

Union Budget 2026: ಕೇಂದ್ರ ಬಜೆಟ್‌ನ ಪ್ರಮುಖ ಘೋಷಣೆಗಳು-ಸಮಗ್ರ ಮಾಹಿತಿ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2026, 11:11 IST
Last Updated 1 ಫೆಬ್ರುವರಿ 2026, 11:11 IST
   

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆ.1) ದಾಖಲೆಯ ಸತತ 9ನೇ ಬಾರಿಗೆ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಅವರ ಬಜೆಟ್ ಭಾಷಣದಲ್ಲಿ ಮಾಡಿದ ಪ್ರಮುಖ ಘೋಷಣೆಗಳು ಇಲ್ಲಿವೆ.

*16ನೇ ಹಣಕಾಸು ಆಯೋಗದ ವರದಿಯ ಮಂಡನೆ, ರಾಜ್ಯಗಳಿಗೆ ₹1.4 ಲಕ್ಷ ಕೋಟಿ ವಿತರಣೆ

ಕರ್ತವ್ಯ ಭವನದಲ್ಲಿ ಬಜೆಟ್ ಸಿದ್ಧಪಡಿಸಲಾಗಿದ್ದು, ಮೂರು ಕರ್ತವ್ಯಗಳ ಕುರಿತು ಉಲ್ಲೇಖ:

ADVERTISEMENT

*ಆರ್ಥಿಕ ಬೆಳವಣಿಗೆ ವೇಗಗೊಳಿಸುವುದು ಹಾಗೂ ಸ್ಥಿರತೆ ಕಾಪಾಡುವುದು

*ಜನರ ಆಕಾಂಕ್ಷೆಗಳನ್ನು ಈಡೇರಿಸುವುದು

*ಸಬ್ ಕಾ ಸಾಥ್, ಸಬ್ ಕಾ ವಿಕಾಸ್

ಬಜೆಟ್ ಅಂದಾಜು:

*ಪ್ರಮುಖ ಏಳು ವಲಯಗಳಲ್ಲಿ ಉತ್ಪಾದನೆ ಹೆಚ್ಚಳ

1. ಬಯೋಫಾರ್ಮಾ ಶಕ್ತಿ (ಭಾರತವನ್ನು ಜಾಗತಿಕ ಬಯೋ-ಫಾರ್ಮಾ ಹಬ್ ಆಗಿ ವೃದ್ಧಿಸುವುದು, ₹10,000 ಕೋಟಿ ಮೀಸಲು)

2. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐಎಸ್‌ಎಂ) 2.0 (ಕೈಗಾರಿಕಾ ಸಂಶೋಧನೆ ಮೇಲೆ ಗಮನ, ತರಬೇತಿ, ತಂತ್ರಜ್ಞಾನ ಕೇಂದ್ರ, ಕೌಶಲ್ಯ ವೃದ್ಧಿ)

3. ಎಲೆಕ್ಟ್ರಾನಿಕ್ ಘಟಕಗಳ ಉತ್ಪಾದನಾ ಯೋಜನೆ (₹40,000 ಕೋಟಿ ಮೀಸಲು)

4. ಜೀವವೈವಿಧ್ಯ ಕಾರಿಡಾರ್ ( ಖನಿಜ ಸಮೃದ್ಧ ಒಡಿಶಾ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡಿಗೆ ಬೆಂಬಲ. ಗಣಿಗಾರಿಕೆ, ಸಂಸ್ಕರಣೆ, ಸಂಶೋಧನೆಗೆ ಉತ್ತೇಜನ)

5. 3 ರಾಸಾಯನಿಕ ಪಾರ್ಕ್ ಸ್ಥಾಪಿಸಲು ರಾಜ್ಯಗಳಿಗೆ ನೆರವು

6. ಬಂಡವಾಳ ಸರಕುಗಳ ಸಾಮರ್ಥ್ಯ ವೃದ್ಧಿ (ಹೈ-ಟೆಕ್ ಟೂಲ್ ರೂಮ್, ಸಿಐಇ, ಕಂಟೈನರ್ ಉತ್ಪಾದನೆ, ₹10,000 ಕೋಟಿ ಅನುದಾನ)

7. ಜವಳಿ ವಲಯಗಳಿಗೆ ಸಮಗ್ರ ಯೋಜನೆ ಘೋಷಣೆ (ಮೆಗಾ ಜವಳಿ ಪಾರ್ಕ್, ಖಾದಿ, ಕೈಮಗ್ಗ ಉತ್ತೇಜನ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಕಾರ್ಯಕ್ರಮ)

*ಹಳೆಯ ಕೈಗಾರಿಕಾ ವಲಯಗಳ ಪುನರುಜ್ಜೀವನ - 200ರಷ್ಟು ಕೈಗಾರಿಕಾ ಕ್ಲಸ್ಟರ್‌ಗಳ ಘೋಷಣೆ. ಉತ್ತೇಜನ. ಮೂಲಸೌಕರ್ಯ, ತಂತ್ರಜ್ಞಾನ ವೃದ್ಧಿ.

*ಮೈಕ್ರೊ ಉದ್ಯಮಗಳ ಉತ್ತೇಜನಕ್ಕೆ ಚಾಂಪಿಯನ್ ಎಸ್‌ಎಂಇ ಸ್ಥಾಪನೆ ( ₹10000 ಕೋಟಿ ನಿಧಿ), ಹೆಚ್ಚವರಿಯಾಗಿ ₹2000 ಕೋಟಿ ಸ್ವಾವಲಂಬಿ ಭಾರತ ನಿಧಿ

*ಮೂಲಸೌಕರ್ಯ ವೃದ್ಧಿ (2026-27ನೇ ಆರ್ಥಿಕ ಸಾಲಿನಲ್ಲಿ ಸಾರ್ವಜನಿಕ ಬಂಡವಾಳ ವೆಚ್ಚ ₹12.2 ಲಕ್ಷ ಕೋಟಿಗೆ ಏರಿಕೆ)

*ಮೂಲಸೌಕರ್ಯ ಅಪಾಯ ಗ್ಯಾರಂಟಿ ನಿಧಿ ಸ್ಥಾಪನೆ, ಆರ್‌ಇಐಟಿ ಸ್ಥಾಪನೆ, ಸರಕು ಸಾಗಣೆ ಕಾರಿಡಾರ್

*20 ಹೊಸ ಜಲ ಮಾರ್ಗಗಳ ಘೋಷಣೆ, ಮುಂದಿನ ಐದು ವರ್ಷಗಳಲ್ಲಿ ಕಾರ್ಯಾಚರಣೆ,

*ತರಬೇತಿ ಕೇಂದ್ರ ಸ್ಥಾಪನೆ, ಹಡಗು ರಿಪೇರಿ ವ್ಯವಸ್ಥೆ

*ಕರಾವಳಿ ಕಾರ್ಗೊ ಉತ್ತೇಜನ ಯೋಜನೆ, ಸೀಪ್ಲೇನ್ ವಿಜಿಎಫ್ ಸ್ಕೀಮ್.

*ದೀರ್ಘಾವಧಿ ಇಂಧನ ಭದ್ರತೆ ಹಾಗೂ ಸ್ಥಿರತೆ ಯೋಜನೆ (ಮುಂದಿನ ಐದು ವರ್ಷಗಳಲ್ಲಿ ₹20,000 ಕೋಟಿ ಮೀಸಲು)

ನಗರಗಳ ಅಭಿವೃದ್ಧಿ (5 ವರ್ಷಗಳಲ್ಲಿ ₹5000 ಕೋಟಿ ಅನುದಾನ)

ಏಳು ಹೈಸ್ಪೀಡ್ ರೈಲು ಕಾರಿಡಾರ್

  • ಮುಂಬೈ-ಪುಣೆ,

  • ಪುಣೆ-ಹೈದರಾಬಾದ್,

  • ಹೈದರಾಬಾದ್-ಬೆಂಗಳೂರು,

  • ಹೈದರಾಬಾದ್-ಚೆನ್ನೈ,

  • ಚೆನ್ನೈ-ಬೆಂಗಳೂರು,

  • ದೆಹಲಿ-ವಾರಾಣಸಿ

  • ವಾರಾಣಸಿ-ಸಿಲಿಗುರಿ.

*ಬ್ಯಾಕಿಂಗ್ ಫಾರ್ ವಿಕಸಿತ ಭಾರತಕ್ಕಾಗಿ ಉನ್ನತ ಮಟ್ಟದ ಸಮಿತಿ ರಚನೆ

*ಉನ್ನತ ಮಟ್ಟದ 'ಶಿಕ್ಷಣದಿಂದ ಉದ್ಯಮ' ಸಮಿತಿ ರಚನೆ

*ಐದು ಪ್ರಾದೇಶಿಕ ವೈದ್ಯಕೀಯ ಹಬ್‌ಗಳ ರಚನೆ

*ಆಯುಷ್: 3 ಹೊಸ ಆಯುರ್ವೇದ ಸಂಸ್ಥೆಗಳ ಸ್ಥಾಪನೆ

*7 ಅಪರೂಪದ ಕಾಯಿಲೆಗಳ ಔಷಧಗಳ ಬೆಲೆ ಇಳಿಕೆ.

*ಕ್ಯಾನ್ಸರ್‌ಗೆ ಸಂಬಂಧಿಸಿದ 17 ಪ್ರಮುಖ ಔಷಧಗಳ ಮೇಲಿನ ತೆರಿಗೆ ಕಡಿತ

ಮುನ್ಸಿಪಲ್ ಬಾಂಡ್:

ಪುರಸಭೆಗಳು ಹೂಡಿಕೆದಾರರಿಗೆ ವಿತರಿಸುವ ಬಾಂಡ್‌ಗಳಾಗಿದ್ದು, ಇವುಗಳನ್ನು ಸಾಲಗಳೆಂದು ಪರಿಗಣಿಸಬಹುದು. ಉದ್ಯಾನವನಗಳು, ಗ್ರಂಥಾಲಯಗಳು, ಸೇತುವೆಗಳು, ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳಂತಹ ಸಾರ್ವಜನಿಕ ಕಾರ್ಯಗಳಿಗೆ ಹಣಕಾಸು ಒದಗಿಸಲು ಬಳಸಲಾಗುತ್ತದೆ.

ಪಶುವೈದ್ಯಕೀಯ: ವೃತ್ತಿಪರರ ಸಂಖ್ಯೆ 20,000 ಕ್ಕೆ ಏರಿಕೆ

ಆರೆಂಜ್ ಆರ್ಥಿಕತೆ:

15,000 ಶಾಲೆಗಳು ಹಾಗೂ 500 ಕಾಲೇಜುಗಳಲ್ಲಿ ವಿಷುಯಲ್ ಎಫೆಕ್ಟ್, ಗೇಮಿಂಗ್ ಮತ್ತು ಕಾಮಿಕ್ಸ್ ವಿಷಯಗಳ ಪ್ರಯೋಗಾಲಯ ಸ್ಥಾಪಿಸಲು ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್‌ಗೆ ಬೆಂಬಲ

ಶಿಕ್ಷಣ:

*5 ವಿಶ್ವವಿದ್ಯಾಲಯ ಟೌನ್‌ಶಿಪ್

*ಪ್ರತಿ ಜಿಲ್ಲೆಗಳಲ್ಲಿ ಒಂದು ಬಾಲಕಿಯರ ಹಾಸ್ಟೆಲ್ ಸ್ಥಾಪನೆ

ಪ್ರವಾಸೋದ್ಯಮ:

*20 ಸಾವಿರ ಪ್ರವಾಸಿ ತಾಣಗಳಲ್ಲಿ ಮಾಹಿತಿ ನೀಡಲು 10 ಸಾವಿರ ಗೈಡ್‌ಗಳಿಗೆ ತರಬೇತಿ,

*ನ್ಯಾಷನಲ್ ಡೆಸ್ಟಿನೇಷನ್ ಡಿಜಿಟಲ್ ನಾಲೆಡ್ಜ್ ಗ್ರಿಡ್ ರಚನೆ

*ಪರಂಪರೆ ಮತ್ತು ಸಂಸ್ಕೃತಿ ಪ್ರವಾಸೋದ್ಯಮ,

*15 ಪುರಾತತ್ವ ಸ್ಥಳಗಳ ವೃದ್ಧಿ

ಕ್ರೀಡೆ:

*ಖೇಲೊ ಇಂಡಿಯಾ ಮಿಷನ್

*ರೈತರ ಆದಾಯ ಹೆಚ್ಚಳಕ್ಕೆ ಕ್ರಮ

*500 ಜಲಾಶಯಗಳು ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿ

ಕೃಷಿಗೆ ಆದ್ಯತೆ

*ಕರಾವಳಿಯಲ್ಲಿ ತೆಂಗು, ಗಂಧ, ಗೇರು ಬೆಳೆ ಉತ್ತೇಜನ

*ಭಾರತ್ ವಿಸ್ತಾರ್ ಎಐ ಯೋಜನೆ

*ಭಾರತ್‌ ವಿಸ್ತಾರ್ ಬಹುಭಾಷಾ ಎಐ ಟೂಲ್‌ ಮೂಲಕ ಕೃಷಿ ಹಾಗೂ ಇನ್ನಿತರ ಕ್ಷೇತ್ರಗಳಿಗೆ ನೆರವು

ಮಹಿಳೆಯರಿಗೆ ಲಕ್‌ಪತಿ ದೀದಿ ಯೋಜನೆಗೆ ಇನ್ನಷ್ಟು ಉತ್ತೇಜನ

*ಉತ್ತರ ಭಾರತದಲ್ಲಿ ನಿಮ್ಹಾನ್ಸ್‌ ಸ್ಥಾಪನೆ

ದಿವ್ಯಾಂಜನ್‌ ಯೋಜನೆ ಮೂಲಕ ಕೃತಕ ಕಾಲು ತಯಾರಿಕಾ ಘಟಕಗಳಿಗೆ ತಂತ್ರಜ್ಞಾನ ನೆರವು ಮೂಲಕ ಅವುಗಳನ್ನು ಮೇಲ್ದರ್ಜೆಗೆ ಏರಿಸಲು ಯೋಜನೆ

ಪೂರ್ವೋದಯ:

*ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಆದ್ಯತೆ

*ಈಸ್ಟ್ ಕೋಸ್ಟ್ ಇಂಡಸ್ಟ್ರಿಯರ್ ಕಾರಿಡಾರ್ ಸ್ಥಾಪನೆ

*ಈಶಾನ್ಯ ಭಾರತ– ಬುದ್ಧ ಸರ್ಕೀಟ್, ಅರುಣಾಚಲ, ಸಿಕ್ಕೀಂ, ಮೀಜೋರಾಂ, ತ್ರಿಪುರ, ಅಸ್ಸಾಂನಲ್ಲಿ

ನೇರ ತೆರಿಗೆ

2026 ಏಪ್ರಿಲ್‌ನಲ್ಲಿ ಹೊಸ ತೆರಿಗೆ ಪದ್ಧತಿ ಜಾರಿ

*ಆದಾಯ ತೆರಿಗೆ ನಿಯಮ ಸರಳೀಕರಣ,

*ಮೋಟಾರ್ ಆಕ್ಸಿಡೆಂಟ್‌ ಕ್ಲೇಮುಗಳಿಗೆ ತೆರಿಗೆ ಇಲ್ಲ

*ಐಟಿ ವಲಯ ಭಾರತದ ಅಭಿವೃದ್ಧಿಯ ಎಂಜಿನ್

*ವಿಶೇಷ ಎಕಾನಮಿಕ್ ವಲಯ,

*ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ

*ಆದಾಯ ತೆರಿಗೆ ಪಾವತಿದಾರರ ಪರಿಷ್ಕೃತ ತೆರಿಗೆ ಸಲ್ಲಿಕೆಯ ಅವಧಿಯನ್ನು ಡಿಸೆಂಬರ್ 31ರಿಂದ ಮಾರ್ಚ್ 31ರವರೆಗೆ ವಿಸ್ತರಣೆ

*ಆದಾಯ ತೆರಿಗೆ ಪಾವತಿ ವಿಳಂಬಕ್ಕೆ ಶೇ 10ರಷ್ಟು ದಂಡ ವಿಧಿಸಲು ನಿರ್ಧಾರ.

*ಸಣ್ಣ ತೆರಿಗೆದಾರರಿಗೆ ನಿಯಮ ಆಧಾರಿತ ಸ್ವಯಂಚಾಲಿತ ತೆರಿಗೆ ಸಲ್ಲಿಕೆ ವ್ಯವಸ್ಥೆ ಜಾರಿ

*ದೇಶ ಪ್ರವಾಸಗಳ ಮೇಲಿನ ಟಿಸಿಎಸ್ ಶೇ 2ಕ್ಕೆ ಇಳಿಕೆ

*ಅನಿವಾಸಿ ಭಾರತೀಯರ ಆಸ್ತಿ ಮಾರಾಟದ ಮೇಲಿನ ಟಿಡಿಎಸ್‌ ಕಡಿತ

*ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ಟಿಸಿಎಸ್ ದರವನ್ನು ಶೇ 5 ರಿಂದ ಶೇ 2ಕ್ಕೆ ಇಳಿಕೆ

*ದೇಶದಲ್ಲಿ ಡೇಟಾ ಸೆಂಟರ್‌ಗಳನ್ನು ಬಳಸಿಕೊಂಡು ವಿಶ್ವದಾದ್ಯಂತ ಗ್ರಾಹಕರಿಗೆ ಕ್ಲೌಡ್ ಸೇವೆಗಳನ್ನು ಒದಗಿಸುವ ವಿದೇಶಿ ಕಂಪನಿಗಳಿಗೆ 2047ರವರೆಗೆ ತೆರಿಗೆ ರಜೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ

*ಕೆಲವು ಷರತ್ತುಗಳಿಗೆ ಒಳಪಟ್ಟು ಸಂಬಂಧಪಟ್ಟ ಘಟಕಗಳಿಗೆ ತೆರಿಗೆ ರಜೆಯನ್ನು ವಿಸ್ತರಿಸಲಾಗುವುದು

*ಸಿಗರೇಟು, ಮದ್ಯದ ಮೇಲಿನ ತೆರಿಗೆ ಹೆಚ್ಚಿಸಿದ ಕೇಂದ್ರ.

*ಭಾರತದ ಹೊರಗಡೆ ನೆಲೆಸಿರುವ ವ್ಯಕ್ತಿಗಳಿಗೆ ಪಟ್ಟಿ ಮಾಡಲಾದ ದೇಶದ ಕಂಪನಿಗಳಲ್ಲಿ ಹೂಡಿಕೆ ಮಾಡಲು ಅನುಮತಿ

*ಖಗೋಳ ಭೌತಶಾಸ್ತ್ರ ಮತ್ತು ಖಗೋಗಶಾಸ್ತ್ರ ಉತ್ತೇಜನಕ್ಕೆ ಟೆಲಿಸ್ಕಾಪ್ ಮೂಲಸೌಕರ್ಯದ ನವೀಕರಣ

*ಸುಮಾರು ಒಂದು ಗಂಟೆ 25 ನಿಮಿಷಗಳ ಕಾಲ ಬಜೆಟ್ ಭಾಷಣ ಮಂಡಿಸಿದ ನಿರ್ಮಲಾ ಸೀತಾರಾಮನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.