ADVERTISEMENT

ಕರ್ನಾಟಕದ ಈ ದೇವಾಲಯ ಸೇರಿ, 1000 ವರ್ಷ ಪೂರೈಸಿರುವ ಭಾರತದ ಪುರಾತನ ಮಂದಿರಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2025, 12:47 IST
Last Updated 17 ಡಿಸೆಂಬರ್ 2025, 12:47 IST
<div class="paragraphs"><p>ಚಿತ್ರ: ಪ್ರಜಾವಾಣಿ</p></div>
   

ಚಿತ್ರ: ಪ್ರಜಾವಾಣಿ

ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಪತ್ರಿಯೊಂದು ಒಂದೊಂದು ರೀತಿಯ ವಿಭಿನ್ನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿವೆ. ಇಂದಿಗೆ ಸಾವಿರಾರು ವರ್ಷಗಳ ಹಿಂದೆ ನಿರ್ಮಾಣಗೊಂಡ ಅನೇಕ ದೇವಾಲಯಗಳು ನಮ್ಮಲಿವೆ. ಅವುಗಳ ನಿರ್ಮಾಣದ ಕಥೆ ಇಂದಿಗೂ ರೋಚಕ. ಹಾಗಾದರೆ ಭಾರತದಲ್ಲಿರುವ ದೇವಾಲಯಗಳ ಪೈಕಿ 1000 ವರ್ಷ ಪೂರೈಸಿದ ಪ್ರಮುಖ ದೇವಾಲಯಗಳನ್ನು ನೋಡೋಣ. 

ಕೊನಾರ್ಕ್ ಸೂರ್ಯ ದೇವಾಲಯ:‌

ಕೊನಾರ್ಕ್ ಸೂರ್ಯ ದೇವಾಲಯ ಒಡಿಶಾದ ಪುರಿ ಜಿಲ್ಲೆಯಲಿದೆ. ಈ ದೇವಾಲಯವನ್ನು ಕ್ರಿ.ಶ 1250ರಲ್ಲಿ ಗಂಗ ರಾಜವಂಶದ ಅರಸ ನರಸಿಂಗ ದೇವನ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಇತಿಹಾಸ ಹೇಳುತ್ತದೆ. ಕಳಿಂಗ ವಾಸ್ತುಶಿಲ್ಪ ಶೈಲಿಯಲ್ಲಿರುವ ದೇವಾಲಯದ ಕೆಲವು ಭಾಗಗಳು ಶಿಥಿಲಗೊಂಡಿದೆ. ಈ ದೇವಾಲಯ 1984ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸಿದೆ. 

ADVERTISEMENT

ಬೃಹದೀಶ್ವರ ದೇವಾಲಯ

ದಕ್ಷಿಣ ಭಾರತದ ತಮಿಳುನಾಡಿನಲ್ಲಿರುವ ಬೃಹದೀಶ್ವರ ದೇವಾಲಯ‌ವು ಚೋಳರ ಕಾಲದಲ್ಲಿ ನಿರ್ಮಾವಾಗಿದೆ. ಈ ದೇವಾಲಯ 1000 ವರ್ಷಗಳನ್ನು ಪೂರೈಸಿದೆ. ದೇವಾಲಯದ ನಿರ್ಮಾಣ ಕ್ರಿ.ಶ 1003 ರಿಂದ ಕ್ರಿ.ಶ 1010ರ ನಡುವೆ ಆಗಿರುವ ಸಾಧ್ಯತೆ ಇದೆ. ದ್ರಾವಿಡ ಶೈಲಿಯಲ್ಲಿರುವ ಈ ದೇವಾಲಯ ಶೈವ ಹಾಗೂ ವೈಷ್ಣವ ಧರ್ಮಕ್ಕೆ ಸೇರಿದೆ.

ಕೈಲಾಸ ದೇವಾಲಯ

ಈ ದೇವಾಲಯ ಕರ್ನಾಟಕದ ಎಲ್ಲೋರದಲ್ಲಿದೆ. ಈ ದೇವಾಲಯದ ನಿರ್ಮಾಣದ ಕುರಿತು ಇಂದಿಗೂ ವಿಜ್ಞಾನಿಗಳಲ್ಲಿ ಸಾಕಷ್ಟು ಕುತೂಹಲಗಳಿವೆ. ರಾಷ್ಟ್ರಕೂಟರ ಅರಸ ಒಂದನೇ ಕೃಷ್ಣ (ಕ್ರಿ.ಶ 756 ದಿಂದ 773 ಕ್ರಿ.ಶ) ದೇವಾಲಯದ ನಿರ್ಮಾಣ ಕಾರ್ಯವನ್ನು ಆರಂಭಿಸಿದನು ಎಂದು ಹೇಳಲಾಗುತ್ತದೆ. ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯ ಮತ್ತು ಕಾಂಚಿಯ ಕೈಲಾಸ ದೇವಾಲಯಗಳ ವಾಸ್ತುಶೈಲಿಯನ್ನು ಈ ದೇವಾಲಯ ಒಳಗೊಂಡಿದೆ. ಈ ದೇವಾಲಯ ವಿಶ್ವದ ಅತಿದೊಡ್ಡ ಏಕಶಿಲೆಯ ರಚನೆಗಳಲ್ಲಿ ಒಂದಾಗಿದೆ.

ಶೋರ್‌ ದೇವಾಲಯ

ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಶೋರ್ ದೇವಾಲಯವನ್ನು 8ನೇ ಶತಮಾನದಲ್ಲಿ ಪಲ್ಲವ ರಾಜ ಎರಡನೇ ನರಸಿಂಹ ವರ್ಮನ್‌ ಕಾಲದಲ್ಲಿ ನಿರ್ಮಿಸಲಾಗಿದೆ. ಗ್ರಾನೈಟ್ ಕಲ್ಲಿನಿಂದ ನಿರ್ಮಾಣವಾದ ಈ ದೇವಾಲಯವು ವಿಶೇಷವಾಗಿ 3 ಗರ್ಭಗುಡಿಗಳನ್ನು ಹೊಂದಿದೆ. ಶಿವ ಹಾಗೂ ವಿಷ್ಣುವಿಗೆ ಸಮರ್ಪಿತವಾದ ದೇವಾಲಯ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಜಗನ್ನಾಥ ದೇವಾಲಯ

ಒಡಿಶಾದ ಪುರಿಯಲ್ಲಿರುವ ಈ ದೇವಾಲಯವನ್ನು ಗಂಗಾ ರಾಜವಂಶದ ರಾಜ ಅನಂತವರ್ಮನ್ ಚೋಡಗಂಗ 11 ನೇ ಶತಮಾನದಲ್ಲಿ ನಿರ್ಮಾಣ ಮಾಡಿದನು ಎಂದು ಹೇಳಲಾಗುತ್ತದೆ. ದೇವಾಲಯದ ನಿರ್ಮಾಣ ಕ್ರಿ.ಶ 1112 ನಂತರ ಪ್ರಾರಂಭವಾಗಿರಬೇಕು ಎಂದು ಇತಿಹಾಸ ತಜ್ಞರು ಹೇಳುತ್ತಾರೆ. 

ವಿರೂಪಾಕ್ಷ ದೇವಾಲಯ

ಕರ್ನಾಟಕದ ಪ್ರಸಿದ್ಧ ಸ್ಥಳವಾದ ಹಂಪಿಯಲ್ಲಿರುವ ವಿರೂಪಾಕ್ಷ ದೇವಾಲಯವು  1000 ವರ್ಷ ಪೂರೈಸಿದ ದೇವಾಲಯಗಳಲ್ಲಿ ಒಂದು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ತುಂಗಭದ್ರಾ ನದಿಯ ದಡದಲ್ಲಿ ದೇವಾಲಯದ ನಿರ್ಮಾಣವಾಯಿತು. ಈ ದೇವಾಲಯ ನಿರ್ಮಾಣದ ಹಿಂದೆ ವಿಜಯನಗರ ಸಾಮ್ರಾಜ್ಯದ ವಿವಿಧ ಅರಸರ ಕೊಡುಗೆ ಇದೆ ಎಂದು ಇತಿಹಾಸ ಹೇಳುತ್ತದೆ. ವಿಶ್ವದ ಪರಂಪರಿಕ ಸ್ಥಾನದ ಪಟ್ಟಿಯಲ್ಲಿ ಈ ದೇವಾಲಯವಿದೆ. ಇದರ ನಿರ್ಮಾಣ 7ನೇ ಶತಮಾನ ಎಂದು ಹೇಳಲಾಗುತ್ತದೆ.

ಲಿಂಗರಾಜ ದೇವಾಲಯ

ಒಡಿಶಾದಲ್ಲಿರುವ ಲಿಂಗರಾಜ ದೇವಾಲಯವನ್ನು ಸೋಮವಂಶದ ರಾಜರಿಂದ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ. ದೇವಾಲಯವು ವಿಮಾನಾ,  ಜಗೋಮೋಹನ, ನಟಮಂದಿರ ಹಾಗೂ ಭೋಗ ಮಂಟಪ ಎಂಬ 4 ಭಾಗಗಳಿಂದ ಕೂಡಿದೆ.  ದೇವಾಲಯ 108 ಇತರ ದೇವಾಲಯಗಳನ್ನು‌ ಹೊಂದಿದೆ. 11 ರಿಂದ 12 ನೇ ಶತಮಾನದ ಹಾಸುಪಾಸಿನಲ್ಲಿ ನಿರ್ಮಾಣವಾದ ಕಾಳಿಂಗ ಶೈಲಿಯ ದೇವಾಲಯ ಎಂದು ಹೇಳಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.