ADVERTISEMENT

SBI, BOI ಬಳಿಕ BOB ಸರದಿ: ಆರ್ ಕಾಮ್, ಅನಿಲ್ ಅಂಬಾನಿ ವಂಚನೆ ಪಟ್ಟಿಗೆ

ಪಿಟಿಐ
Published 5 ಸೆಪ್ಟೆಂಬರ್ 2025, 12:47 IST
Last Updated 5 ಸೆಪ್ಟೆಂಬರ್ 2025, 12:47 IST
<div class="paragraphs"><p>ಅನಿಲ್ ಅಂಬಾನಿ</p></div>

ಅನಿಲ್ ಅಂಬಾನಿ

   

ಕೃಪೆ: ಪಿಟಿಐ

ನವದೆಹಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಹಾಗೂ ಬ್ಯಾಂಕ್‌ ಆಫ್‌ ಇಂಡಿಯಾ (ಬಿಒಐ) ಬ್ಯಾಂಕ್‌ಗಳ ಬೆನ್ನಲ್ಲೇ, ಇದೀಗ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ಕೂಡ ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ ಕಾಂ) ಕಂಪನಿ ವಿರುದ್ಧ ಕ್ರಮ ಕೈಗೊಂಡಿದೆ.

ADVERTISEMENT

ಕಂಪನಿಯ ಸಾಲದ ಖಾತೆ ಹಾಗೂ ಅದರ ಮಾಜಿ ನಿರ್ದೇಶಕ ಅನಿಲ್‌ ಅಂಬಾನಿ ಅವರನ್ನು 'ವಂಚನೆ' ಪಟ್ಟಿಗೆ ಸೇರಿಸಿದೆ.

ಕಂಪನಿ ಹಾಗೂ ಅನಿಲ್ ಅಂಬಾನಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ತನ್ನ ನಿರ್ಧಾರವನ್ನು ತಿಳಿಸಿ ಬಿಒಬಿ ಸೆಪ್ಟೆಂಬರ್‌ 2ರಂದು ಪತ್ರ ಕಳುಹಿಸಿದೆ ಎಂದು 'ಆರ್‌ ಕಾಮ್' ತಿಳಿಸಿದೆ.

ಬಿಒಬಿ, ಆರ್‌ ಕಾಮ್ ಕಂಪನಿಗೆ ಒಟ್ಟು ₹2,462 ಕೋಟಿ ಸಾಲ ನೀಡಿತ್ತು. ಈ ಪೈಕಿ ಆಗಸ್ಟ್‌ 28ರ ವರೆಗೆ ₹1,656 ಕೋಟಿ ಸಾಲ ಬಾಕಿ ಇದೆ. ಈ ಸಂಗತಿಯು 'ಆರ್‌ ಕಾಂ' ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿದೆ.

'ಆರ್‌ ಕಾಮ್‌ಗೆ ನೀಡಿರುವ ಸಾಲ 2017ರ ಜೂನ್‌ 5ರಂದು ಎನ್‌ಪಿಎ ಆಗಿದೆ' ಎಂದು ಬಿಒಬಿ ಪತ್ರದಲ್ಲಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.