ADVERTISEMENT

PHOTOS | ಮಬ್ಬುಗತ್ತಲಿನ, ಇಬ್ಬನಿ ತುಂಬಿದ ನಂದಿ ಬೆಟ್ಟ...

ಡಿ.ಜಿ.ಮಲ್ಲಿಕಾರ್ಜುನ
Published 14 ಫೆಬ್ರುವರಿ 2026, 7:11 IST
Last Updated 14 ಫೆಬ್ರುವರಿ 2026, 7:11 IST
<div class="paragraphs"><p>ಪ್ರೇಮಿಗಳ ದಿನದ ಪ್ರಯುಕ್ತ ನಂದಿಬೆಟ್ಟ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.&nbsp;</p></div>

ಪ್ರೇಮಿಗಳ ದಿನದ ಪ್ರಯುಕ್ತ ನಂದಿಬೆಟ್ಟ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. 

   

ಪ್ರಜಾವಾಣಿ ಚಿತ್ರ

ಫೆಬ್ರುವರಿ 14 ಪ್ರೇಮಿಗಳ ದಿನ

ADVERTISEMENT

ಈ ದಿನ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹಂಚಿಕೊಂಡು ಸಡಗರದಿಂದ ಸಂಭ್ರಮಿಸುತ್ತಾರೆ. ಪ್ರೇಮಿಗಳು ಪ್ರೀತಿಯ ಸಂಕೇತವಾದ ಗುಲಾಬಿ ಹೂ, ಚಾಕೋಲೇಟ್ ನೀಡಿ ಪರಸ್ಪರ ತಮ್ಮ ಪ್ರೀತಿಯ ನಿವೇದನೆ ಮಾಡಿಕೊಂಡು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ವ್ಯಾಲೆಂಟೈನ್ಸ್ ಡೇ ಸಂಭ್ರಮಕ್ಕೆ ನಂದಿಬೆಟ್ಟದತ್ತ ಜೋಡಿಗಳ ಪ್ರಯಾಣ

ಈ ದಿನ ಯುವಕ-ಯುವತಿಯರು ಪ್ರವಾಸಿತಾಣಗಳಿಗೆ ಭೇಟಿ ನೀಡಿ ಪ್ರಕೃತಿಯ ನಡುವೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇಚ್ಛಿಸುತ್ತಾರೆ. ಅನೇಕ ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರದ ನಂದಿ ಬೆಟ್ಟಕ್ಕೆ ಹೋಗಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಬೇಕೆಂದು ಯೋಜಿಸುತ್ತಾರೆ.

ಮಂಜು, ಮಬ್ಬುಗತ್ತಲಿನ ಇಬ್ಬನಿಯಿಂದ ಕೂಡಿರುವ ನಂದಿಬೆಟ್ಟವು ಅನೇಕ ಪ್ರೇಮಿಗಳ ನೆಚ್ಚಿನ ತಾಣವೂ ಆಗಿದೆ.

ಪ್ರೇಮಿಗಳಿಗೆ ಈ ಬಾರಿ ನಂದಿ ಗಿರಿಧಾಮಕ್ಕೆ ಫೆ.14ಕ್ಕೆ (ಇಂದು) ಪ್ರವೇಶ ನಿರ್ಬಂಧಿಸಲಾಗಿದೆ.

ಸಾವಿರಾರು ಸಂಖ್ಯೆಯಲ್ಲಿ ಪ್ರೇಮಿಗಳು, ಪ್ರವಾಸಿಗರು ನಂದಿ ಗಿರಿಧಾಮಕ್ಕೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ನಂದಿ ಗಿರಿಧಾಮದ ಪ್ರವೇಶ ತಡೆಹಿಡಿಯಲಾಗಿದೆ. 

ನಂದಿ ಬೆಟ್ಟಕ್ಕೆ ಇಂದು(ಫೆ.14) ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಪ್ರವಾಸಿಗರಿಗೆ ಹಾಗೂ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.