ಷೇರುಪೇಟೆ
ಮುಂಬೈ: ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಬಡ್ಡಿಯ ದರವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ವಿತ್ತೀಯ ನೀತಿ ಕಡಿತ ಮಾಡಲು ನಿರ್ಧರಿಸುವ ವಿಶ್ವಾಸದೊಂದಿಗೆ ಇಂದು ಷೇರುಪೇಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ ಎಂದು ಅಂದಾಜಿಸಲಾಗಿದೆ.
ನಿಫ್ಟಿ 50 ಗುರುವಾರದ ಅಂತ್ಯದ ಹೊತ್ತಿಗೆ 23,603.35 ಅಂಶಗಳಿಗೆ ಕೊನೆಗೊಂಡಿತ್ತು. ಶುಕ್ರವಾರ ಬೆಳಿಗ್ಗೆ 23,717.5 ಅಂಶಗಳನ್ನು ದಾಖಲಿಸಿತ್ತು. ಆ ಮೂಲಕ ಈ ವಾರದಲ್ಲಿ ಶೇ 0.5ರಷ್ಟು ಏರಿಕೆ ಕಂಡಂತಾಗಿದೆ. ಆದರೆ ಕಳೆದ ಡಿ. 6ರಂದು ನಡೆದ ಆರ್‌ಬಿಐ ಸಭೆಯ ನಂತರದಲ್ಲಿ ನಿಫ್ಟಿ 50 ಶೇ 4.4ರಷ್ಟು ಕುಸಿತ ಕಂಡಿತ್ತು.
ಬಡ್ಡಿದರದಲ್ಲಿ ಕಡಿತ ಮಾಡುವ ನಿರ್ಧಾರವನ್ನು 2020ರ ಮೇ ನಂತರ ಇದೇ ಮೊದಲ ಬಾರಿಗೆ ಆರ್‌ಬಿಐ ಕೈಗೊಳ್ಳುವ ಸಾಧ್ಯತೆ ಇದ್ದು, ಇಂದು ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ಇದರ ಜತೆಯಲ್ಲೇ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ₹12.75 ಲಕ್ಷಕ್ಕೆ ಹೆಚ್ಚಳ ಮಾಡಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಹಣದುಬ್ಬರ, ಜಾಗತಿಕ ವ್ಯಾಪಾರದಲ್ಲಿ ಅಸ್ತಿರತೆ, ಕುಸಿಯುತ್ತಿರುವ ರೂಪಾಯಿ ಮೌಲ್ಯದಿಂದಾಗಿ ಆರ್‌ಬಿಐ ಸಮತೋಲಿತ ಬಡ್ಡಿ ದರವನ್ನು ಪ್ರಕಟಿಸುವ ಸಾಧ್ಯತೆ ಇದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಲಿಕ್ವಿಡಿಟಿ ಉತ್ತೇಜಿಸಲು ಬಡ್ಡಿ ದರ ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ವ್ಯವಸ್ಥಾಪಕ ನಿರ್ದೇಶಕ ಧೀರಜ್ ರೆಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಮೂರನೇ ತ್ರೈಮಾಸಿಕದಲ್ಲಿ ಭಾರತೀಯ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೊ ಮೊಟೊಕಾರ್ಪ್ ಹೆಚ್ಚಿನ ಲಾಭ ದಾಖಲಿಸಿದೆ.
ದಿನ ನಿತ್ಯ ಬಳಕೆಯ ವಸ್ತುಗಳ ವಿಭಾಗದಲ್ಲಿ ಐಟಿಸಿಗೆ ಗ್ರಾಮೀಣ ಭಾಗದಲ್ಲಿ ಬೇಡಿಕೆ ಹೆಚ್ಚಳವಾದ್ದರಿಂದ ಅದರ ಡಿಸೆಂಬರ್ ತ್ರೈಮಾಸಿಕ ವಹಿವಾಟು ಹೆಚ್ಚಳವಾಗಿದೆ
ಬೆಲೆ ಏರಿಕೆಯಿಂದ ಬ್ರಿಟಾನಿಯಾ ಬಿಸ್ಕತ್ತಿಗೆ ಬೇಡಿಕೆ ಹೆಚ್ಚಾಗಿದೆ ಎಂಬುದು ತ್ರೈಮಾಸಿಕ ವರದಿಯಲ್ಲಿ ಸ್ಪಷ್ಟವಾಗಿದೆ
ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ಕೈಗೊಂಡ ಟ್ಯಾರಿಫ್ ಹೆಚ್ಚಳ ಕ್ರಮದ ಪರಿಣಾಮ ಅದರ ಲಾಭವೂ ಹೆಚ್ಚಳವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.