ADVERTISEMENT

ವಾರಾಂತ್ಯ ಲಾಕ್‌ಡೌನ್‌: ಮೆಟ್ರೊ ಸೇವೆ ಸಮಯ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 11:00 IST
Last Updated 5 ಜನವರಿ 2022, 11:00 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ   

ಬೆಂಗಳೂರು: ನಗರದಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವಾಗಲೂ 'ನಮ್ಮ ಮೆಟ್ರೊ' ಸೇವೆಯನ್ನು ಮುಂದುವರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ನಿರ್ಧರಿಸಿದೆ.

‘ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ನಮ್ಮ ಮೆಟ್ರೊ ರೈಲುಗಳ ಸಂಚಾರ ಇರಲಿದೆ. ಆದರೆ ರೈಲು ಸಂಚಾರದ ಸಮಯವನ್ನು ಪರಿಷ್ಕರಿಸಲಾಗಿದೆ’ ಎಂದು ನಿಗಮವು ತಿಳಿಸಿದೆ.

‘ನಾಗಸ೦ದ್ರ, ರೇಷ್ಮೆ ಸ೦ಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ಟರ್ಮಿನಲ್‌ ವಿಲ್ದಾಣಗಳಿ೦ದಶನಿವಾರ ಮತ್ತು ಭಾನುವಾರ ಬೆಳಿಗ್ಗೆ 8ರಿಂದ ರಾತ್ರಿ 9 ಗಂಟೆಯವರೆಗೆ ಮೆಟ್ರೊ ರೈಲು ಸೇವೆ ಇರಲಿದೆ. ಟರ್ಮಿನಲ್‌ ನಿಲ್ದಾಣಗಳಿಂದ ಪ್ರತಿ 20 ನಿಮಿಷಗಳಿಗೆ ಒಂದು ರೈಲು ಹೊರಡಲಿದೆ. ಟರ್ಮಿನಲ್‌ ನಿಲ್ದಾಣದಿಂದ ದಿನದ ಕೊನೆಯ ರೈಲು ರಾತ್ರಿ 9 ಗಂಟೆಗೆ ಹೊರಡಲಿದೆ’ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ADVERTISEMENT

‘ಸೋಮವಾರದಿಂದ ಗುರುವಾರದವರೆಗೆ ಮೆಟ್ರೊ ಸೇವೆ ಈಗಿನಂತೆಯೇ ಮುಂದುವರಿಯಲಿದೆ. ಈ ದಿನಗಳಲ್ಲಿ ಬೆಳಿಗ್ಗೆ 5 ಗಂಟೆಗೆ ರೈಲು ಸಂಚಾರ ಆರಂಭವಾಗಲಿದೆ. ಟರ್ಮಿನಲ್‌ ನಿಲ್ದಾಣಗಳಿಂದ ರಾತ್ರಿ 11 ಗಂಟೆಗೆ ದಿನದ ಕೊನೆಯ ರೈಲುಗಳು ಹೊರಡಲಿವೆ. ರಾತ್ರಿ 10 ಗ೦ಟೆಯ ನ೦ತರ ರೈಲುಗಳ ಸಂಖ್ಯೆ ಕಡಿಮೆ ಇರಲಿದೆ. ಟರ್ಮಿನಲ್‌ ವಿಲ್ದಾಣಗಳಿಂದ ಶುಕ್ರವಾರದ ಕೊನೆಯ ರೈಲು ರಾತ್ರಿ 11ರ ಬದಲು ರಾತ್ರಿ 10 ಗ೦ಟೆಗೆ ಹೊರಡಲಿದೆ’ ಎಂದು ನಿಗಮವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.