ನವದೆಹಲಿ: ಸಾಮಾನ್ಯ ಜನರು ಬಳಸುವ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಪರಿಷ್ಕರಿಸುವ ಮಹತ್ವದ ನಿರ್ಧಾರವನ್ನು ಜಿಎಸ್‌ಟಿ ಮಂಡಳಿ ಬುಧವಾರ ತೆಗೆದುಕೊಂಡಿದೆ.
ಪ್ರಸ್ತುತ ಶೇ 5, 12, 18 ಹಾಗೂ ಶೇ 28ರಂತೆ ತೆರಿಗೆ ಹಂತಗಳಿವೆ. ಇವುಗಳನ್ನು ಪರಿಷ್ಕರಿಸಿ, ಕೇವಲ ಶೇ 5 ಹಾಗೂ ಶೇ 18ರಂತೆ ಎರಡು ಹಂತಗಳ ಜಿಎಸ್‌ಟಿ ವ್ಯವಸ್ಥೆ ಜಾರಿಗೊಳಿಸಲಾಗುವುದು. ಹೈಎಂಡ್ ವಿಲಾಸಿ ಕಾರುಗಳು, ತಂಬಾಕು ಹಾಗೂ ಸಿಗರೇಟ್‌ಗಳು ಸೇರಿ ಇನ್ನೂ ಕೆಲವು ವಸ್ತುಗಳ ಮೇಲೆ ವಿಶೇಷ ಶೇ 40ರಷ್ಟು ಜಿಎಸ್‌ಟಿ ವಿಧಿಸಲು ಮಂಡಳಿ ಅನುಮೋದಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಶೇ 40 ರಷ್ಟು ಜಿಎಸ್‌ಟಿಯನ್ನು ಐಷಾರಾಮಿ ಸರಕು, ಸಕ್ಕರೆ ಮಿಶ್ರಿತ ಪಾನೀಯಗಳು, ತಂಬಾಕು ಉತ್ಪನ್ನಗಳಿಗೆ ವಿಧಿಸಲಾಗಿದೆ.
ತಂಬಾಕು ಮತ್ತು ಪಾನ್ ಮಸಾಲಾ (ಸಿನ್ ಟಾಕ್ಸ್): ಪಾನ್ ಮಸಾಲಾ, ಗುಟ್ಕಾ, ಅಗೆಯುವ ತಂಬಾಕು, ಸಿಗರೇಟ್, ಬೀಡಿ ಸೇರಿದಂತೆ ಇತರ ಉತ್ಪನ್ನಗಳು
ಪಾನೀಯಗಳು: ಕಾರ್ಬೊನೇಟೆಡ್ ಪಾನೀಯಗಳು, ಸಕ್ಕರೆಮಿಶ್ರಿತ ತಂಪು ಪಾನೀಯಗಳು, ಕೆಫಿನ್ ಮಾಡಿದ ಕಾರ್ಬೊನೇಟೆಡ್ ಪಾನೀಯಗಳು
ಆನ್‌ಲೈನ್ ಜೂಜು ಮತ್ತು ಗೇಮಿಂಗ್, ಕಲ್ಲಿದ್ದಲು, ಸಸ್ಯಾಂಗಾರ, ಲಿಗ್ನ್ಟೈಟ್‌ಗಳ ಮೇಲೂ 40ರಷ್ಟು ತೆರಿಗೆ ಹೇರಲಾಗಿದೆ.
ಐಷಾರಾಮಿ ಕಾರುಗಳು: 1200ಸಿಸಿ ಮೇಲ್ಪಟ್ಟ ಎಂಜಿನ್ ಹೊಂದಿರುವ ಪೆಟ್ರೋಲ್ ಕಾರುಗಳು, 1500ಸಿಸಿ ಮೇಲ್ಪಟ್ಟ ಎಂಜಿನ್ ಹೊಂದಿರುವ ಡೀಸೆಲ್ ಕಾರುಗಳು
350 ಸಿಸಿ ಮೇಲ್ಪಟ್ಟ ಮೇಲ್ಪಟ್ಟ ಎಂಜಿನ್ ಹೊಂದಿರುವ ಮೋಟಾರ್ ಸೈಕಲ್‌ಗಳ ಮೇಲೆ ಶೇ 40ರಷ್ಟು ಜಿಎಸ್‌ಟಿ ವಿಧಿಸಲಾಗಿದೆ.
ವಿಹಾರ ನೌಕೆ, ಖಾಸಗಿ ವಿಮಾನ ಮತ್ತು ಹೆಲಿಕಾಪ್ಟರ್ ಮೇಲೆಯೂ ಶೇ 40ರಷ್ಟು ತೆರಿಗೆ ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.