ADVERTISEMENT

ಗಣೇಶ ಚತುರ್ಥಿ: ವಿವಿಧ ರೂಪಗಳಲ್ಲಿ ಕರಿಮುಖನ ದರ್ಶನ; ಇಲ್ಲಿದೆ ಚಿತ್ರ ಸಹಿತ ಮಾಹಿತಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 4:24 IST
Last Updated 25 ಆಗಸ್ಟ್ 2025, 4:24 IST
<div class="paragraphs"><p>ವಿವಿಧ ರೂಪಗಳಲ್ಲಿ ವಿನಾಯಕನ ದರ್ಶನ&nbsp;</p></div>

ವಿವಿಧ ರೂಪಗಳಲ್ಲಿ ವಿನಾಯಕನ ದರ್ಶನ 

   

ಗಜವದನ, ಹೇರಂಬ, ವಿನಾಯಕ, ಗಜಮುಖ ಹೀಗೆ ನಾನಾ ಹೆಸರುಗಳಿಂದ ಕರೆಯುವ ಕರಿಮುಖ ರೂಪವೂ ಹಲವು. ಎಲ್ಲರಿಗೂ ಅಚ್ಚುಮೆಚ್ಚಿನ ದೊಡ್ಡ ಹೊಟ್ಟೆ ಗಣಪನನ್ನು ಆಯಾ ಕಾಲಮಾನಕ್ಕೆ ತಕ್ಕಂತೆ, ಪ್ರಸ್ತುತ ಸನ್ನಿವೇಶಗಳಿಗೆ ಅನುಗುಣವಾಗಿ ಸಿದ್ಧಪಡಿಸುವ ಪರಿಪಾಠ ಹಿಂದಿನಿಂದಲೂ ನಡೆದುಕೊಂಡೇ ಬಂದಿದೆ. ಹೀಗಾಗಿ ಇಲ್ಲಿ ಗಣಪನ ಸಿದ್ಧಪಡಿಸುವ ಕಲಾವಿದರ ಉತ್ಸಾಹ, ನೆಚ್ಚಿನ ಗಣಪನ ಕಣ್ತುಂಬಿಕೊಳ್ಳುವ ಭಕ್ತರಿಗೆ ಗಣೇಶ ಚತುರ್ಥಿ ಸಂಭ್ರಮವೇ ಸರಿ. ಸಾವಿರದಿಂದ ಲಕ್ಷ ರೂಪಾಯಿಗಳವರೆಗೂ ಗಣೇಶನ ಹಲವು ಸ್ವರೂಪಗಳ ಮೂರ್ತಿಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ.

2025ರಲ್ಲಿ ಹೊಸ ಪರಿಕಲ್ಪನೆಯಡಿ ಯಾವೆಲ್ಲ ಗಣೇಶಗಳು ಮಾರುಕಟ್ಟೆಗೆ ಬಂದಿವೆ ಎಂಬ ಮಾಹಿತಿ ಇಲ್ಲಿದೆ.

ADVERTISEMENT

ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ಇತ್ತೀಚೆಗೆ ನಡೆಸಿದ 'ಆಪರೇಷನ್‌ ಸಿಂಧೂರ'ದ ಗೌರವಾರ್ಥವಾಗಿ ಸಿಂಧೂರ ಬಣ್ಣದ ಗಣೇಶ, ಪಾಂಡುರಂಗ, ತಿರುಮಲ, ಚಂದ್ರ, ಕೃಷ್ಣ, ಬಾಲಾಜಿ, ಸಾಯಿಬಾಬಾ ಸೇರಿದಂತೆ ವಿವಿಧ ದೇವತೆಗಳನ್ನು ಹೋಲುವ ಗಣಪನ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ.

1 ಸಿಂಧೂರ ಬಣ್ಣದ ಗಣೇಶ

ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಕುಂಕುಮದಿಂದ ಅಲಂಕೃತ ಗಣಪ ಈ ಬಾರಿಯ ವಿಶೇಷ.

2 ಕರಗವನ್ನು ಪ್ರತಿಬಿಂಬಿಸುವ ಗಣಪ

ಇತ್ತೀಚೆಗೆ ಅದ್ಧೂರಿಯಾಗಿ ನಡೆದ ಬೆಂಗಳೂರಿನ ಕರಗವನ್ನು ನೆನಪಿಸುವ, ಅದೇ ವಿನ್ಯಾಸ ಗಣಪ ಈ ವರ್ಷದ ವಿಶೇಷಗಳಲ್ಲೊಂದು. ಹಳದಿ ಬಣ್ಣದ ಸೀರೆ, ಶಿರದ ಮೇಲೆ ಹೂವಿನ ಕರಗ ಹೊತ್ತ 5 ಅಡಿ ಎತ್ತರದ ಈ ಗಣಪನನ್ನು ಭಕ್ತರು ಈ ಬಾರಿಯ ಗಣೇಶೋತ್ಸವದಲ್ಲಿ ಕಣ್ತುಂಬಿಕೊಳ್ಳಬಹುದು.

3. ಪಾಂಡುರಂಗ ಗಣಪ

ವಿಠಲ ಪಾಂಡುರಂಗನ ಪೋಷಾಕಿನಲ್ಲಿ ಈ ಬಾರಿ ಗಣೇಶ ಮೂರ್ತಿಯೊಂದು ಕಲಾವಿದರ ಕೈಚಳಕದಲ್ಲಿ ಅರಳಿದೆ. ಬಟ್ಟೆಯ ಮುಂಡಾಸ, ಅದಕ್ಕೆ ಮುತ್ತು, ಮಣಿಗಳ ಅಲಂಕಾರದಿಂದ ಗಣಪನ ಅಂದ ಇನ್ನಷ್ಟು ಹೆಚ್ಚಾಗಿದೆ. ವಿಠಲನಂತೆಯೇ ಅಲಂಕೃತಗೊಂಡ ಈ ಗಣೇಶನ ಮೂರ್ತಿ 6 ಅಡಿ ಎತ್ತರವಿದೆ.

4. ಬಾಲಾಜಿ ಗಣೇಶ

ಈ ಗಣೇಶನ ಮುಖ್ಯ ಆಕರ್ಷಣೆ ಕಿರೀಟ. ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಕಿರೀಟವನ್ನು ಹೋಲುವಂತಹ ಮಾದರಿಯನ್ನು ಗಣಪನಿಗೆ ಇಡಲಾಗಿದೆ. ಶ್ವೇತ ವರ್ಣದ ಪಂಚೆಯನ್ನು ತೊಟ್ಟು ಕುಳಿತಿರುವ ಗಣೇಶ 3 ಅಡಿ ಎತ್ತರವಿದೆ. 

5. ಸಾಯಿ ಬಾಬಾ ಗಣೇಶ

ಸಾಯಿಬಾಬಾನ ಆಕಾರದಲ್ಲಿ ಕೇಸರಿಯ ವಸ್ತ್ರವನ್ನು ತೊಟ್ಟು ಕಲ್ಲಿನ ಮೇಲೆ ಕುಳಿತುಕೊಂಡಿರುವ ಮಾದರಿಯಲ್ಲಿ ಗಣೇಶನನ್ನು ಸಿದ್ಧಪಡಿಸಲಾಗಿದೆ.

6. ಶಿವ ಗಣೇಶ

ಶಿವನನ್ನೇ ಹೋಲುವಂತಹ ಗಣೇಶನನ್ನು ನೀಲಕಂಠನ ಸ್ವರೂಪವನ್ನು ಹೋಲುವ ಮಾದರಿಯಲ್ಲಿ ತಯಾರಿಸಲಾಗಿದೆ. ಈ ಗಣಪ 6 ಅಡಿ ಎತ್ತರವಿದೆ. 

7. ರಾಮಲೀಲಾ ಗಣೇಶ

ಕಂದು ಬಣ್ಣದ ಉಡುಗೆಯಲ್ಲಿ ರಾಮಲೀಲಾ ಮಾದರಿಯ 6 ಅಡಿ ಎತ್ತರದ ಗಣಪನನ್ನು ಈ ಬಾರಿ ಕಣ್ತುಂಬಿಕೊಳ್ಳಬಹುದಾಗಿದೆ.

ಈ ಮೇಲೆ ಹೇಳಲಾದ ಗಣೇಶಗಳು 2025ರ ಹೊಸ ಮಾದರಿಯ ಗಣೇಶಗಳಾಗಿವೆ. ಇವುಗಳನ್ನು ಹೊರತು ಪಡಿಸಿ ವಿಭಿನ್ನವಾದ ಗಣೇಶಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ ಎಂದು ಹೇಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.