ಬೆಂಗಳೂರು: ಡ್ರೋನ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಾರಿಗೆ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಕೈಗೊಳ್ಳಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯ ಸಂಶೋಧನಾ ವಿಜ್ಞಾನಿ ಎಸ್. ಎನ್. ಓಂಕಾರ್ ಸಲಹೆ ನೀಡಿದರು.
ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್‌ಗಳ ದಿನದ ಅಂಗವಾಗಿ ಸ್ಥಿರ ನಾಗರಿಕ ಮೂಲಸೌಕರ್ಯಕ್ಕಾಗಿ ಡ್ರೋನ್ ಮತ್ತು ಜಿಯೊಸ್ಪೇಶಿಯಲ್ ತಂತ್ರಜ್ಞಾನಗಳು: ಆಧುನಿಕ ಇಂಜಿನಿಯರಿಂಗ್ ಅಭ್ಯಾಸಗಳ ಮೂಲಕ ಸುಸ್ಥಿರ ಅಭಿವೃದ್ದಿ ಗುರಿ’ ಕುರಿತ ರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಡ್ರೋನ್‌ಗಳನ್ನು ಈಗ ಹಲವಾರು ವಲಯಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಸಾರಿಗೆ ವಲಯದಲ್ಲೂ ಇವುಗಳ ಬಳಕೆಗೆ ವಿಪುಲ ಅವಕಾಶಗಳಿದ್ದು, ವಿಜ್ಞಾನಿಗಳು ಈ ನಿಟ್ಟಿನಲ್ಲೂ ಕೆಲಸ ಮಾಡಬೇಕು ಎಂದರು.
ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕಿ ನಿಶಾ ರಾಣಿ ಅವರು, ಭೂವೈಜ್ಞಾನಿಕ ನಕ್ಷೆ, ಖನಿಜ ಅನ್ವೇಷಣೆ, ಪೈಪ್‌ಲೈನ್‌ಗಳು ಮತ್ತು ಸುರಂಗ ನಿರ್ಮಾಣಕ್ಕಾಗಿ ಅಗತ್ಯವಾದ ಭೂಗರ್ಭ ಮಾಹಿತಿ ಸಂಗ್ರಹಣೆಯಲ್ಲಿ ಡ್ರೋನ್‌ಗಳ ಉಪಯೋಗಗಳ ಬಗ್ಗೆ ವಿವರಿಸಿದರು.
ಇಸ್ರೊ ಮಾಜಿ ವಿಜ್ಞಾನಿ ಗಣೇಶ್ ರಾಜ, ಉಪಪ್ರಾಂಶುಪಾಲ ಎಚ್. ಕೆ. ರಾಮರಾಜು, ತಹೇರಾ, ಎಸ್. ಎಸ್.ಸ್ಪೂರ್ತಿ, ಜಿ. ವೆಂಕಟೇಶ, ಡಾ. ಎ.ವಿನಯ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.