ADVERTISEMENT

ಕೂಷ್ಮಾಂಡ ದೇವಿಯ ಒಲುಮೆ ನಿಮ್ಮದಾಗಬೇಕಾ? ಈ ಆಹಾರ ನೈವೇದ್ಯ ಮಾಡಿ

ಎಲ್.ವಿವೇಕಾನಂದ ಆಚಾರ್ಯ
Published 25 ಸೆಪ್ಟೆಂಬರ್ 2025, 7:12 IST
Last Updated 25 ಸೆಪ್ಟೆಂಬರ್ 2025, 7:12 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ನವರಾತ್ರಿಯ 4ನೇ ದಿನದಂದು ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಿಯ ಆರಾಧನೆ ಮಾಡುವಾಗ ವಿಶೇಷವಾಗಿ ಈ ಆಹಾರಗಳಿಂದ ನೈವೇದ್ಯ ಮಾಡಬೇಕು ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.‌

‌ಸೃಷ್ಟಿಯ ಮೂಲ ಎಂದೇ ಕರೆಯಲಾಗುವ ಕೂಷ್ಮಾಂಡ ದೇವಿಯು ಸಕಾರಾತ್ಮಕ ಮನೋಭಾವದ ದೇವಿಯಾಗಿದ್ದಾಳೆ. ಆದ್ದರಿಂದ ಈ ದೇವಿಯನ್ನು ಪೂಜಿಸುವುದರಿಂದ ಖಾಯಿಲೆಗಳು ಮಾಯವಾಗುತ್ತವೆ ಎಂದು ನಂಬಲಾಗಿದೆ. ಕೂಷ್ಮಾಂಡ ದೇವಿಗೆ ಪ್ರಿಯವಾದ ಆಹಾರ ಪದಾರ್ಥಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ADVERTISEMENT

ಮುಖ್ಯವಾಗಿ ಕೂಶ್ಮಾಂಡ ದೇವಿಗೆ ಮಲ್ಲಿಗೆ ಹೂ ಹೆಚ್ಚು ಪ್ರಿಯವಾದದ್ದು. ಪೂಜೆಯಲ್ಲಿ ಮಲ್ಲಿಗೆ ಅಥವಾ ಸೂಜಿ ಮಲ್ಲಿಗೆ ಹೂವನ್ನಿಟ್ಟು ಪೂಜಿಸಬೇಕು. ಅದರ ಜೊತೆಗೆ ನೆಲ್ಲಿ ಎಲೆಯಿಂದ ತಯಾರು ಮಾಡಿದ ಹಾರವನ್ನು ದೇವಿಗೆ ಸಮರ್ಪಣೆ ಮಾಡುವುದು ಉತ್ತಮ. ಹಸಿರು ಬಣ್ಣ ಸುಖ, ಶಾಂತಿ, ನೆಮ್ಮದಿಯ ಸಂಕೇತವೂ ಹೌದು. 

ನೈವೇದ್ಯಕ್ಕೆ ಇಡಬೇಕಾದ ಪದಾರ್ಥಗಳು ಯಾವುವು? 

  • ದೇವಿಗೆ ಸಿಹಿ ಪದಾರ್ಥಗಳನ್ನು ಅರ್ಪಣೆ ಮಾಡುಬೇಕು. ಅದರಲ್ಲೂ ಸಕ್ಕರೆ ಮತ್ತು ಮೈದಾದಿಂದ ತಯಾರಿಸಿದ ಮಾಲ್ಪುರಿ ಬಹಳ ಪ್ರಿಯವಾದದ್ದು.

  • ಬೂದ ಕುಂಬಳದಿಂದ ಮಾಡಿದ ಪದಾರ್ಥಗಳು ಹಾಗೂ ಇತರೆ ಸಿಹಿ ತಿಂಡಿಗಳನ್ನು ಇಡಬಹುದು.

  • ಹೆಸರುಕಾಳಿನ ಉಸ್ಲಿ, ಹಾಲು ಹಾಗೂ ಪಾಯಸಗಳನ್ನು ಇಟ್ಟು ದೇವಿಗೆ ನೈವೇದ್ಯ ಮಾಡುವುದರಿಂದ ಸರ್ವಸಿದ್ಧಿ ಪ್ರಾಪ್ತಿಯಾಗುತ್ತದೆ.

ಪೂಜೆಯ ಸರಳ ಮಂತ್ರ:

’ಮಂತ್ರ ಓಂ ದೇವಿ ಕೂಷ್ಮಾಂಡ ನಮಃ 

ಓಂ ಶ್ರೀಂ ಕೂಷ್ಮಾಂಡದೇವಿ ನಮಃ 

ಓಂ ಪದ್ಮಾಯೇ ನಮಃ

ಓಂ ಕಮಲಾಯೇ ನಮಃ

ಓಂ ಕರುಣಾಯಯೇ ನಮಃ 

ಓಂ ಪದ್ಮ ಪರ್ಯಾಯೇ ನಮಃ 

ಯಾ ದೇವಿ ಸರ್ವಭೂತೇಶುಮಾ ಕೂಷ್ಮಾಂಡ ರೂಪೇಣ ಸಮಸ್ಥಿತ

ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.