ADVERTISEMENT

ತುಳಸಿ: ಇದು ಸಸ್ಯ ಮಾತ್ರವಲ್ಲ, ಕುಟುಂಬದ ಏರು ಪೇರುಗಳ ಸೂಚಕ

ಎಲ್.ವಿವೇಕಾನಂದ ಆಚಾರ್ಯ
Published 9 ಡಿಸೆಂಬರ್ 2025, 0:27 IST
Last Updated 9 ಡಿಸೆಂಬರ್ 2025, 0:27 IST
<div class="paragraphs"><p>ಚಿತ್ರ;ಎಐ</p></div>
   

ಚಿತ್ರ;ಎಐ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ತುಳಸಿ ಗಿಡ ಶುಭ, ಅಶುಭಗಳ ಮುನ್ಸೂಚನೆಯನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ತುಳಸಿ ಗಿಡ ಮನೆಗೆ ರಕ್ಷಣೆ ಇದ್ದಂತೆ. ಮನೆಗೆ ಯಾವ ದುಷ್ಟ ಶಕ್ತಿಗಳು ಬಾರದಂತೆ ತಡೆದು ಮನೆಯ ಸದಸ್ಯರಿಗೆ ರಕ್ಷಣೆ ನೀಡುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ.

  • ಮನೆಯ ಅಂಗಳದಲ್ಲಿ ತುಳಸಿಗಿಡ ಇದ್ದರೆ, ಧನ, ಧಾನ್ಯದ ಕೊರತೆ ಉಂಟಾಗುವುದಿಲ್ಲ. ವಾಸ್ತು ದೋಷಗಳನ್ನು ತುಳಸಿಗಿಡ ದೂರ ಮಾಡುತ್ತದೆ.

    ADVERTISEMENT
  • ವಾಸ್ತು ಶಾಸ್ತ್ರದ ಪ್ರಕಾರ ಒಣಗಿದ ತುಳಸಿ ಗಿಡವು ದುಃಖ ಮತ್ತು ವೇದನೆಯನ್ನು ಸೂಚಿಸುತ್ತದೆ. ಆದ್ದರಿಂದ ಒಣಗಿದ ತುಳಸಿಯನ್ನು ತೆಗೆದು ಹಾಕಿ ಇನ್ನೊಂದು ಗಿಡವನ್ನು ನೆಡಬೇಕು.

  • ತುಳಸಿ ಗಿಡದ ಹಸಿರು ಎಲೆಗಳು ಇದ್ದಕ್ಕಿದ್ದಂತೆ ಉದುರುವುದಕ್ಕೆ ಪ್ರಾರಂಭಿಸಿದರೆ, ಅಶುಭವೆಂದು ಹೇಳಲಾಗುತ್ತದೆ. ಇದು ಮನೆಯಲ್ಲಿ ಕಲಹ ಮತ್ತು ವಿಭಜನೆಯಂತಹ ತೊಂದರೆಗಳನ್ನು ಉಂಟು ಮಾಡುತ್ತದೆ. ಇದರಿಂದ ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. 

  • ತುಳಸಿ ಗಿಡದ ಬಳಿ ಸಣ್ಣ ತುಳಸಿ ಸಸಿಗಳು ಬೆಳೆಯಲು ಪ್ರಾರಂಭಿಸಿದರೆ, ಶುಭ ಶಕುನವೆಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ನೆಲೆಸಲಿದೆ. ವ್ಯಾಪಾರದಲ್ಲಿ ಪ್ರಗತಿಯಾಗಲಿದೆ. ಜೊತೆಗೆ ತುಳಸಿ ಮಾತೆಯ ಆಶೀರ್ವಾದ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

  • ತುಳಸಿ ಗಿಡದ ಬಳಿ ಇರುವೆ, ಜಿರಳೆಗಳಂತಹ ಸಣ್ಣ ಜೀವಿಗಳು ಮನೆ ಮಾಡಿಕೊಂಡರೆ, ಶಾಸ್ತ್ರದ ಪ್ರಕಾರ ಅಶುಭವೆಂದು ಹೇಳುತ್ತಾರೆ.

  • ತುಳಸಿ ಗಿಡದ ಮೇಲೆ ಪಕ್ಷಿಗಳು ಕುಳಿತುಕೊಳ್ಳುವುದನ್ನು ಅತ್ಯಂತ ಶುಭ ಶಕುನ ವೆಂದು ಹೇಳಲಾಗುತ್ತದೆ. ಇದರಿಂದ ಶೀಘ್ರದಲ್ಲಿಯೇ ನಿಮಗೆ ಲಾಭವಾಗಲಿದೆ ಮತ್ತು ನಿಮ್ಮ ಕೋರಿಕೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.

  • ತುಳಸಿ ಗಿಡ ಇರುವ ಮನೆಯಲ್ಲಿ ಪೂಜೆ, ಪುನಸ್ಕಾರ ನಡೆಯಬೇಕು. ವಾರಕ್ಕೆ ಒಮ್ಮೆಯಾದರೂ ಮನೆಯನ್ನು ಗಂಜಲದಿಂದ ಶುಚಿಗೊಳಿಸಿ ಧೂಪ ಹಾಕಬೇಕು.

  • ಮನೆಯಲ್ಲಿ ಸಾವಾಗಿದ್ದರೆ, ಸೂತಕವಿದ್ದರೆ, ಅಕ್ಕ ಪಕ್ಕದ ಮನೆಯ ಮಕ್ಕಳ ಕೈಯಲ್ಲಿ ತುಳಸಿಗೆ ನೀರನ್ನು ಹಾಕಿಸಬೇಕು. 

ಪ್ರತಿದಿನ ತುಳಸಿಗಿಡದ ಮುಂದೆ ದೀಪ ಹಚ್ಚಿ ಪ್ರಾರ್ಥಿಸುವುದರಿಂದ ಮನಸ್ಸಿಗೆ ಶಾಂತಿ ಹಾಗೂ ಕುಟುಂಬಕ್ಕೆ ಕೆಟ್ಟ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.