ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಭಾರತದ ಪ್ರಧಾನಿ ನರೇಂದ್ರ ಮೋದಿ
ದೋಹಾ: ಭಾರತದಲ್ಲಿ ಆ್ಯಪಲ್ ಸಾಧನಗಳನ್ನು ಉತ್ಪಾದನೆ ಮಾಡುವುದು ಬೇಡ ಎಂದು ಐಫೋನ್ ತಯಾರಿಕಾ ಕಂಪನಿ ಆ್ಯಪಲ್ ಸಿಇಒ ಟಿಮ್ ಕುಕ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಕೀತು ಮಾಡಿದ್ದಾರೆ.
ದೋಹಾದಲ್ಲಿ ನಡೆದ ವ್ಯಾಪಾರ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ‘ಟೀಮ್, ನೀನು ನನ್ನ ಸ್ನೇಹಿತ. ಭಾರತವು ತನ್ನನ್ನು ತಾನು ಜಗತ್ತಿನಲ್ಲಿ ಅತಿ ಹೆಚ್ಚು ಸುಂಕ ವಿಧಿಸುವ ದೇಶವಾಗಿದೆ. ಅಲ್ಲದೇ, ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡುವುದು ಮತ್ತು ವಹಿವಾಟು ನಡೆಸುವುದು ಕಷ್ಟಕರ. ಅಮೆರಿಕದಲ್ಲಿ ₹42.74 ಲಕ್ಷ ಕೋಟಿ (500 ಬಿಲಿಯನ್ ಡಾಲರ್) ಮೊತ್ತ ಹೂಡಿಕೆ ಮಾಡುತ್ತಿದ್ದೆ. ಆದರೆ, ಇದೀಗ ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ಮುಂದಾಗಿರುವೆ. ಭಾರತದಲ್ಲಿ ನಿರ್ಮಿಸುತ್ತಿರುವುದಕ್ಕೆ ನನ್ನ ಸಹಮತವಿಲ್ಲ ಎಂದು ತಿಳಿಸಿದ್ದಾರೆ.
‘ಭಾರತವು ಸರಕುಗಳ ಮೇಲೆ ಯಾವುದೇ ಸುಂಕವನ್ನು ವಿಧಿಸುವುದಿಲ್ಲ ಎಂದು ಹೇಳಿತ್ತು. ಆದರೆ, ಇಲ್ಲಿಯವರೆಗೆ ಸುಂಕ ಕಡಿತದ ಘೋಷಣೆ ಮಾಡಿಲ್ಲ. ಚೀನಾದಲ್ಲಿ ಆ್ಯಪಲ್ ಸ್ಥಾಪಿಸಿದ ಎಲ್ಲಾ ಕಾರ್ಖಾನೆಗಳನ್ನೂ ನಾವು ಸಹಿಸಿಕೊಂಡಿದ್ದೇವೆ. ಆದರೆ, ಭಾರತದಲ್ಲಿ ಆ್ಯಪಲ್ ಸಾಧನಗಳನ್ನು ಉತ್ಪಾದನೆ ಮಾಡುವುದಕ್ಕೆ ನಮ್ಮ ಒಪ್ಪಿಗೆ ಇಲ್ಲ’ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಭಾರತದೊಂದಿಗೆ ವಾಷಿಂಗ್ಟನ್‌ನ ವಿಶಾಲ ವ್ಯಾಪಾರ ಸಂಬಂಧಗಳ ಕುರಿತು ಚರ್ಚಿಸುವಾಗ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.