ಪುರಾಣಗಳ ಪ್ರಕಾರ ಉಪವಾಸ ಮಾಡುವುದರಿಂದ ದೇವರ ಅನುಗ್ರಹ ದೊರೆಯಲಿದೆ ಎಂಬ ನಂಬಿಕೆ ಇದೆ. ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಉಪವಾಸ ಮಾಡುವುದರಿಂದ ಸಿಗುವ ಲಾಭಗಳೇನು? ಎಂಬ ಮಾಹಿತಿಯನ್ನು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ತಿಳಿಸಿ ಕೊಟ್ಟಿದ್ದಾರೆ.
ಉಪವಾಸ ಮಾಡುವಾಗ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಅವರು ತಿಳಿಸಿದ್ದಾರೆ. ಹಾಗಿದ್ದರೆ, ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ.
ಹೆಣ್ಣು ಮಕ್ಕಳು ಋತುಚಕ್ರದ ಸಂದರ್ಭದಲ್ಲಿ ಐದು ದಿನಗಳ ಕಾಲ ಉಪವಾಸ ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ.
ಸಂಕಲ್ಪದಿಂದ ಉಪವಾಸ ವ್ರತ ಆಚರಿಸಬೇಕು.
ಉಪವಾಸ ಸಂಕಲ್ಪವನ್ನು ಬ್ರಹ್ಮ ಮುಹೂರ್ತದಲ್ಲಿ ತೆಗೆದುಕೊಳ್ಳಬೇಕು.
ಉಪವಾಸ ವ್ರತ ಮಾಡುವ ದಿನ ತಲೆಗೆ ಸ್ನಾನ ಮಾಡಬೇಕು.
ಉಪವಾಸ ಮಾಡುವವರು ನಿರ್ಜಲ (ಏನನ್ನೂ ಸೇವಿಸದೆ) ಉಪವಾಸ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತದೆ. ಆರೋಗ್ಯ ಸಮಸ್ಯೆ ಇರುವವರು, ಹಾಲು, ಹಣ್ಣು ಸೇವಿಸಬಹುದು.
ಉಪವಾಸದ ದಿನದಂದು ನಕರಾತ್ಮಕ ಯೋಚನೆ ಮಾಡಬಾರದು. ಮಂತ್ರಗಳ ಪಠಣೆ, ಪ್ರಾರ್ಥನೆ, ಶುದ್ಧಮಾತು ಹಾಗೂ ಶಾಂತಿಯಿಂದ ಇರಬೇಕು ಎಂದು ಜ್ಯೋತಿಷ ಹೇಳುತ್ತದೆ.
ಬೇರೆಯವರ ಬಗ್ಗೆ ಚಿಂತಿಸುವುದು, ಜಗಳ ಮಾಡುವುದು, ಅಸೂಯೆ ಪಡುವುದನ್ನು ಮಾಡಲೇ ಬಾರದು ಎಂದು ಹೇಳಲಾಗಿದೆ.
ಉಪವಾಸ ಮಾಡುವ ದಿನ ಮಧ್ಯಾಹ್ನದ ಸಮಯದಲ್ಲಿ ಮಲಗಬಾರದು.
ಉಪವಾಸದ ಸಂದರ್ಭದಲ್ಲಿ ಗಂಡ ಹೆಂಡತಿ ದೈಹಿಕ ಸಂಪರ್ಕ ಹೊಂದಬಾರದು.
ಹಾಸಿಗೆ ಮೇಲೆ ಮಲಗಬಾರದು, ಚಾಪೆಯ ಮೇಲೆ ಮಲಗುವುದು ಉತ್ತಮ ಎಂದು ಪರಿಗಣಿಸಲಾಗಿದೆ.
ಉಪವಾಸದ ದಿನದಂದು ಅನುಚಿತ ಸ್ಥಳಗಳಿಗೆ ಹೋಗಬಾರದು. ಉದಾಹರಣೆ: ಸ್ಮಶಾನ ಅಥವಾ ನಿರ್ಜನ ಪ್ರದೇಶಗಳಿಗೆ ಹೋಗಬಾರದು. ಅತ್ಯಂತ ಅವಶ್ಯಕತೆ ಇದ್ದಲ್ಲಿ ಮಾತ್ರ ಹೋಗಬಹುದು.
ಇಂತಹ ನಿಯಮಗಳನ್ನು ಪಾಲಿಸಿ ಉಪವಾಸ ವ್ರತ ಮಾಡುವುದರಿಂದ ಸಂಕಲ್ಪ ಈಡೇರುತ್ತವೆ ಎಂದು ಜ್ಯೋತಿಷ ಹೇಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.