
ಇಂಡಿಗೋ ಏರ್‌ಲೈನ್ಸ್
ಮುಂಬೈ: ಇಂಡಿಗೊ ವಿಮಾನ ಕಾರ್ಯಾಚರಣೆಯಲ್ಲಿ ಭಾರಿ ಅಡಚಣೆ ಉಂಟಾಗಿರುವ ಬೆನ್ನಲ್ಲೇ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ), ಪೈಲಟ್‌ಗಳ ರಜಾ ನಿಯಮಗಳನ್ನು ಸಡಿಲಿಸಿದೆ.
ಸಿಬ್ಬಂದಿ ಕರ್ತವ್ಯ ಅವಧಿ ಮಿತಿ (ಎಫ್‌ಡಿಟಿಎಲ್) ಮಾನದಂಡಗಳ ಪ್ರಕಾರ, ವಾರದ ವಿಶ್ರಾಂತಿ ಜೊತೆ ಯಾವುದೇ ರಜೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದಿಲ್ಲ. ಅಂದರೆ ವಾರದ ವಿಶ್ರಾಂತಿ ಅವಧಿ ಮತ್ತು ರಜೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ.
ಪೈಲಟ್‌ಗಳಲ್ಲಿ ಹೆಚ್ಚಿನ ಕೆಲಸದ ಒತ್ತಡವನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಬದಲಾವಣೆ ಮಾಡಲಾಗಿದೆ.
ವಿಮಾನಯಾನ ಸಿಬ್ಬಂದಿ ವಾರದ ವಿಶ್ರಾಂತಿ ರಜೆಯನ್ನು ಬದಲಾಯಿಸಬಾರದು ಎಂಬ ನಿಬಂಧನೆಯನ್ನು ಹಿಂಪಡೆದುಕೊಳ್ಳಲು ಡಿಜಿಸಿಎ ನಿರ್ಧರಿಸಿದೆ.
ಎರಡನೇ ಹಂತದ ವಿಮಾನದ ಸಿಬ್ಬಂದಿ ಕರ್ತವ್ಯ ಅವಧಿ ಮಿತಿ ನಿಯಮಗಳ ಜಾರಿಯಿಂದಾಗಿ ಇಂಡಿಗೊ ವಿಮಾನಯಾನ ಸಂಸ್ಥೆಯು ಭಾರಿ ಪ್ರಮಾಣದ ಸಿಬ್ಬಂದಿ ಕೊರತೆ ಎದುರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.